ಭೂ ಅಂತರ,ಸುರಕ್ಷೆ,ಸಾಮರ್ಥ್ಯ ವೃದ್ಧಿಗೆ “ಸ್ಪನ್‌ ಪೋಲ್‌’

Team Udayavani, Feb 2, 2019, 12:30 AM IST

0201mpl01.jpg

ಮಣಿಪಾಲ: ಜಾಗತಿಕ ನಗರಿ ಮಣಿಪಾಲಕ್ಕೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಅಭಿವೃದ್ಧಿಯ ಸ್ಪರ್ಶ ದೊರೆಯುತ್ತಿರುವಂತೆ, ವಿದ್ಯುತ್‌ ಪೂರೈಸುವ ಮೆಸ್ಕಾಂ ಕೂಡ ಹಳೆಯ ಕಡಿಮೆ ಸಾಮರ್ಥ್ಯದ ಕಂಬ ಹಾಗೂ ವಿದ್ಯುತ್‌ ತಂತಿಗಳನ್ನು ಬದಲಿಸಲು ಆರಂಭಿಸಿದೆ. ಭೂಮಿಗೂ ವಿದ್ಯುತ್‌ ತಂತಿಗಳಿಗೂ ಇರುವ ಅಂತರವನ್ನು ಹೆಚ್ಚಿಸಲು ಮತ್ತು ಸುರಕ್ಷತೆ ದೃಷ್ಟಿಯಿಂದ ಅಧಿಕ ಸಾಮರ್ಥ್ಯದ ಸ್ಪನ್‌ ಪೋಲ್‌ (ಕಾಂಕ್ರೀಟ್‌) ಗಳನ್ನು ಉಡುಪಿ ಜಿಲ್ಲೆಯಲ್ಲೇ ಮೊದಲ ಬಾರಿಗೆ ಮೆಸ್ಕಾಂ ಪರಿಚಯಿಸಿದೆ. ಜತೆಗೆ ಅಧಿಕ ಸಾಮರ್ಥ್ಯದ ತಂತಿಗಳನ್ನೂ ಅಳವಡಿಸಲಾಗುತ್ತಿದೆ. ವೋಲ್ಟೆàಜ್‌ ಸ್ಥಿರತೆ ಕಾಪಾಡಲು ಸಹಕಾರಿಯಾಗುತ್ತದೆ.
  
3ರ ಬದಲು 6 ವಯರ್‌
ಮಣಿಪಾಲ-ಕುಂಜಿಬೆಟ್ಟು 33 ಕೆವಿ ಲೈನ್‌ಗೆ ಹೈಟೆಕ್‌ ಸ್ಪರ್ಶ ನೀಡುತ್ತಿರುವ ಮೆಸ್ಕಾಂ, ನೂತನ ಸ್ಪನ್‌ ಪೋಲ್‌ಗ‌ಳ  ಅಧಿಕ ಸಾಮರ್ಥ್ಯವನ್ನು ಬಳಸಿಕೊಂಡು 3ರ ಬದಲು 6 ವಯರ್‌ಗಳನ್ನು ಹಾಕುತ್ತಿದೆ. ಕಂಡಕ್ಟರ್‌ ಸಾಮರ್ಥ್ಯ ಅಧಿಕಗೊಳಿಸಿ, ಕಯೋಟ್‌ ವಯರ್‌ಗಳನ್ನು ಅಳವಡಿಸಲಾಗಿದ್ದು ಹಿಂದಿದ್ದ ರ್ಯಾಬಿಟ್‌ ವಯರ್‌ಗಳು° ಕೈಬಿಡಲಾಗಿದೆ. ಇದರಿಂದ ಸುರಕ್ಷತೆಯ ಜತೆಗೆ ವಿದ್ಯುತ್‌ ನಷ್ಟವೂ ತಪ್ಪಲಿದೆ. ಈ ವಯರ್‌ಗಳು ಬಲಿಷ್ಠವಾಗಿದ್ದು ತಂತಿ ಕಡಿದು  ಪ್ರಾಣಾಪಾಯ ಆಗುವುದು ತಪ್ಪಲಿದೆ. 

ವಾಹನ ಗುದ್ದಿದರೆ ಹಾನಿ ಕಡಿಮೆ 
ಸ್ಪನ್‌ ಪೋಲ್‌ ಅನ್ನು  ಭೂಮಿಯ ಕೆಳಗೆ 5 ಅಡಿ ಆಳದಲ್ಲಿ ಹೂಳಲಾಗುತ್ತದೆ. ಇದರಿಂದ ಸಣ್ಣ ವಾಹನಗಳು ಗುದ್ದಿದಾಗ ಅಥವಾ ಗೆಲ್ಲುಗಳು ಬಿದ್ದಾಗ ಪಕ್ಕನೆ ಹಾನಿಯಾಗುವುದಿಲ್ಲ. ಅಧಿಕ ಸಾಮರ್ಥ್ಯ ಇರುವುದರಿಂದ ಅವುಗಳಿಗೆ ಪ್ರತ್ಯೇಕ ಸ್ಟೇ ನೀಡುವ ಅಗತ್ಯವಿಲ್ಲ. 

ಇದರಿಂದ ಮೆಸ್ಕಾಂಗೆ ಅನಗತ್ಯ ಖರ್ಚು ತಪ್ಪಲಿದೆ. ಜತೆಗೆ 11 ಮೀಟರ್‌ ಎತ್ತರದಲ್ಲಿರುವುದರಿಂದ ಭೂ ಅಂತರ ಹೆಚ್ಚಿದ್ದು ಯಾವುದೇ ಅಡೆ ತಡೆ ಉಂಟಾಗುವುದಿಲ್ಲ. ಬೆಳೆಯುತ್ತಿರುವ ನಗರಕ್ಕೆ ಇದು ಪೂರಕವಾಗಿದೆ. ಮಂಗಳೂರಿನಲ್ಲಿ ಈ ಕಂಬಗಳನ್ನು ಅಳವಡಿಸಲಾಗಿದೆ. ಉಡುಪಿಯಲ್ಲಿ  ಖಾಸಗಿಯವರು ಇಂತಹ 2 ಕಂಬಗಳನ್ನು ಅಳವಡಿಸಿದ್ದಾರೆ.

ಏನಿದು ಸ್ಪನ್‌ ಪೋಲ್‌?
ಹಿಂದಿದ್ದ 9 ಮೀಟರ್‌ ಕಬ್ಬಿಣ ಮತ್ತು ಕಾಂಕ್ರೀಟ್‌ ಕಂಬಗಳ ಬದಲಿಗೆ 11 ಮೀಟರ್‌ ಎತ್ತರದ ಹಲವು ವೈಶಿಷ್ಟéಗಳಿರುವ ಕೊಳವೆಯಾಕಾರದ ಕಾಂಕ್ರೀಟ್‌ ಕಂಬಗಳೇ ಈ ಸ್ಪನ್‌ ಪೋಲ್‌ಗ‌ಳು. ಸುಮಾರು 20ರಿಂದ 22 ಸಾವಿರ ರೂ. ಪ್ರತಿ ಕಂಬಕ್ಕೆ ವೆಚ್ಚವಾಗಲಿದ್ದು, ಇವು ಹೆಚ್ಚಿನ ಲೋಡ್‌ ಹೊರುವ ಸಾಮರ್ಥ್ಯ ಹೊಂದಿವೆ. ಇದರ ತುದಿಯ ವ್ಯಾಸ ಕಿರಿದಾಗಿದ್ದು, ಕೆಳಭಾಗ ಟೊಳ್ಳಾಗಿರುತ್ತದೆ. ಮೇಲರ್ಧ ಭಾಗ ಕಾಂಕ್ರೀಟ್‌ ಪೂರ್ಣ ತುಂಬಿರುತ್ತವೆ. ಸೆಂಟ್ರಿಫ್ಯೂಗಲ್‌ ಕಾಸ್ಟಿಂಗ್‌ ಮತ್ತು ಸ್ಪಿನ್ನಿಂಗ್‌ ತಂತ್ರಜ್ಞಾನ ಬಳಸಿ ಈ ಪೋಲ್‌ಗ‌ಳನ್ನು ತಯಾರಿಸಲಾಗುತ್ತದೆ.

ಶೇ. 90ರಷ್ಟು ಕಾಮಗಾರಿ ಪೂರ್ಣ
ನೂತನ ಸ್ಪನ್‌ ಪೋಲ್‌ಗ‌ಳನ್ನು ಮತ್ತು ಕಯೋಟ್‌ ವಯರ್‌ಗಳನ್ನು ಅಳವಡಿಸುವ ಕಾಮಗಾರಿ ಶೇ. 90 ಪೂರ್ಣಗೊಂಡಿದ್ದು  ಇಂದ್ರಾಳಿ ರೈಲ್ವೇ ಸೇತುವೆ ಬಳಿಕದ ಸ್ವಲ್ಪ ಕಾಮಗಾರಿ ಬಾಕಿ ಇದೆ. 50-60 ಸ್ಪನ್‌ ಪೋಲ್‌ಗ‌ಳನ್ನು ಅಳವಡಿಸಲಾಗಿದೆ. ಕ್ರಾಸಿಂಗ್‌ ಇರುವಲ್ಲಿ ಎತ್ತರದಲ್ಲಿ ತಂತಿಗಳು ಹಾದುಹೋಗಲು ಸ್ಪನ್‌ ಪೋಲ್‌ಗ‌ಳು ಸಹಕಾರಿಯಾಗಲಿವೆ. ಮುಂದಿನ ವಿದ್ಯುತ್‌ ನಿಲುಗಡೆಯ ದಿನಗಳ‌ಲ್ಲಿ ಕಾಮಗಾರಿ ಪೂರ್ಣವಾಗಲಿದೆ ಎಂದು ಮಣಿಪಾಲ ಎಇಇ ಮಾರ್ತಾಂಡಪ್ಪ ತಿಳಿಸಿದ್ದಾರೆ.

– ಅಶ್ವಿ‌ನ್‌ ಲಾರೆನ್ಸ್‌

ಟಾಪ್ ನ್ಯೂಸ್

1-wddsa-das

Toxic: ಯಶ್ ಸಿನಿಮಾದಿಂದ ಹೊರಹೋದ ಕರೀನಾ ಕಪೂರ್?

kore

KLE ಸಂಸ್ಥೆ ಬೆಳೆದಿದ್ದು ದಾನಿಗಳಿಂದ, ಕಾಂಗ್ರೆಸ್‍ನಿಂದ ಅಲ್ಲ‌: ಪ್ರಭಾಕರ ಕೋರೆ

Gangavathi: ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು…

Gangavathi: ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು…

Heavy Rain: ಹುಣಸೂರು ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಆಲಿಕಲ್ಲು ಮಳೆ…

Heavy Rain: ಹುಣಸೂರು ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಆಲಿಕಲ್ಲು ಮಳೆ…

ಪ್ರಜ್ವಲ್ ನನ್ನು ವಿದೇಶಕ್ಕೆ ಕಳುಹಿಸಿದ್ದೇ ಸಿದ್ದರಾಮಯ್ಯ: ಆರ್.ಅಶೋಕ್ ಆರೋಪ

Bidar; ಪ್ರಜ್ವಲ್ ನನ್ನು ವಿದೇಶಕ್ಕೆ ಕಳುಹಿಸಿದ್ದೇ ಸಿದ್ದರಾಮಯ್ಯ: ಆರ್.ಅಶೋಕ್ ಆರೋಪ

1-wewewqe

Bengaluru ತಂಪೆರೆದ ವರುಣ; ಕೆಲವೆಡೆ ಹಾನಿ: 4 ದಿನ ಮುಂದುವರಿಯುವ ಸಾಧ್ಯತೆ

Yadagiri: ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ; ಪ್ರಕರಣ ದಾಖಲು

Yadagiri: ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ; ಪ್ರಕರಣ ದಾಖಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22

Udupi: ಆಕಸ್ಮಿಕವಾಗಿ ಬಾವಿಗೆ ಬಿದ್ದವರ ರಕ್ಷಣೆ

Ajekar: ಟೆರೇಸಿನಿಂದ ಬಿದ್ದ ಮುಖ್ಯ ಶಿಕ್ಷಕ ಸಾವು

Ajekar: ಟೆರೇಸಿನಿಂದ ಬಿದ್ದ ಮುಖ್ಯ ಶಿಕ್ಷಕ ಸಾವು

Road mishap: ಮಿನಿ ಟೆಂಪೋ ಚಾಲಕನಿಗೆ ಅಪರಿಚಿತ ವಾಹನ ಢಿಕ್ಕಿ; ತೀವ್ರ ಗಾಯ

Road mishap: ಮಿನಿ ಟೆಂಪೋ ಚಾಲಕನಿಗೆ ಅಪರಿಚಿತ ವಾಹನ ಢಿಕ್ಕಿ; ತೀವ್ರ ಗಾಯ

Udupi ಬಿಸಿಲಲ್ಲಿ ಬಿಸಿಯೂಟ ಸೇವಿಸಲು ವಿದ್ಯಾರ್ಥಿಗಳ ನಿರಾಸಕ್ತಿ

Udupi ಬಿಸಿಲಲ್ಲಿ ಬಿಸಿಯೂಟ ಸೇವಿಸಲು ವಿದ್ಯಾರ್ಥಿಗಳ ನಿರಾಸಕ್ತಿ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಇಂಡಿಯಾ ಒಕ್ಕೂಟಕ್ಕೆ ನಾಯಕರೂ ಇಲ್ಲ, ನೇತೃತ್ವವೂ ಇಲ್ಲ: ಸಿ.ಟಿ ರವಿ

ಇಂಡಿಯಾ ಒಕ್ಕೂಟಕ್ಕೆ ನಾಯಕರೂ ಇಲ್ಲ, ನೇತೃತ್ವವೂ ಇಲ್ಲ: ಸಿ.ಟಿ ರವಿ

1-wddsa-das

Toxic: ಯಶ್ ಸಿನಿಮಾದಿಂದ ಹೊರಹೋದ ಕರೀನಾ ಕಪೂರ್?

Karnataka Lok Sabha Poll: ಮೇ 7ಕ್ಕೆ 2ನೇ ಹಂತದ ಮತದಾನ: ಮತ್ತೆ ಬಸ್‌ ದರ ದುಪ್ಪಟ್ಟು

Karnataka Lok Sabha Poll: ಮೇ 7ಕ್ಕೆ 2ನೇ ಹಂತದ ಮತದಾನ: ಮತ್ತೆ ಬಸ್‌ ದರ ದುಪ್ಪಟ್ಟು

kore

KLE ಸಂಸ್ಥೆ ಬೆಳೆದಿದ್ದು ದಾನಿಗಳಿಂದ, ಕಾಂಗ್ರೆಸ್‍ನಿಂದ ಅಲ್ಲ‌: ಪ್ರಭಾಕರ ಕೋರೆ

Gangavathi: ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು…

Gangavathi: ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.