ಹೊಗೆಮುಕ್ತ ಭಾರತ ಪ್ರಧಾನಿ ಮೋದಿ ಸಂಕಲ್ಪ: ಜೋಷಿ

Team Udayavani, Jan 26, 2019, 12:30 AM IST

2501mlr26-ujwal.jpg

ಮಂಗಳೂರು: ದೇಶದ ಪ್ರತೀ ಮನೆ ಮನೆಗೂ ಅಡುಗೆ ಅನಿಲ ಒದಗಿಸುವ ಮೂಲಕ ಕೆಲವೇ ದಿನಗಳಲ್ಲಿ ಹೊಗೆ ಮುಕ್ತ ಭಾರತ ನಿರ್ಮಾಣ ಮಾಡುವುದು ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸ್ಥಾಯೀ ಸಮಿತಿ ಅಧ್ಯಕ್ಷ ಪ್ರಹ್ಲಾದ ಜೋಷಿ ಹೇಳಿದರು.ಬಿ.ಸಿ.ರೋಡ್‌ನ‌ ನಾರಾಯಣ ಗುರು ವೃತ್ತದ ಬಳಿಯ ಮೈದಾನದಲ್ಲಿ ಶುಕ್ರವಾರ ನಡೆದ ಕೇಂದ್ರ ಸರಕಾರದ ಉಜ್ವಲ ಅಡುಗೆ ಅನಿಲ ವಿತರಣೆ ಹಾಗೂ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಸಾರ್ವತ್ರಿಕ ದಾಖಲೆ 
ದೇಶದಲ್ಲಿ 1955ರಲ್ಲಿ ಸಿಲಿಂಡರ್‌ ಮೂಲಕ ಗ್ಯಾಸ್‌ ನೀಡಲು ಆರಂಭಿಸಲಾಗಿತ್ತು. ಅಲ್ಲಿಂದ 1998ರ ವರೆಗೆ 7 ಕೋಟಿ ಮಾತ್ರ ಎಲ್‌ಪಿಜಿ ವಿತರಿಸಲಾಗಿತ್ತು. ವಾಜಪೇಯಿ ಆಡಳಿತದಲ್ಲಿ ಎಲ್ಲರಿಗೂ ಎಲ್‌ಪಿಜಿ ಎಂಬ ಸಂಕಲ್ಪದೊಂದಿಗೆ ಸುಮಾರು 5ರಿಂದ 6 ಕೋಟಿವಿತರಿಸಲಾಯಿತು. ಬಳಿಕ ಯುಪಿಎ ಸರಕಾರದ ಸಮಯದಲ್ಲಿ 3 ಕೋಟಿ ವಿತರಿಸಲಾಗಿತ್ತು. ಒಟ್ಟು 14ರಿಂದ 15 ಕೋಟಿ
ಯಷ್ಟು ಎಲ್‌ಪಿಜಿ ವಿತರಿಸಲಾಗಿತ್ತು. ಆದರೆ ಮೋದಿ ಪ್ರಧಾನಿಯಾದ ಬಳಿಕ 6 ಕೋಟಿಗಳಷ್ಟು ಎಲ್‌ಪಿಜಿ ವಿತರಿಸುವ ಮೂಲಕ ಸಾರ್ವತ್ರಿಕ ದಾಖಲೆ ಬರೆಯಲಾಗಿದೆ ಎಂದರು.

ಕೇಂದ್ರ ಕುಡಿಯುವ ನೀರು ಹಾಗೂ ಶೌಚಾಲಯ ಅಭಿವೃದ್ಧಿ ಖಾತೆ ರಾಜ್ಯ ಸಚಿವ ರಮೇಶ್‌ ಜಿಗಜಿಣಗಿ ಮಾತನಾಡಿ, ಉಜ್ವಲ ಯೋಜನೆ ಕೋಟ್ಯಂತರ ಮನಸುಗಳನ್ನು ಗೆದ್ದಿದೆ. ನಳಿನ್‌ ಕುಮಾರ್‌ ತಮ್ಮ ಕ್ಷೇತ್ರದಲ್ಲಿ ಈ ಯೋಜನೆಯನ್ನು ಮನೆಮನೆಗೆ ಮುಟ್ಟಿಸಿರುವುದು ಶ್ಲಾಘನೀಯ ಎಂದರು.15,500 ಕೋ.ರೂ ಯೋಜನೆಸಂಸದ ನಳಿನ್‌ ಕುಮಾರ್‌ ಪ್ರಸ್ತಾವನೆಗೈದು, ಮೋದಿ ಸರಕಾರದಲ್ಲಿ ದ.ಕ.ಜಿಲ್ಲೆಗೆ 15,500 ಕೋ.ರೂ.ಗಳ ವಿವಿಧ ಯೋಜನೆಗಳು ಲಭಿಸಿವೆ. ಕುಲಶೇಖರ-ಕಾರ್ಕಳ ರಸ್ತೆ, ಮೂಲ್ಕಿ- ಕಟೀಲು-ಮಂಗಳೂರು ರಸ್ತೆ ಅಭಿವೃದ್ಧಿಗೆ ಶೀಘ್ರದಲ್ಲಿ ಶಿಲಾನ್ಯಾಸ ನೆರವೇರಲಿದೆ ಎಂದರು.

ಶಾಸಕ ರಾಜೇಶ್‌ ನಾೖಕ್‌ ಉಳಿಪಾಡಿ ಗುತ್ತು ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಶಾಸಕರಾದ ಸಿ.ಟಿ. ರವಿ, ಎಸ್‌.ಅಂಗಾರ, ಸಂಜೀವ ಮಠಂದೂರು, ಉಮಾನಾಥ ಕೋಟ್ಯಾನ್‌, ಹರೀಶ್‌ ಪೂಂಜ, ಡಿ. ವೇದವ್ಯಾಸ ಕಾಮತ್‌, ಡಾ| ವೈ. ಭರತ್‌ ಶೆಟ್ಟಿ, ವಿವಿಧ ತೈಲ ಕಂಪೆನಿಗಳ ಪ್ರಮುಖರಾದ ಅಂಬಾ ಭವಾನಿ, ಕೆ. ಶೈಲೇಂದ್ರ, ಪ್ರೇಮನಾಥ್‌, ಪ್ರದೀಪ್‌ ನಾಯರ್‌ ಉಪಸ್ಥಿತರಿದ್ದರು.ಬಿಪಿಸಿಎಲ್‌ ಪ್ರಾದೇಶಿಕ ಮ್ಯಾನೇ ಜರ್‌ ತಂಗವೇಲು ಸ್ವಾಗತಿಸಿದರು.

ಅಚ್ಛೇ ದಿನ್‌ ನಾಗರಿಕರಿಗೆ; ಕಾಂಗ್ರೆಸ್‌ಗಲ್ಲ  !
ಪ್ರಹ್ಲಾದ ಜೋಷಿ ಮಾತನಾಡಿ, “ಅಚ್ಛೇ ದಿನ್‌ ದೇಶದ ಜನರಿಗೆ ಬಂದಿದೆಯೇ ವಿನಾ ಕಾಂಗ್ರೆಸಿಗಲ್ಲ. 2004ರಲ್ಲಿ 50 ಲಕ್ಷ ರೂ. ಆದಾಯದ ಪ್ರಿಯಾಂಕಾ ಪತಿ ರಾಬರ್ಟ್‌ ಈಗ 3.40 ಲಕ್ಷ ಕೋಟಿ ರೂ. ಒಡೆಯನಾಗಿದ್ದು ಹೇಗೆ ಎಂಬುದಕ್ಕೆ ಮೊದಲು ಉತ್ತರಿಸಲಿ ಎಂದು ಸವಾಲು ಹಾಕಿದರು.

“ಹೃದಯ ಭಾಷೆ’ ಬಲ್ಲ ನಳಿನ್‌!
ಸಂಸದ ನಳಿನ್‌ ಮಾತನಾಡಿ, ಕೆಲವರು ನನಗೆ ಇಂಗ್ಲಿಷ್‌, ಹಿಂದಿ ಗೊತ್ತಿಲ್ಲ ಅನ್ನುತ್ತಾರೆ. ಆದರೆ ಕ್ಷೇತ್ರಕ್ಕೆ ಅನುದಾನ ತರುವ ಜಾಣ್ಮೆ ನನ್ನಲ್ಲಿದೆ. ಭಾಷಾ ಸಮಸ್ಯೆಗೆ ಲೋಕಸಭೆಯಲ್ಲಿ ಪ್ರಹ್ಲಾದ್‌ ಜೋಷಿ ನೆರವಾಗುತ್ತಿದ್ದಾರೆ ಎಂದರು. “ದ.ಕ. ಜಿಲ್ಲೆಗೆ ರಾಜ್ಯದಲ್ಲೇ ಅತಿಹೆಚ್ಚು ಅನುದಾನ ತರುವ ಮೂಲಕ ನಳಿನ್‌ ಅಭಿವೃದ್ಧಿಗೆ ಸಾಕ್ಷಿಯಾಗಿದ್ದಾರೆ. ಅವರು ಕ್ಷೇತ್ರದ ಜನರ ಹೃದಯದ ಭಾಷೆಯನ್ನು ಚೆನ್ನಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಜೋಷಿ ತಿಳಿಸಿದರು.

ಕಿಕ್ಕಿರಿದ ಸಭಾಂಗಣ
ಬೃಹತ್‌ ಸಭಾಂಗಣದಲ್ಲಿ 15,000 ಕುರ್ಚಿ ಭರ್ತಿಯಾಗಿ ಸಭಾಂಗಣದ ಇಕ್ಕೆಲಗಳಲ್ಲಿ ಜನರು ನಿಂತು ಕಾರ್ಯಕ್ರಮ ವೀಕ್ಷಿಸಿದರು. ಉಪಾಹಾರ, ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಭದ್ರತೆಗಾಗಿ ಸಿಸಿಟಿವಿ ಅಳವಡಿಸಲಾಗಿತ್ತು. 42 ಫಲಾನುಭವಿಗಳಿಗೆ ಗ್ಯಾಸ್‌ ಸಂಪರ್ಕ ವಿತರಿಸಲಾಯಿತು.

ಟಾಪ್ ನ್ಯೂಸ್

ವಿಕ್ರಮ್‌ ಪುತ್ರನ ಜೊತೆ ಮಾರಿ ಸೆಲ್ವರಾಜ್‌ ಸಿನಿಮಾ: ʼಬೈಸನ್‌ʼ ಫಸ್ಟ್‌ ಲುಕ್‌ ಔಟ್

ವಿಕ್ರಮ್‌ ಪುತ್ರನ ಜೊತೆ ಮಾರಿ ಸೆಲ್ವರಾಜ್‌ ಸಿನಿಮಾ: ʼಬೈಸನ್‌ʼ ಫಸ್ಟ್‌ ಲುಕ್‌ ಔಟ್

Tragedy: ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿ ಹೃದಯಘಾತದಿಂದ ಮೃತ್ಯು…

Tragedy: ಹೃದಯಘಾತದಿಂದ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿ ಮೃತ್ಯು…

Israel War- ಭೂ ದಾಳಿಗೂ ಮುನ್ನ ರಾಫಾದಿಂದ 1 ಲಕ್ಷ ಜನರ ಸ್ಥಳಾಂತರ: WHO

Israel War- ಭೂ ದಾಳಿಗೂ ಮುನ್ನ ರಾಫಾದಿಂದ 1 ಲಕ್ಷ ಜನರ ಸ್ಥಳಾಂತರ: WHO

Haveri: ಲೋಕಸಭಾ ಚುನಾವಣೆ… ಮತಗಟ್ಟೆಗಳಿಗೆ ತೆರಳಿದ ಅಧಿಕಾರಿಗಳು

Haveri: ಲೋಕಸಭಾ ಚುನಾವಣೆ… ಮತಗಟ್ಟೆಗಳಿಗೆ ತೆರಳಿದ ಅಧಿಕಾರಿಗಳು

Women’s T20 World Cup: ಭಾರತ- ಪಾಕಿಸ್ತಾನ ಪಂದ್ಯ ಯಾವಾಗ? ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ

Women’s T20 World Cup: ಭಾರತ- ಪಾಕಿಸ್ತಾನ ಪಂದ್ಯ ಯಾವಾಗ? ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ

12

The Family Man 3: ಬಹು ನಿರೀಕ್ಷಿತ ʼದಿ ಫ್ಯಾಮಿಲಿ ಮ್ಯಾನ್‌ʼ ಸೀಸನ್‌ – 3 ಶೂಟ್‌ ಅರಂಭ

Movie Theater: ಸಿನಿಮಾ ಪ್ರದರ್ಶನವನ್ನು ಶಾಶ್ವತವಾಗಿ ನಿಲ್ಲಿಸಿದ ʼಕಾವೇರಿ ಥಿಯೇಟರ್‌ʼ

Movie Theater: ಸಿನಿಮಾ ಪ್ರದರ್ಶನವನ್ನು ಶಾಶ್ವತವಾಗಿ ನಿಲ್ಲಿಸಿದ ʼಕಾವೇರಿ ಥಿಯೇಟರ್‌ʼ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru; ಕೊಂಕಣಿ ಸಾಹಿತಿ ರೊನಾಲ್ಡ್ ಸಿಕ್ವೇರಾ ನಿಧನ

Mangaluru; ಕೊಂಕಣಿ ಸಾಹಿತಿ ರೊನಾಲ್ಡ್ ಸಿಕ್ವೇರಾ ನಿಧನ

ಮತ್ತೆರಡು ಕಿಂಡಿ ಅಣೆಕಟ್ಟುಗಳಿಗೆ ಅಕ್ರಮ ಮರಳುಗಾರಿಕೆ ಹೊಡೆತ?

ಮತ್ತೆರಡು ಕಿಂಡಿ ಅಣೆಕಟ್ಟುಗಳಿಗೆ ಅಕ್ರಮ ಮರಳುಗಾರಿಕೆ ಹೊಡೆತ?

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

NEET Exam ಕರಾವಳಿಯಲ್ಲಿ ಸುಸೂತ್ರವಾಗಿ ನಡೆದ “ನೀಟ್‌’ ಪರೀಕ್ಷೆ

NEET Exam ಕರಾವಳಿಯಲ್ಲಿ ಸುಸೂತ್ರವಾಗಿ ನಡೆದ “ನೀಟ್‌’ ಪರೀಕ್ಷೆ

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

ವಿಕ್ರಮ್‌ ಪುತ್ರನ ಜೊತೆ ಮಾರಿ ಸೆಲ್ವರಾಜ್‌ ಸಿನಿಮಾ: ʼಬೈಸನ್‌ʼ ಫಸ್ಟ್‌ ಲುಕ್‌ ಔಟ್

ವಿಕ್ರಮ್‌ ಪುತ್ರನ ಜೊತೆ ಮಾರಿ ಸೆಲ್ವರಾಜ್‌ ಸಿನಿಮಾ: ʼಬೈಸನ್‌ʼ ಫಸ್ಟ್‌ ಲುಕ್‌ ಔಟ್

Tragedy: ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿ ಹೃದಯಘಾತದಿಂದ ಮೃತ್ಯು…

Tragedy: ಹೃದಯಘಾತದಿಂದ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿ ಮೃತ್ಯು…

Israel War- ಭೂ ದಾಳಿಗೂ ಮುನ್ನ ರಾಫಾದಿಂದ 1 ಲಕ್ಷ ಜನರ ಸ್ಥಳಾಂತರ: WHO

Israel War- ಭೂ ದಾಳಿಗೂ ಮುನ್ನ ರಾಫಾದಿಂದ 1 ಲಕ್ಷ ಜನರ ಸ್ಥಳಾಂತರ: WHO

Casino Financial Institution Repayment Methods: A Comprehensive Guide

How to Play Roulette Free Online

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.