ಭಾರತ ತಂಡಕ್ಕೆ ಬಿಸಿಸಿಐ ಅಭಿನಂದನೆ
Team Udayavani, Dec 11, 2018, 6:00 AM IST
ನವದೆಹಲಿ: ಆಸ್ಟ್ರೇಲಿಯಾದಲ್ಲಿ ಐತಿಹಾಸಿಕ ಟೆಸ್ಟ್ ಗೆಲುವು ಸಾಧಿಸಿರುವ ಭಾರತ ತಂಡಕ್ಕೆ ಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ಮುಖ್ಯ ಆಡಳಿತಾಧಿಕಾರಿ ವಿನೋದ್ ರಾಯ್ ಹಾಗೂ ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ.ಖನ್ನಾ ಶುಭಾಶಯಗಳನ್ನು ತಿಳಿಸಿದ್ದಾರೆ.
ನಿಮ್ಮ ಗೆಲುವು ನಮಗೆ ಸ್ಫೂರ್ತಿ ತಂದಿದೆ. ಉನ್ನತ ಪ್ರಯತ್ನಕ್ಕೆ ಸಿಕ್ಕ ಅರ್ಹ ಗೆಲುವು ಇದು. ಮುಂದೆಯೂ ನಿಮ್ಮ ವಿಜಯಯಾತ್ರೆ ಮುಂದುವರಿಯಲಿ ಎಂದು ಟ್ವೀಟರ್ನಲ್ಲಿ ತಿಳಿಸಿದ್ದಾರೆ.