ಮಾದಕ ದ್ರವ್ಯ ಕಳ್ಳಸಾಗಣೆ: 10 ಕಿಲೋ ಅಫೀಮು ಸಹಿತ ದಂಪತಿ ಸೆರೆ
Team Udayavani, Jan 7, 2019, 10:03 AM IST
ಶ್ರೀನಗರ : ಬೃಹತ್ ಪ್ರಮಾಣದಲ್ಲಿ ಕೃತಕ ಮಾದಕ ದ್ರವ್ಯಗಳ ಕಳ್ಳಸಾಗಾಟದಲ್ಲಿ ಶಾಮೀಲಾಗಿದ್ದ ದಂಪತಿಯನ್ನು ಪೊಲೀಸರು ಹತ್ತು ಕಿಲೋ ಅಫೀಮು ಸಹಿತಿ ಜಮ್ಮು ಕಾಶ್ಮೀರದ ಕುಲಗಾಂವ್ನಲ್ಲಿ ಇಂದು ಸೋಮವಾರ ಬಂಧಿಸಿದ್ದಾರೆ.
ಬಂಧಿತರನ್ನು ಮಲ್ಲಿಪುರ ದೇವಸರ ನಿವಾಸಿ ಸಾಬ್ಜರ್ ಅಹ್ಮದ್ ರಾಥರ್ ಅಲಿಯಾಸ್ ರಾಜಾ ಮತ್ತು ಆತನ ಪತ್ನಿ ಎಂದು ಗುರುತಿಸಲಾಗಿದೆ. ಇವರನ್ನು ಕುಲಗಾಂವ್ ಚೆಕ್ಪೋಸ್ಟ್ನ ಕಾಜಿಗಂದ್ ಪ್ರದೇಶದಲ್ಲಿ ನ ಮೀರ್ ಬಜಾರ್ ಅಖರಾನ್ ಸೇತುವೆ ಸಮೀಪ ಬಂಧಿಸಲಾಯಿತು ಎಂದು ಪೊಲೀಸ್ ವಕ್ತಾರ ತಿಳಿಸಿದರು.
ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.