ಡೊಂಬಿವಲಿಯಲ್ಲಿ  ಶ್ರೀನಿವಾಸ ಮಂಗಲ ಮಹೋತ್ಸವ

Team Udayavani, Dec 8, 2018, 3:38 PM IST

0712mum01.jpg

ಡೊಂಬಿವಲಿ: ವಿರಾರ್‌ ಶ್ರೀ ಸಾಯಿ ಧಾಮ ಮಂದಿರ ಟ್ರಸ್ಟ್‌ ವತಿಯಿಂದ ತಿರುಪತಿ ತಿರುಮಲ ದೇವಸ್ಥಾನದ ಪುರೋಹಿತರ ಪೌರೋಹಿತ್ಯದಲ್ಲಿ ಕಲ್ಯಾಣ್‌ನ ಸಂಸದ ಡಾ| ಶ್ರೀಕಾಂತ್‌ ಏಕನಾಥ್‌ ಶಿಂಧೆ ಮತ್ತು ಡೊಂಬಿವಲಿ ಶಾಸಕ ಸುಭಾಷ್‌ ಭೋಯಿರ್‌ ಅವರ ನೇತೃತ್ವದಲ್ಲಿ  ಡೊಂಬಿವಲಿ ಪೂರ್ವದ ಘಾರ್‌ಡಾ ಸರ್ಕಲ್‌, ಪೆಡೆ°àಕರ್‌ ಕಾಲೇಜು ಸಮೀಪದ ಸಾವಳರಾಮ್‌ ಮಹಾರಾಜ್‌ ಮ್ಹಾತ್ರೆ ಕ್ರೀಡಾಂಗಣದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀನಿವಾಸ ದೇವರ -ಪದ್ಮಾವತಿ ದೇವಿ-ಭೂದೇವಿಯ ಶ್ರೀನಿವಾಸ ಕಲ್ಯಾಣ ಮಹೋತ್ಸವ   ನಡೆಯಿತು.

ಸಮಾಜ ಸೇವಕ, ಉದ್ಯಮಿ ವಿರಾರ್‌ ಶಂಕರ್‌ ಶೆಟ್ಟಿ ಅವರ ಮುಂದಾಳತ್ವದಲ್ಲಿ, ಡೊಂಬಿವಲಿಯ ಹೊಟೇಲ್‌ ಅಸೋಸಿಯೇಶನ್‌ ಇದರ ಪದಾಧಿಕಾರಿಗಳು, ಡೊಂಬಿವಲಿ ಪರಿಸರದ ತುಳು- ಕನ್ನಡಿಗರ ಸಂಘ-ಸಂಸ್ಥೆಗಳ   ಸಹಕಾರ ದೊಂದಿಗೆ ನಡೆದ ಮಹೋತ್ಸವದಲ್ಲಿ ಸಂಜೆ ತಿರುಪತಿ ತಿರುಮಲ ದೇವಸ್ಥಾನದ ಪ್ರಧಾನ ಅರ್ಚಕ ವಿದ್ವಾನ್‌ ಸಿ. ಆರ್‌. ಆನಂದ ತೀರ್ಥಾಚಾರ್ಯರ ನೇತೃತ್ವದಲ್ಲಿ ಶ್ರೀನಿವಾಸ ದೇವರಿಗೆ ಪ್ರಿಯವಾದ ತಿರುಮಂಜನ ಅಭಿಷೇಕ, ಪುಷ್ಪಯಾಗ ನಡೆಯಿತು. ವಿವಿಧ ಪೂಜಾದಿಗಳನ್ನು ತಿರುಪತಿಯಿಂದ ಆಗಮಿಸಿದ ಪುರೋಹಿತ ವರ್ಗದರು ನಡೆಸಿಕೊಟ್ಟರು.

ಶಿವಸೇನಾ ಕಾರ್ಯಾಧ್ಯಕ್ಷ ಉದ್ಧವ್‌ ಠಾಕ್ರೆ ಮತ್ತು ಶಿವಸೇನೆಯ ಯುವ ನಾಯಕ ಆದಿತ್ಯ ಠಾಕ್ರೆ ಅವರು ಥಾಣೆಯ ಉಸ್ತುವಾರಿ ಸಚಿವ ಏಕನಾಥ ಶಿಂಧೆ ಅವರೊಂದಿಗೆ ವೇದಿಕೆಗೆ ಆಗಮಿಸಿದಾಗ ಸೇರಿದ ಸಾವಿರಾರು ಜನರ ಹರ್ಷೋದ್ಧಾರ ಮುಗಿಲು ಮುಟ್ಟಿತು. ಶಿವಸೇನೆಯ ಕಾರ್ಯಾಧ್ಯಕ್ಷ ಉದ್ಧವ್‌ ಠಾಕ್ರೆ ಮತ್ತು ಅದಿತ್ಯ ಠಾಕ್ರೆ ಅವರನ್ನು ಇದೇ ಸಂದರ್ಭದಲ್ಲಿ ಶಾಲು ಹೊದೆಸಿ, ಹಾರ ಹಾಕಿ, ತಿರುಪತಿ ವೆಂಕಟರಮಣ ದೇವರ ಸ್ಮರಣಿಕೆ, ಮಹಾಪ್ರಸಾದ ನೀಡಿ ಕೆ. ಎಸ್‌. ಶ್ರೀನಿವಾಸ ರಾಜು ಅವರು ಗೌರವಿಸಿದರು. ಥಾಣೆಯ ಉಸ್ತುವಾರಿ ಸಚಿವ ಏಕನಾಥ ಶಿಂಧೆ ಅವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀನಿವಾಸ ಮಂಗಲ ಮಹೋತ್ಸವದ ರೂವಾರಿಗಳಾದ ಸಂಸದ ಡಾ| ಶ್ರೀಕಾಂತ್‌ ಏಕನಾಥ್‌ ಶಿಂಧೆ, ಡೊಂಬಿವಲಿ ಶಾಸಕ ಸುಭಾಶ್‌ ಭೋಯಿರ್‌, ವಿರಾರ್‌ ಶಂಕರ್‌ ಶೆಟ್ಟಿ, ಶ್ರೀನಿವಾಸ ರಾಜು, ಸಿ. ಆರ್‌. ಆನಂದ್‌ ತೀರ್ಥಾಚಾರ್ಯ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದಾಸ ಸಾಹಿತ್ಯ ಪ್ರೊಜೆಕ್ಟ್‌ನ ಕಲಾವಿದರಿಂದ ಭಕ್ತಿಗೀತೆಗಳ ಗಾಯನ ನಡೆಯಿತು. ಕ್ರೀಡಾಂಗಣದ ನಾಲ್ಕು ಕಡೆಗಳಿಂದಲೂ ಮೂರು ಲಕ್ಷಕ್ಕೂ ಅಧಿಕ ಭಕ್ತಾದಿಗಳು ತುಂಬಿ ಹೋಗಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಕಾರ್ಯಕರ್ತರು ಸಹಕರಿಸಿದ್ದರು. ಕಲ್ಯಾಣೋತ್ಸವ ರಂಗ ಮಂಟಪದಲ್ಲಿ ಶ್ರೀ ದೇವರನ್ನು ಪ್ರತಿಷ್ಠಾಪಿಸುವ ಪ್ರಾರಂಭದಲ್ಲಿ ಸ್ವಸ್ತಿ ಪುಣ್ಯಾಹ ವಾಚನ, ವಾಸ್ತು ರಕ್ಷಾ, ಮಹಾಗಣಪತಿ ಹೋಮವನ್ನು ಪುರೋಹಿತ ವಿದ್ವಾನ್‌ ಕೈರಬೆಟ್ಟು ವಿಶ್ವನಾಥ್‌ ಭಟ್‌ ಅವರು ನೆರವೇರಿಸಿದರು.

ಶ್ರೀನಿವಾಸ ಕಲ್ಯಾಣೋತ್ಸವದ ಮೈದಾನದ ಹೊರಾಂಗಣದಲ್ಲಿ ಶ್ರೀ ಮಹಾವಿಷ್ಣುವಿನ ಶೇಷಶಯ, ಶ್ರೀನಿವಾಸ ದೇವರ ಕಲ್ಯಾಣೋತ್ಸವ, ಶ್ರೀ ಮಹಾವಿಷ್ಣು  ದೇವರ ವಿವಿಧ ಅವತಾರಗಳ ಚಿತ್ತಾಕರ್ಷಕ  ವಿದ್ಯುದ್ದಿಪಾಲಂಕೃತ ಆಕೃತಿಗಳು ಭಕ್ತಾದಿಗಳನ್ನು ಆಕರ್ಷಿಸುತ್ತಿದ್ದವು. ಮಹಾಮಂಗಳಾರತಿಯ ಆನಂದರ ಲಕ್ಷಾಂತರ ಮಂದಿ ಭಕ್ತಾದಿಗಳಿಗೆ 16 ಬಗೆಯ ಖಾದ್ಯವನ್ನೊಳಗೊಂಡ ಅನ್ನ ಸಂತರ್ಪಣೆ ನಡೆಯಿತು. ಬೆಳಗ್ಗೆ  ಉಪಾಹಾರ, ಮಧ್ಯಾಹ್ನ 10 ಬಗೆಯ ಖಾದ್ಯವನ್ನೊಳಗೊಂಡ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.

ಮೈದಾನದುದ್ದಕ್ಕೂ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಡೊಂಬವಲಿ, ಕಲ್ಯಾಣ್‌, ಭಿವಂಡಿ ಪರಿಸರದ ಜನರು ಜಾತಿ, ಮತ, ಭೇದವನ್ನು ಮರೆತು ಪಾಲ್ಗೊಂಡಿದ್ದರು. ಉತ್ಸವದಲ್ಲಿ  ಡೊಂಬಿವಲಿಯ ಪ್ರತಿಷ್ಠಿತ ಸಂಘ-ಸಂಸ್ಥೆಗಳಾದ ಡೊಂಬಿವಲಿ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರುéತ್ಸವ ಮಂಡಳ, ಕರ್ನಾಟಕ ಸಂಘ ಡೊಂಬಿವಲಿ, ಬಂಟ್ಸ್‌ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿ, ಬಿಲ್ಲವರ ಅಸೋಸಿಯೇಶನ್‌ ಡೊಂಬಿವಲಿ ಪ್ರಾದೇಶಿಕ ಸಮಿತಿ, ಕುಲಾಲ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿ, ಶ್ರೀ ಸಾಯಿನಾಥ ಮಿತ್ರ ಮಂಡಳ, ಶ್ರೀ ರಾಧಾಕೃಷ್ಣ ಶನೀಶ್ವರ ಮಂದಿರ, ದುರ್ಗಾಂಬಿಕಾ ಭಜನಾ ಮಂಡಳ, ಶ್ರೀ ಮೂಕಾಂಬಿಕಾ ಸೋಶಿಯಲ್‌ ವೆಲ್ಫೆàರ್‌ ಫೌಂಡೇಷನ್‌, ಮುಂಬ್ರಾ ಮಿತ್ರ ಭಜನ ಮಂಡಳಿ, ಯಕ್ಷಕಲಾ ಸಂಸ್ಥೆ, ಶ್ರೀ ಮಾತಾ ಅಮೃತಾನಂದಮಯಿ ಸತ್ಸಂಗ, ಶ್ರೀ ಜಗದಂಬಾ ಮಂದಿರ ಡೊಂಬಿವಲಿ ಹಾಗೂ ಶ್ರೀ ದುರ್ಗಾಪರಮೇಶ್ವರಿ ಭಕ್ತ ಮಂಡಳಿ ಹಾಗೂ ಇನ್ನಿತರ ಸಂಘಟನೆಗಳ ಪದಾಧಿಕಾರಿಗಳು, ಪ್ರತಿನಿಧಿಗಳು, ಭಕ್ತರು  ಸಹಕರಿಸಿದರು.

 ಚಿತ್ರ-ವರದಿ : ರಮೇಶ್‌ ಉದ್ಯಾವರ

ಟಾಪ್ ನ್ಯೂಸ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.