“ಬಿಕಿನಿ ಕ್ಲೈಂಬರ್’ ಸಾವು
Team Udayavani, Jan 23, 2019, 12:30 AM IST
ತೈಪೇ: ಎತ್ತರದ ಗಿರಿ-ಶಿಖರಗಳ ತುಟ್ಟ ತುದಿಯಲ್ಲಿ ಬಿಕಿನಿ ತೊಟ್ಟು ಕ್ಲಿಕ್ಲಿಸಿಕೊಂಡ ಸೆಲ್ಫಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಾ, ತನ್ನದೇ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದ ತೈವಾನ್ನ “ಗಿಗಿ ವು’ ಎಂಬಾಕೆ, ಇತ್ತೀಚೆಗೆ ಇಂಥದ್ದೇ ಸಾಹಸ ಮಾಡುವಾಗ ಸಾವನ್ನಪ್ಪಿದ್ದಾರೆ. ಅಭಿಮಾನಿಗಳಿಂದ “ಬಿಕಿನಿ ಕ್ಲೈಂಬರ್’ ಎಂದೇ ಕರೆಯಿಸಿಕೊಳ್ಳುತ್ತಿದ್ದ ಅವರು, ಶನಿವಾರ ಯುಶಾನ್ ನ್ಯಾಷನಲ್ ಪಾರ್ಕ್ನ ಶಿಖರ ಏರುವಾಗ 100 ಅಡಿ ಆಳದ ಕಮರಿಗೆ ಬಿದ್ದಿದ್ದರು. ಆದರೂ, ಸ್ಯಾಟಲೈಟ್ ಫೋನಿನ ಮೂಲಕ ಸ್ನೇಹಿತರಿಗೆ ಫೋನಾಯಿಸಿ, ಘಟನೆ ವಿವರಿಸಿದ್ದರು. ಆದರೆ, ಶಿಖರದ ಸುತ್ತ ಪ್ರತಿಕೂಲ ಹವಾಮಾನ ಇದ್ದಿದ್ದರಿಂದ ರಕ್ಷಣಾ ಹೆಲಿಕಾಪ್ಟರ್ಗಳು “ವು’ ಅವರನ್ನು ಬೇಗನೇ ತಲುಪಲು ಸಾಧ್ಯವಾಗಿರಲಿಲ್ಲ. ಸೋಮವಾರ ಆಕೆಯಿದ್ದ ಸ್ಥಳ ತಲುಪುವಷ್ಟರಲ್ಲಿ ಆಕೆ ಸಾವನ್ನಪ್ಪಿದ್ದರು.