“ಪೊಗರು’ಗೆ ಜಗಪತಿ ಬಾಬು ವಿಲನ್
Team Udayavani, Feb 13, 2019, 5:36 AM IST
ನಟ ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ “ಪೊಗರು’ ಚಿತ್ರದ ಚಿತ್ರೀಕರಣ ಹೈದರಾಬಾದ್ನಲ್ಲಿ ಭರದಿಂದ ನಡೆಯುತ್ತಿದೆ. ಇದರ ನಡುವೆ “ಪೊಗರು’ ಚಿತ್ರದಲ್ಲಿ ಧ್ರುವ ಸರ್ಜಾ ಎದುರು ಖಳ ನಾಯಕನಾಗಿ ಯಾರು ಅಬ್ಬರಿಸುತ್ತಾರೆ ಎನ್ನುವ ಪ್ರಶ್ನೆಗೂ ಈಗ ಉತ್ತರ ಸಿಕ್ಕಿದೆ.
ಹೌದು, ಈ ಬಾರಿ “ಪೊಗರು’ ಹುಡುಗನಾಗಿ ತೆರೆಮೇಲೆ ಬರುತ್ತಿರುವ ಧ್ರುವ ಸರ್ಜಾಗೆ ವಿಲನ್ ಆಗಿ ತೆರೆಮೇಲೆ ಬಹುಭಾಷಾ ನಟ ಜಗಪತಿ ಬಾಬು ಮುಖಾಮುಖೀಯಾಗಲಿದ್ದಾರೆ. ಈ ಮೊದಲು “ಪೊಗರು’ ಚಿತ್ರದಲ್ಲಿ ಯಾರು ಖಡಕ್ ವಿಲನ್ ಆಗುತ್ತಾರೆ ಎಂಬ ಬಗ್ಗೆ ಹಲವು ಹೆಸರುಗಳು ಹರಿದಾಡಿದ್ದರೂ, ಕೊನೆಗೆ ಚಿತ್ರತಂಡ ಜಗಪತಿ ಬಾಬು ಅವರನ್ನು ಚಿತ್ರಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದೆ.
ಸದ್ಯ ಹೈದರಾಬಾದ್ನಲ್ಲಿ ಧ್ರುವ ಸರ್ಜಾ ಮತ್ತು ಜಗಪತಿ ಬಾಬು ಅವರ ನಡುವಿನ ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಲು ಪ್ಲಾನ್ ಮಾಡಿಕೊಂಡಿರುವ ಚಿತ್ರತಂಡ, ಅದಾದ ಬಳಿಕ ಬೆಂಗಳೂರಿಗೆ ವಾಪಾಸಾಗಿ ಬಾಕಿ ಇರುವ ದೃಶ್ಯಗಳನ್ನು ಚಿತ್ರೀಕರಿಸಲಿದೆ.
ಒಟ್ಟಾರೆ ಜಗಪತಿ ಬಾಬು ಎಂಟ್ರಿಯಿಂದಾಗಿ “ಪೊಗರು’ ಚಿತ್ರದ ಖದರ್ ಮತ್ತಷ್ಟು ಹೆಚ್ಚಿದ್ದು, ಚಿತ್ರದಲ್ಲಿ ದ್ರುವ ಮತ್ತು ಜಗಪತಿ ಬಾಬು ಜುಗಲ್ಬಂದಿ ಎಷ್ಟರ ಮಟ್ಟಿಗೆ ವರ್ಕೌಟ್ ಆಗಲಿದೆ ಅನ್ನೋದು “ಪೊಗರು’ ತೆರೆಗೆ ಬಂದ ಮೇಲಷ್ಟೇ ಗೊತ್ತಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ