ಕುಕ್ಕೆ: ವೈಭವದ ಬ್ರಹ್ಮರಥೋತ್ಸವ; 362 ಭಕ್ತರಿಂದ ಎಡೆಸ್ನಾನ 

Team Udayavani, Dec 14, 2018, 9:35 AM IST

kukke-3.jpg

ಸುಬ್ರಹ್ಮಣ್ಯ: ಚಂಪಾ ಷಷ್ಠಿ ಅಂಗವಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಬುಧವಾರ ರಾತ್ರಿ ಪಂಚಮಿ ರಥೋತ್ಸವ ಹಾಗೂ ಗುರುವಾರ ಮುಂಜಾನೆ ಬ್ರಹ್ಮರಥೋತ್ಸವ ವೈಭವದಿಂದ ನೆರವೇರಿತು. 400 ವರ್ಷಗಳ ಇತಿಹಾಸವಿರುವ ಬ್ರಹ್ಮರಥದಲ್ಲಿ ಸುಬ್ರಹ್ಮಣ್ಯ ದೇವರ ಉತ್ಸವವನ್ನು ಭಕ್ತರು ಕಣ್ತುಂಬಿಕೊಂಡರು.

ದೇಗುಲದ ಹೊರಾಂಗಣದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಮತ್ತು ಉಮಾಮಹೇಶ್ವರ ದೇವರ ಪಾಲಕಿ ಉತ್ಸವ ನೆರವೇರಿ, ಮುಂಜಾನೆ 6.41ರ ವೃಶ್ಚಿಕ ಲಗ್ನದಲ್ಲಿ ರಥೋತ್ಸವ ಜರಗಿತು. 98 ಭಕ್ತರು ಈ ಬಾರಿಯ ಮಹಾರಥೋತ್ಸವ 
ಸೇವೆಯನ್ನು ನಡೆಸಿದರು.

ರಥೋತ್ಸವದ ಬಳಿಕ ಧನ, ಕನಕ, ಹೂವು, ಫಲವಸ್ತುಗಳನ್ನು ಅರ್ಚಕರು ರಥದಿಂದ ಭಕ್ತರತ್ತ ಚಿಮ್ಮಿದರು. ಭಕ್ತರು ರಥಕ್ಕೆ ಸಾಸಿವೆ, ನಾಣ್ಯ, ಏಲಕ್ಕಿ, ಕಾಳುಮೆಣಸು ಇತ್ಯಾದಿ ಅರ್ಪಿಸಿ ಪ್ರಾರ್ಥನೆ ಸಲ್ಲಿಸಿದರು. ಗುರುವಾರ ರಾತ್ರಿ ಒಳಾಂಗಣದಲ್ಲಿ ಉತ್ಸವ ಮೂರ್ತಿಯ ಬಲಿ ನಡೆದ ಬಳಿಕ ರಥಬೀದಿಯಲ್ಲಿ ಪಂಚಮಿ ರಥೋತ್ಸವ, ಕಾಶಿಕಟ್ಟೆ ಮಹಾಗಣಪತಿ ಸನ್ನಿಧಿಯಲ್ಲಿ ಪೂಜೆ ನೆರವೇರಿತು. ಪಂಚಮಿ ಮತ್ತು ಷಷ್ಠಿಯಂದು ದೇಗುಲದ ಅನ್ನಛತ್ರ ಹಾಗೂ ಅಂಗಡಿಗುಡ್ಡೆಯ ವಿಶಾಲವಾದ ಸುಸಜ್ಜಿತ ಸ್ಥಳದಲ್ಲಿ ಸಹಸ್ರಾರು ಮಂದಿ ಅನ್ನಪ್ರಸಾದ ಸ್ವೀಕರಿಸಿದರು. ಮಧ್ಯಾಹ್ನ ನಡೆದ ಎಡೆಸ್ನಾನ ಸೇವೆಯಲ್ಲಿ 362 ಮಂದಿ ಹರಕೆ ಸೇವೆ ಸಲ್ಲಿಸಿದರು. ಕೊಳ್ಳೇಗಾಲ ಸುಬ್ಬ ಶೆಟ್ಟಿ ಸ್ಮರಣಾರ್ಥ ಅವರ ಸಹೋದರ ರಾಧಾಕೃಷ್ಣ ಅವರು 1 ಲಕ್ಷ ರೂ. ವೆಚ್ಚದಲ್ಲಿ ಸಿಹಿತಿಂಡಿ ನೀಡಿದರು.

ಗಣ್ಯರ ಉಪಸ್ಥಿತಿ
ರಥೋತ್ಸವದ ವೇಳೆ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತೆ ಪ್ರಮೀಳಾ, ಹೈಕೋರ್ಟ್‌ ನ್ಯಾಯಾಧೀಶ ಸತ್ಯನಾರಾಯಣ, ಸುಳ್ಯ ನ್ಯಾಯಾಧೀಶ ಪುರುಷೋತ್ತಮ, ಪುತ್ತೂರು ಸಹಾಯಕ ಆಯುಕ್ತ ಎಚ್‌.ಕೆ. ಕೃಷ್ಣಮೂರ್ತಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಕಾರ್ಯನಿರ್ವಹಣಾಧಿಕಾರಿ ಎಚ್‌.ಎಂ. ರವೀಂದ್ರ, ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ ಪೆರಾಲ್‌, ನೂತನ ಬ್ರಹ್ಮರಥ ದಾನಿ ಉದ್ಯಮಿ ಅಜಿತ್‌ ರೈ, ಎಂ.ಬಿ. ಸದಾಶಿವ ಉಪಸ್ಥಿತರಿದ್ದರು. ಪಂಚಮಿ ಮತ್ತು ಚೌತಿ ದಿನಗಳಲ್ಲಿ ಮಾಜಿ ಸಚಿವ ರಮಾನಾಥ ರೈ, ವಿಧಾನಪರಿಷತ್‌ ಮಾಜಿ ಸದಸ್ಯ ಮುಖ್ಯಮಂತ್ರಿ ಚಂದ್ರು ಸಹಿತ ಹಲವು ಗಣ್ಯರು ದೇಗುಲಕ್ಕೆ ಭೇಟಿಯಿತ್ತರು.

ಇಂದು ನೌಕಾವಿಹಾರ: ಶುಕ್ರವಾರ ಶ್ರೀ ಸುಬ್ರಹ್ಮಣ್ಯ ದೇವರ ಅವಭೃಥ ಉತ್ಸವ ಮತ್ತು ನೌಕಾ ವಿಹಾರ ಕುಮಾರಧಾರಾ ನದಿಯಲ್ಲಿ ನಡೆಯಲಿದೆ.

ಮುಂದಿನ ವರ್ಷ ಹೊಸ ರಥ
400 ವರ್ಷ ಹಳೆಯ ಬ್ರಹ್ಮರಥ ಶಿಥಿಲಗೊಂಡಿರುವ ಕಾರಣ ಹೊಸ ರಥ ನಿರ್ಮಾಣಕ್ಕೆ ಸಂಕಲ್ಪಿಸಲಾಗಿದ್ದು, ಮುಂದಿನ ವರ್ಷದ ಜಾತ್ರೆಗೂ ಮೊದಲು ಸಮರ್ಪಣೆಗೊಳ್ಳಲಿದೆ. ಶಿಥಿಲಗೊಂಡಿರುವ ಹಳೆಯ ರಥ ಇತಿಹಾಸದ ಪುಟಗಳನ್ನು ಸೇರಲಿದೆ. 

ಟಾಪ್ ನ್ಯೂಸ್

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.