ಐಸಿಸ್ ನಿರ್ನಾಮ ಸನ್ನಿಹಿತ
Team Udayavani, Feb 8, 2019, 12:30 AM IST
ವಾಷಿಂಗ್ಟನ್: ಮುಂದಿನ ವಾರದೊಳಗೆ ಇರಾಕ್ ಮತ್ತು ಸಿರಿಯಾ ದೇಶಗಳು ಐಸಿಸ್ನಿಂದ ಶೇ.100ರಷ್ಟು ಮುಕ್ತವಾಗಲಿದೆ. ಇದನ್ನು ಅಧಿಕೃತವಾಗಿ ಘೋಷಿಸಲು ಕಾತರನಾಗಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಐಸಿಸ್ ಸಿದ್ಧಾಂತವನ್ನು ಮಣಿಸಲು ತಾವು ಹೊಸ ದಾರಿಯಲ್ಲಿ ಸಾಗುತ್ತಿರುವುದಾಗಿ ಅವರು ಹೇಳಿದ್ದಾರೆ. ಸದ್ಯ ಇರಾಕ್ ಮತ್ತು ಸಿರಿಯಾದ ಶೇ.1ರಷ್ಟು ಭೂಮಿ ಮಾತ್ರ ಐಸಿಸ್ ವಶದಲ್ಲಿದೆ. ಜಾಗತಿಕ ಮಟ್ಟದಲ್ಲಿ ಏರ್ಪಟ್ಟ ಸೇನಾ ಮೃತ್ರಿಯಿಂದ ಅವರಿಗೆ ಈ ಮಟ್ಟದಲ್ಲಿ ಹಿನ್ನಡೆಯಾಗಿದೆ ಎಂದಿ ದ್ದಾರೆ.