ಸರ್ಜರಿ: ಮಹಿಳೆಯ ಹೊಟ್ಟೆಯಲ್ಲೇ ಉಳಿದ ಕತ್ತರಿ; ವೈದ್ಯರ ವಿರುದ್ಧ ಕೇಸು
Team Udayavani, Feb 9, 2019, 11:15 AM IST
ಹೈದರಾಬಾದ್ : ಕಳೆದ ವರ್ಷ ನವೆಂಬರ್ ನಲ್ಲಿ ತನ್ನ ಪತ್ನಿಗೆ ಉದರ ಶಸ್ತ್ರ ಚಿಕಿತ್ಸೆ ನಡೆಸಿದ್ದ ಸರಕಾರಿ ಆಸ್ಪತ್ರೆಯ ವೈದ್ಯರ ತಂಡ ಆಕೆಯ ಹೊಟ್ಟೆಯೊಳಗೆ ಶಸ್ತ್ರ ಚಿಕಿತ್ಸೆಯ ಕತ್ತರಿಯನ್ನು ಬಿಟ್ಟಿರುವುದಾಗಿ ವ್ಯಕ್ತಿಯೋರ್ವ ಇಂದು ಶನಿವಾರ ಕೇಸು ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ತೀವ್ರ ಹೊಟ್ಟೆ ನೋವಿನ ಕಾರಣ ನಿನ್ನೆ ಶುಕ್ರವಾರ 33ರ ಹರೆಯದ ಮಹಿಳೆಯು ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋಗಿದ್ದಾಗ ಅಲ್ಲಿ ನಡೆಸಲಾದ ಎಕ್ಸ್ರೇ ಪರೀಕ್ಷೆಯಲ್ಲಿ ಆಕೆಯ ಹೊಟ್ಟೆಯೊಳಗೆ ಶಸ್ತ್ರ ಚಿಕಿತ್ಸೆ ಕತ್ತರಿ ಇರುವುದು ಪತ್ತೆಯಾಗಿತ್ತು.
ಇದನ್ನು ಅನುಸರಿಸಿ ಆಕೆಯ ಪತಿ ವೈದ್ಯರ ನಿರ್ಲಕ್ಷ್ಯ ಮತ್ತು ಅದರಿಂದಾಗಿ ತನ್ನ ಪತ್ನಿಯ ಜೀವಕ್ಕೆ ಅಥವಾ ವೈಯಕ್ತಿಕ ಸುರಕ್ಷೆಗೆ ಎದುರಾಗಿರುವ ಗಂಡಾಂತರವನ್ನು ಆರೋಪಿಸಿ ಪೊಲೀಸರಲ್ಲಿ ಕೇಸು ದಾಖಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ