ಮುಂಬಯಿ ಆಸ್ಪತ್ರೆ ಅಗ್ನಿ ದುರಂತ: ಹೆಣ್ಣು ಮಗು ಸಾವು; ಬಲಿ ಸಂಖ್ಯೆ 11
Team Udayavani, Dec 21, 2018, 11:43 AM IST
ಮುಂಬಯಿ : ನಗರ ಹೊರವಲಯದ ಅಂಧೇರಿಯ ಮರೋಳ್‌ನಲ್ಲಿನ ಇಎಸ್‌ಐಸಿ ಕಾಮ್‌ಗಾರ್ ಆಸ್ಪತ್ರೆಯಲ್ಲಿ ಕಳೆದ ಸೋಮವಾರ ಸಂಭವಿಸಿದ್ದ ಅಗ್ನಿ ದುರಂತಕ್ಕೆ ಬಲಿಯಾದವರ ಸಂಖ್ಯೆ ಇಂದು 11ಕ್ಕೇರಿತು.
ಹೊಗೆ ಸೇವಿಸಿ ಉಂಟಾದ ಆಂತರಿಕ ಗಾಯಕ್ಕೆ ವಾರದ ಹಿಂದೆ ಜನಿಸಿದ್ದ ಹೆಣ್ಣು ಮಗು ಇಂದು ನಸುಕಿನ 12.20ರ ವೇಳೆ ಕೊನೆಯುಸಿರೆಳೆಯಿತು ಎಂದು ಬೃಹನ್ಮುಂಬಯಿ ಮುನಿಸಿಪಲ್ ಕಾರ್ಪೊರೇಶನ್‌ನ ಪ್ರಕೋಪ ವ್ಯವಸ್ಥಾಪನ ಘಟಕದ ಹಿರಿಯ ಅಧಿಕಾರಿ ಹೇಳಿದ್ದಾರೆ.
ಈ ಅಗ್ನಿ ದುರಂತದಲ್ಲಿ ಗಾಯಾಗಳುಗಳಾಗಿದ್ದವರ ಪೈಕಿ 91 ಮಂದಿ ಈಗಲೂ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಎಂಟು ಮಂದಿಯ ಸ್ಥಿತಿ ಚಿಂತಾಜನಕವಿದೆ. ಕೃತಕ ಉಸಿರಾಟ ವ್ಯವಸ್ಥೆ ಅಳವಡಿಸಲ್ಪಟ್ಟಿರುವ ಇವರು ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾರೆ. ಘಟನೆಯಲ್ಲಿ ಒಟ್ಟು 175 ಮಂದಿ ಗಾಯಗೊಂಡಿದ್ದರು.