ಜಾನುವಾರು ಜಾತ್ರೆಯಲ್ಲಿ ಮೂಲ ಸೌಲಭ್ಯ ಕೊರತೆ


Team Udayavani, Jan 25, 2019, 6:44 AM IST

janu.jpg

ನೆಲಮಂಗಲ: ರೈತರ ಕಷಿಗೆ ಹೆಗಲಾಗಿರುವ ಜಾನುವಾರುಗಳ ಜಾತ್ರೆ ಅದ್ದೂರಿಯಾಗಿ ನಡೆಯುವುದನ್ನು ರಾಜ್ಯದ ಕೆಲವೊಂದು ಭಾಗಗಳಲ್ಲಿ ಕಾಣಬಹುದಾಗಿದೆ. ಅದರಲ್ಲಿ ತಾಲೂಕಿನ ಮಹಿಮ ರಂಗಸ್ವಾಮಿ(ಗುಟ್ಟೆ) ಬೆಟ್ಟದ ಜಾನುವಾರು ಜಾತ್ರೆಯೂ ಒಂದು. ಆದರೆ, ಈ ಜಾತ್ರೆಗೆ ಸ್ಥಳೀಯ ಆಡಳಿತ ಮೂಲಭೂತ ಸೌಲಭ್ಯಗಳನ್ನು ಹೊದಗಿಸಲು ಮುಂದಾಗದೇ ಇರುವುದು ದುರಂತ.

ರಾಜ್ಯದ ಮೂಲೆ ಮೂಲೆಗಳಿಂದ ರೈತರು ಜಾನುವಾರಗಳನ್ನು ಮಾರಲು, ಖರೀದಿಸಲು ಈ ಜಾತ್ರೆಗೆ ಆಗಮಿಸುತ್ತಾರೆ. ಆದರೆ, ಜಾನುವಾರಗಳಿಗೆ ಕುಡಿಯುವ ನೀರಿನ ಸೌಲಭ್ಯ ನೀಡಿದರೂ, ರೈತರಿಗೆ ಶೌಚಾಲಯ ಸೌಲಭ್ಯ ನೀಡದ ಕಾರಣ ಸಾವಿರಾರು ರೈತರು ಬಯಲು ಶೌಚಾಲಯದ ಮೊರೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.

ಕಳೆದ ಎರಡು ಜಾತ್ರೆಗಳಿಂದ ಮಹಿಮ ರಂಗಸ್ವಾಮಿ(ಗುಟ್ಟೆ) ಬೆಟ್ಟದ ತಪ್ಪಲಿನಲ್ಲಿ ನಡೆಯುವ ಜಾನುವಾರು ಜಾತ್ರೆಗೆ ಆಗಮಿ ಸುವ ರೈತರಿಗೆ ಅನುಕೂಲವಾಗಲು ಶೌಚಾ ಲಯ ವ್ಯವಸ್ಥೆ ಮಾಡಲಾಗುತ್ತದೆ ಎಂದು ಆಶ್ವಾಸನೆ ನೀಡುತ್ತಾ ಬಂದಿದ್ದಾರೆ ವಿನಃ, ಇಲ್ಲಿಯವರೆಗೂ ಶೌಚಾಲಯ ನಿರ್ಮಾಣ ಮಾಡಿ ರೈತರಿಗೆ ಅನುಕೂಲ ಮಾಡಿಲ್ಲ. ಇದರಿಂದ, ರೈತರು ಬಯಲು ಶೌಚಾಲ ಯದ ಮೊರೆ ಹೋಗಬೇಕಾಗಿದೆ.

ಅಧಿಕಾರಿಗಳ ಬೇಜವಾಬ್ದಾರಿ: ಮಹಿಮ ರಂಗಸ್ವಾಮಿ ಬೆಟ್ಟಕ್ಕೆ ಸಾವಿರಾರು ಜನರು, ಭಕ್ತಾ ಞದಿಗಳು ಹಾಗೂ ಶಿವಗಂಗೆಗೆ ಹೋ ಗುವ ಪ್ರವಾಸಿಗರು ಭೇಟಿ ಮಾಡುತ್ತಾರೆ. ಆದರೆ, ಸಾರ್ವಜನಿಕರ ಪ್ರಯೋಜನಕ್ಕಾಗಲಿ ಅಥವಾ ಸರ್ಕಾರದ ಸ್ವಚ್ಛ ಭಾರತದ ಯೋಜ ನೆಯ ಸಹಕಾರಕ್ಕಾಗಲಿ ಗ್ರಾಮ ಪಂಚಾಯತಿ ಹಾಗೂ ತಾಲೂಕು ಆಡಳಿತದ ಅಧಿಕಾರಿಗಳು ಒಂದೇ ಒಂದು ಶೌಚಾಲಯ ನಿರ್ಮಾಣ ಮಾಡದಿರುವುದು ಅಧಿಕಾರಿಗಳ ಬೇಜವಾ ಬ್ದಾರಿತನಕ್ಕೆ ಸಾಕ್ಷಿಯಾಗಿದೆ.

ತಾತ್ಕಾಲಿಕ ಶೌಚಾಲಯವಿಲ್ಲ: ಕಳೆದ ಬಾರಿ ಗಿಂತ ಈ ಬಾರಿ ರಾಸುಗಳ ಬೆಲೆಯಲ್ಲಿ ಏರಿಕೆ ಯಾಗಿದೆ. ರೈತರಿಗೆ ಒಂದು ವಾರದ ಮಟ್ಟಿಗೆ ಮೂಲಭೂತ ಸೌಕರ್ಯವನ್ನು ಕಲ್ಪಿಸುವಲ್ಲಿ ಗ್ರಾಮ ಪಂಚಾಯತಿ ಮತ್ತು ಮುಜುರಾಯಿ ಇಲಾಖೆ ಮತ್ತೆ ಸೋತಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ವಚ್ಛತೆಯ ಬಗ್ಗೆ ಸರ್ಕಾರದ ಹಣದಿಂದ ಪ್ರಚಾರ ಮಾಡು ವುದಕ್ಕೆ ಸೀಮಿತರಾಗಿದ್ದಾರೆ.

ರೈತರು ಜಾತ್ರೆ ಯಲ್ಲಿ ಐದಾರು ದಿನ ಇರುವುದರಿಂದ ಅವ ರಿಗೆ ಶೌಚಾಲಯ ಬೇಕು ಎನ್ನುವ ಕನಿಷ್ಠ ಪ್ರಜ್ಞೆಯೂ ಅಧಿಕಾರಿಗಳಿಗೆ ಇಲ್ಲದಾಗಿದೆ. ಶಾಶ್ವತ ಶೌಚಾಲಯದ ಕಟ್ಟಡ ನಿರ್ಮಾಣ ಮಾಡಲು ತಡವಾದರೂ ಜಾತ್ರೆಗೆ ಅನಿವಾ ರ್ಯವಾಗಿ ಶೌಚಾಲಯ ಬೇಕಾಗಿರುವು ದರಿಂದ ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಮಾಡಬೇಕೆಂಬುದು ರೈತರ ಆಗ್ರಹವಾಗಿದೆ. ಆದರೆ, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ದಿಂದಾಗಿ ರೈತರು ಶೌಚಕ್ಕಾಗಿ ಬಯಲನ್ನೇ ಆಶ್ರಯಿಸಬೇಕಾಗಿದೆ.

ಅನೇಕ ವರ್ಷಗಳ ಕಾಲ ಜಾನುವಾರಗಳಿಗೆ ನೀರಿಲ್ಲದೇ ಪರದಾಡುವ ಪರಿಸ್ಥಿತಿಯಿತ್ತು. ಅನಂತರ ರೈತರ ಅಕ್ರೋಶದ ಫ‌ಲವಾಗಿ ಈ ಬಾರಿ ಜಾನುವಾರುಗಳಿಗೆ ಸಾಕಷ್ಟು ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಸುಂದರ ಪರಿಸರ ಕಾಪಾಡಬೇಕು ಎನ್ನುವ ಅಧಿಕಾರಿಗಳು, ಶೌಚಾಲಯ ನಿರ್ಮಾಣ ಮಾಡದ ಪರಿ ಣಾಮ ಈ ಬಾರಿ ರೈತರು ಅನಿವಾರ್ಯ ವಾಗಿ ಸುಂದರ ಪ್ರಕೃತಿಯನ್ನು ಬಯಲು ಶೌಚಾಲಯ ಮಾಡಿಕೊಂಡಿದ್ದಾರೆ.

ಜಾನುವಾರುಗಳ ಸಂಖ್ಯೆ ಹೆಚ್ಚಳ: ಈ ಬಾರಿ (ಮಹಿಮರಂಗ)ಗುಟ್ಟೆ ಜಾತ್ರೆಗೆ ಜಾನು ವಾರುಗಳ ಸಂಖ್ಯೆ ಹೆಚ್ಚಾಗಿದ್ದು, ಜಾನುವಾರ ಮಾರಾಟವೂ ದ್ವಿಗುಣವಾಗಿದೆ. ಕಳೆದ ಎರ ಡು ವರ್ಷದಿಂದ ನೋಟು ಅಮಾನ್ಯೀಕರಣಮತ್ತು ಮಳೆ ಪ್ರಮಾಣದಲ್ಲಿ ಭಾರೀ ಇಳಿಕೆ ಯಾಗಿ ದನಕರುಗಳಿಗೆ ಮೇವಿನ ಅಭಾವ ಉಂಟಾಗಿತ್ತು. ಹಾಗಾಗಿ, ರಾಸುಗಳ ಜಾತ್ರೆ ಯಲ್ಲಿ ವ್ಯಾಪಾರ ಇಳಿಕೆಯಾಗಿತ್ತು. ಆದರೆ, ಈ ಬಾರಿ ಮುಂಗಾರು ಮಳೆ ಉತ್ತಮವಾದ ಕಾರಣ ಮೇವಿಗೆ ಯಾವುದೇ ಸಮಸ್ಯೆಯಿಲ್ಲ ಹಾಗೂ ರಾಸುಗಳು ಸಹ ಉತ್ತಮವಾಗಿವೆ. ಹಾಗಾಗಿ, ರಾಸುಗಳ ಬೆಲೆದು ಬಾರಿಯಾಗಿದೆ.

ಮಂಡ್ಯ, ಚಾಮರಾಜನಗರ, ರಾಮನಗರ, ಮಾಗಡಿ, ದೊಡ್ಡಬಳ್ಳಾಪುರ, ತುಮಕೂರು, ಗುಬ್ಬಿ, ಕೋಲಾರ, ಚಿಕ್ಕಬಳ್ಳಾಪುರ, ಹಾಸನ ಮುಂತಾದ ಭಾಗಗಳಿಂದ ಮಾರಾಟ ಮಾಡಲು ರೈತರು ಬಂದಿದ್ದು, ಖರೀದಿ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದಾರೆ. ಆದರೆ, ಐದಾರು ದಿನಗಳ ಕಾಲ ಅದ್ದೂರಿಯಾಗಿ ನಡೆಯಬೇಕಾದ ಜಾತ್ರೆ ರೈತರಿಗೆ ಅಗತ್ಯ ಸೌಲಭ್ಯವಿಲ್ಲದ ಕಾರಣ ಒಂದೆರೆಡು ದಿನದಲ್ಲಿ ಜಾತ್ರೆಯ ಭರಾಟೆ ಕ್ಷೀಣಿಸಬಹುದು ಎನ್ನುತ್ತಾರೆ ರೈತರು.

ವೈದ್ಯಕೀಯ ಅವ್ಯವಸ್ಥೆ: ರಾಜ್ಯದ ನಾನಾ ಭಾಗಗಳಿಂದ ಬರುವ ರಾಸುಗಳಿಗೆ ಸ್ಥಳೀ ಯವಾಗಿ ಯಾವುದೇ ಸಾಂಕ್ರಾಮಿಕ ರೋಗ ಮತ್ತು ಮುಖ್ಯವಾಗಿ ಕಾಲುಬಾಯಿ ರೋಗ ಬಾರದಂತೆ ತಡೆಯಲು ಪಶು ಇಲಾಖೆ ಅಧಿ ಕಾರಿಗಳು ಕೆಲಸ ಮಾಡುತ್ತಿದ್ದಾರೆ. ಆದರೆ, ತಾಲೂಕು ಅಧಿಕಾರಿಗಳು ಪಶು ವೈದ್ಯರನ್ನು ನೇಮಕ ಮಾಡಬಹುದಾಗಿತ್ತು. ಆಸ್ಪತ್ರೆಯ ಸಹಾಯಕರನ್ನು ನೇಮಕ ಮಾಡಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.

ಲಕ್ಷ ರೂ.ವರೆಗೂ ವ್ಯಾಪಾರ: ಗುಟ್ಟೆ ರಾಸುಗಳ ಜಾತ್ರೆಯಲ್ಲಿ ಕನಿಷ್ಠ 15 ಸಾವಿರ ರೂ.ನಿಂದ 3.5ಲಕ್ಷ ರೂ. ವರೆಗೂ ರಾಸು ಗಳು ಮಾರಾಟವಾದವು. ಉತ್ತಮ ದೇಸಿ ತಳಿಗಳು ಒಂದು ಲಕ್ಷ ರೂ.ವರೆಗೂ ಜಾತ್ರೆ ಯಲ್ಲಿ ಮಾರಾಟವಾಗುತ್ತವೆ. ರೈತರಲ್ಲಿ ಕೆಲ ವರು ರಾಸುಗಳನ್ನು ಜಾತ್ರೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಜಾಗರೂಕತೆಯಿಂದ ಮಕ್ಕಳಂತೆ ಸಾಕಿ, ಉತ್ತಮ ಆಹಾರವನ್ನು ನೀಡುತ್ತಾರೆ. ಜಾತ್ರೆ ಗಳಲ್ಲಿ ರಾಸುಗಳನ್ನು ಹೂವಿನಿಂದ ವಿಶೇಷ ವಾಗಿ ಅಲಂಕರಿಸಿ ವಾದ್ಯಗಳೊಂದಿಗೆ ಬೀದಿ ಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ.

ಸಮಸ್ಯೆ ಬಗ್ಗೆ ನಿರ್ಲಕ್ಷ್ಯ: ರೈತ ರಾಮಯ್ಯ ಪ್ರತಿಕ್ರಿಯಿಸಿ, ಪ್ರತಿ ವರ್ಷ ಜಾತ್ರೆಗೆ ಜಾನು ವಾರುಗಳ ಮಾರಾಟಕ್ಕೆ ಬರುತ್ತೇವೆ. ಆದರೆ, ಇಲ್ಲಿ ರೈತರಿಗೆ ಶೌಚಾಲಯ ವ್ಯವಸ್ಥೆಯಿಲ್ಲ. ಅಧಿಕಾರಿಗಳಿಗೆ ತಿಳಿದಿದ್ದರೂ ಸಮಸ್ಯೆ ಬಗೆ ಹರಿಸಲು ಮುಂದಾಗದಿರುವುದು ಬೇಸರ ತಂದಿದೆ ಎಂದು ತಿಳಿಸಿದರು.

ಎರಡು ದಿನದಲ್ಲಿ ತಾತ್ಕಾಲಿಕ ಶೌಚಾಲಯ: ಕುಲುವನಹಳ್ಳಿ ಗ್ರಾಮ ಪಂಚಾಯಿತಿ ಅಭಿ ವೃದ್ಧಿ ಅಧಿಕಾರಿ ಪಿ.ಮಂಜುನಾಥ್‌ ಪ್ರತಿಕ್ರಿ ಯಿಸಿ, ಬೆಟ್ಟದ ತಪ್ಪಲಲ್ಲಿ ಶೌಚಾಲಯದ ಕಟ್ಟಡ ನಿರ್ಮಾಣ ಮಾಡಲಾಗುತ್ತಿದ್ದು, ಇನ್ನೆ ರೆಡು ದಿನಗಳಲ್ಲಿ ತಾತ್ಕಾಲಿಕ ಶೌಚಾ ಲಯ ವ್ಯವಸ್ಥೆ ಮಾಡಲಾಗುವುದು ಎಂದರು.

* ಆರ್‌.ಕೊಟ್ರೇಶ್‌

ಟಾಪ್ ನ್ಯೂಸ್

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.