ವಿಷ ಸೇವಿಸಿ ಒಂದೇ ಕುಟುಂಬದ ಆರು ಮಂದಿ ಆತ್ಮಹತ್ಯೆ
Team Udayavani, Jan 5, 2019, 4:21 AM IST
ಕೊಪ್ಪಳ: ವಿಷ ಸೇವಿಸಿ ಒಂದೇ ಕುಟುಂಬದ 6 ಮಂದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೇತಗಲ್ ಗ್ರಾಮದಲ್ಲಿ ಶನಿವಾರ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರು ಶೇಖರಯ್ಯ ಬಿದ್ನಾಳ್(42),ಪತ್ನಿ ಜಯಮ್ಮ (39) ಮತ್ತು ನಾಲ್ವರು ಪುತ್ರಿಯರಾದ ಬಸಮ್ಮ(23), ಪರಮ್ಮ(16), ಗೌರಮ್ಮ(20), ಸಾವಿತ್ರಿ(18) ಎನ್ನುವವರಾಗಿದ್ದಾರೆ.
ಶೇಖರಯ್ಯ ಮೊದಲು ಪತ್ನಿ ಮತ್ತು ಪುತ್ರಿಯರಿಗೆ ವಿಷ ಹಾಕಿ ಬಳಿಕ ತಾನೂ ಸಿಲೀಂಗ್ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಶೇಖರಯ್ಯ ಕುಟುಂಬ ರೈತ ಕುಟುಂಬವಾಗಿದ್ದು ಬೆಳೆ ನಾಶದಿಂದ ತೀವ್ರವಾಗಿ ಸಂಕಷ್ಟಕ್ಕೊಳಾಗಿದ್ದು, ಬ್ಯಾಂಕ್ ಸಾಲವೂ ಇತ್ತು ಎಂದು ಸ್ಥಳೀಯರು ಹೇಳಿರುವುದಾಗಿ ವರದಿಯಾಗಿದೆ.
ಸ್ಥಳಕ್ಕಾಗಮಿಸಿದ ಪೊಲೀಸ್ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.