ಫಿಲಿಪ್ಪೀನ್ ಸುಂದರಿಗೆ ಕಿರೀಟ
Team Udayavani, Dec 18, 2018, 6:00 AM IST
ಬ್ಯಾಂಕಾಕ್: 2018ರ ಭುವನ ಸುಂದರಿಯಾಗಿ ಫಿಲಿಪ್ಪೀನ್ಸ್‌ನ ಕ್ಯಾಟ್ರಿಯೋನಾ ಗ್ರೇ ಆಯ್ಕೆಯಾಗಿದ್ದಾರೆ. ಬ್ಯಾಂಕಾಕ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ 93 ದೇಶಗಳ ಸುಂದರಿಯರು ಭಾಗವಹಿಸಿದ್ದರು. 24 ವರ್ಷದ ಫಿಲಿಪ್ಪೀನಾ-ಆಸ್ಟ್ರೇಲಿಯನ್ ಮೂಲದ ಕ್ಯಾಟ್ರಿಯೋನಾ ಫಿಲಿಪ್ಪೀನ್ಸ್‌ನ ನಾಲ್ಕನೇ ಭುವನ ಸುಂದರಿ ಯಾಗಿದ್ದಾರೆ. ಈ ದೇಶದ ಮೂವರು ಈ ಕಿರೀಟ ತೊಟ್ಟಿದ್ದಾರೆ.
ಕೊನೆಯ ಸುತ್ತಿನಲ್ಲಿ ದಕ್ಷಿಣ ಆಫ್ರಿಕಾದ ಡೆಮಿ, ಲೇಯ್ ನೆಲ್ ಪೀಟರ್ಸ್ ಮತ್ತು ವೆನೆಜುವೆಲಾದ ಸ್ಟೆಫಾನಿ ಗುಟೆರೆಸ್ ಇದ್ದರು. ಅಂತಿಮ ಸುತ್ತಿನಲ್ಲಿ ಕೇಳಿದ ಕೊನೆಯ ಪ್ರಶ್ನೆಗೆ ಕ್ಯಾಟ್ರಿಯೋನಾ ಉತ್ತರ ಅತ್ಯಂತ ಸಮ ರ್ಪಕವಾಗಿತ್ತು. ನಿಮ್ಮ ಜೀವನದಲ್ಲಿ ನೀವು ಕಲಿತ ಅತ್ಯಂತ ಪ್ರಮುಖ ಪಾಠ ಯಾವುದು ಮತ್ತು ಮಿಸ್ ಯೂನಿವರ್ಸ್ ಆದ ನಂತರ ಅದನ್ನು ನೀವು ಹೇಗೆ ಅಳವಡಿಸಿಕೊಳ್ಳುತ್ತೀರಿ ಎಂದು ಕ್ಯಾಟ್ರಿಯೋನಾಗೆ ಪ್ರಶ್ನಿಸಲಾಗಿತ್ತು. ಫಿಲಿಪೀನ್ಸ್‌ನ ಟೊಂಡೊ, ಮನಿಲಾದಲ್ಲಿನ ಕೊಳಗೇರಿಯ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ. ಮಕ್ಕಳ ಮುಖದಲ್ಲಿ ಸೌಂದರ್ಯವನ್ನು ನೋಡು ವುದನ್ನು ಕಲಿತಿದ್ದೇ ನನ್ನ ಶ್ರೇಷ್ಠ ಕಲಿಕೆ ಎಂದು ಕ್ಯಾಟ್ರಿಯೋನಾ ಉತ್ತರಿಸಿದ್ದಾರೆ.