2 ವರ್ಷದಿಂದ ಕಾದ ಕ್ರೀಡಾಪಟು


Team Udayavani, Dec 19, 2018, 3:28 PM IST

19-december-15.gif

ಶಿರಸಿ: ನಾಡಿನ ಹೆಮ್ಮೆಯ ಗರಿ ಮೂಡಿಸುವ ಕ್ರೀಡಾಪಟುವಿಗೆ ಸರಕಾರವೇ ಘೋಷಣೆ ಮಾಡಿದ್ದ ಬಹುಮಾನ ಬಾರದೇ ಕಳೆದೆರಡು ವರ್ಷಗಳಿಂದ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಆಗದೇ ಈ ಬಾರಿಯ ಸ್ಪರ್ಧೆಗಾದರೂ ಸರಕಾರದ ಬಹುಮಾನ ಬರುತ್ತದೆ ಎಂದು ಜಾತಕ ಪಕ್ಷಿಯಂತೆ ಕಾಯುವಂತಾಗಿದೆ. ಸರಕಾರ ಕ್ರೀಡೆಗೆ ಪ್ರೋತ್ಸಾಹ ಕೊಡುತ್ತೇವೆ ಎನ್ನುವ ಬೆನ್ನಲ್ಲೇ ಪ್ರತಿಭಾವಂತರತ್ತ ನಿರ್ಲಕ್ಷ್ಯ ಮಾಡುವ ಪ್ರಕರಣ ಕೂಡ ಬೆಳಕಿಗೆ ಬಂದಿದೆ.

2019ರ ಫೆಬ್ರುವರಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಜಾವಲಿನ ಸ್ಪರ್ಧೆ ದುಬೈನಲ್ಲಿ ನಡೆಯಲಿದ್ದು, ಇದಕ್ಕಾಗಿ ಈ ಕ್ರೀಡಾಪಟು ಪಾಲ್ಗೊಳ್ಳಬೇಕಿದೆ. ಕ್ರೀಡಾ ಸಾಧನೆಗೆ ರಾಜ್ಯ ಸರಕಾರದಿಂದ ಬರಬೇಕಿದ್ದ 3 ಲಕ್ಷ ರೂ. ನೆರವು ಬಂದಲ್ಲಿ ಭಾಗವಹಿಸಲು ಅನುಕೂಲ ಆಗಲಿದೆ. ಆದರೆ, ಸರಕಾರದ ನಿರ್ಲಕ್ಷ್ಯ  ಕ್ರೀಡಾಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ಏನಿದು ಪ್ರಕರಣ?: ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್‌ನ ಜಾವಲಿನ್‌ ಎಸೆತದಲ್ಲಿ ಕಂಚಿನ ಪದಕ ಪಡೆದು ಸಾಧನೆ ಮಾಡಿದ್ದ ಇಲ್ಲಿಯ ಕ್ರೀಡಾಪಟುವೊಬ್ಬರಿಗೆ ಸಿಗಬೇಕಿದ್ದ ಬಹುಮಾನ ಮೊತ್ತ ಕಳೆದ ಮೂರು ವರ್ಷದಿಂದ ಕೈಗೆ ಸೇರಿಲ್ಲ. ಆದರೆ ಈ ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕ ಪ್ರತಾಪ ಪರಮಾನಂದ ಹೆಗಡೆ ರಾಷ್ಟ್ರಮಟ್ಟದ ಜಾವಲಿನ್‌ನಲ್ಲಿ ಸಾಧನೆ ಮಾಡಿದ ಕ್ರೀಡಾಪಟು ಆಗಿದ್ದಾರೆ. ಇದರಲ್ಲೇ ಎರಡು ಬಾರಿ ಕಂಚಿನ ಪದಕ ಪಡೆದು ಗಮನ ಸೆಳೆದಿದ್ದನು.

2017 ರಲ್ಲಿ 17ನೇ ನ್ಯಾಷನಲ್‌ ಪ್ಯಾರಾ ಅಥ್ಲೆಟಿಕ್ಸ್‌ನ ಜಾವಲಿನ್‌ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದಿದ್ದ ಪ್ರತಾಪ, 2018 ರಲ್ಲಿ ಕೂಡ ಮತ್ತೊಮ್ಮೆ ಕಂಚಿನ ಪದಕ ತನ್ನದಾಗಿಸಿಕೊಂಡಿದ್ದರು. ಈ ಸಾಧನೆಗೆ ಬಹುಮಾನದ ಮೊತ್ತವಾಗಿ ಸರಕಾರವೇ ತಲಾ 50ಸಾವಿರ ರೂ.ನಂತೆ ಎರಡೂ ಕ್ರೀಡಾಕೂಟದ ಸಾಧನೆಗೆ 1ಲಕ್ಷ ರೂ. ಬಹುಮಾನ ನೀಡಬೇಕಿತ್ತು.

ಪ್ರತಾಪ ಹೆಗಡೆ 53.62ಮೀಟರ್‌ ದೂರ ಜಾವಲಿನ್‌ ಎಸೆದು ಗಮನ ಸೆಳೆಯುವ ಜೊತೆಗೆ ವಿಶ್ವ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಅವರು ಎಂಟನೇ ಸ್ಥಾನದಲ್ಲಿ ನಿಲ್ಲುವುದರಿಂದ ಅವರಿಗೆ ಅಂತಾರಾಷ್ಟ್ರೀಯ ಮಟ್ಟದ ಸ್ಪಧೆಯಲ್ಲಿ ಭಾಗವಹಿಸುವುದಕ್ಕೆ ಅವಕಾಶ ಉಂಟು.

ಇದೊಂದೇ ಅಲ್ಲ: ಮಲೆನಾಡಿನ ಊರಿನಲ್ಲಿದ್ದೂ ನಾಡು ಹೆಮ್ಮೆಪಡುವ ಸಾಧನೆ ಮಾಡುತ್ತಿರುವ ಪ್ರತಾಪ್‌, ಕೇವಲ ಜಾವಲಿನ್‌ನಲ್ಲಿ ಮಾತ್ರವಲ್ಲ, ವಾಲಿಬಾಲ್‌ನಲ್ಲೂ ಗಮನ ಸೆಳೆದಿದ್ದಾನೆ. ಜತೆಯಲ್ಲಿ ಕಳೆದ ವರ್ಷ ರಾಷ್ಟ್ರಮಟ್ಟದ ಪಿವಿಎಫ್‌ಐ ಫೆಡರೇಶನ್‌ ಕಪ್‌ ಸಿಟ್ಟಿಂಗ್‌ ಪ್ಯಾರಾ ವಾಲಿಬಾಲ್‌ ನಲ್ಲಿ ಎರಡನೇ ಬಹುಮಾನ ಗಳಿಸಿದ್ದರು. ಕೆಲ ತಿಂಗಳ ಹಿಂದೆ ಉಡುಪಿಯ ಮಲ್ಪೆ ಕಡಲತಡಿಯಲ್ಲಿ ನಡೆದ ದೇಶದ ಮೊದಲ ಸ್ಟ್ಯಾಂಡಿಂಗ್  ವಾಲಿಬಾಲ್‌ ಸೀನಿಯರ್‌ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ರನ್ನರ್‌ಅಪ್‌ ಆಗಿ ಹೊರಹೊಮ್ಮಿದ್ದರು. ಇದಕ್ಕೆ ಸಂಬಂಧಿಸಿದ ಬಹುಮಾನದ ಮೊತ್ತವೂ ಬರಬೇಕಿದೆ.

ವೈಕಲ್ಯ ತೊಡಕಾಗಲಿಲ್ಲ: ಹುಟ್ಟಿನಿಂದಲೇ ಎಡಗೈ ವೈಕಲ್ಯ ಹೊಂದಿರುವ ಪ್ರತಾಪ ಹೆಗಡೆ ಸಾಧನೆಗೆ ಮಾತ್ರ ವಾಲಿಬಾಲ್‌ ಅಥವಾ ಜಾವಲಿನ್‌ ಸಮಸ್ಯೆ ಆಗಲಿಲ್ಲ. ಸಣ್ಣವನಿದ್ದಾಗಲೇ ಓಟ, ಆಟದ ಕುರಿತು ಆಸಕ್ತಿ ಬೆಳೆಸಿಕೊಂಡಿದ್ದ ಪ್ರತಾಪ್‌ ಉನ್ನತ ಶಿಕ್ಷಣ ಪಡೆದ ನಂತರ ರಾಷ್ಟ್ರಮಟ್ಟದಲ್ಲೂ ಸಾಧನೆ ತೋರಿದ್ದು ವಿಶೇಷ. ಎಸ್ಸೆಸ್ಸೆಲ್ಸಿ ಓದುವಾಗಲೇ ಗಂಭೀರ ಖಾಯಿಲೆಗೂ ಒಳಗಾಗಿದ್ದ ಪ್ರತಾಪನನ್ನು ಬದುಕಿಸಿದ್ದೇ ಕ್ರೀಡೆ ಎನ್ನುತ್ತಾರೆ ತಂದೆ ಪರಮಾನಂದ ಹೆಗಡೆ.

ಕ್ರೀಡೆಗೆ ಸರಕಾರ ನೀಡಬೇಕಿದ್ದ ನೆರವು ಬಂದಿಲ್ಲ ಎಂದು ಮುಖ್ಯಮಂತ್ರಿಗೂ ಪತ್ರ ಬರೆದಿದ್ದೆವು. ಅದಕ್ಕೆ ಈಗ ಸಿಎಂ ಕಚೇರಿ ಸ್ಪಂದಿಸಿದೆ. ಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದು ನಮಗೆ ಆಶಾದಾಯಕವಾಗಿದೆ.
 ಪರಮಾನಂದ ಹೆಗಡೆ, ಪಾಲಕ

2014ರಿಂದಲೇ ಸರಕಾರ ಕ್ರೀಡಾ ಪ್ರೋತ್ಸಾಹ ಮೊತ್ತ ಕೊಟ್ಟಿಲ್ಲ. ಇದು ಕ್ರೀಡಾಪಟುಗಳಿಗೆ ಮಾಡುವ ಅನ್ಯಾಯ. ತಕ್ಷಣ ಸರಿಮಾಡಬೇಕು.
 ನರೇಂದ್ರ ಎಸ್‌.ಬಿ. ಕ್ರೀಡಾಭಿಮಾನಿ

ರಾಘವೇಂದ್ರ ಬೆಟ್ಟಕೊಪ್ಪ 

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.