ಭಾವೈಕ್ಯತಾ ಶಿಬಿರದಲ್ಲಿ ಪರಿಸರದ ಪಾಠ


Team Udayavani, Feb 16, 2019, 7:27 AM IST

m5-bavykya.jpg

ಹುಣಸೂರು: ಮಹಿಳಾ ಸರ್ಕಾರಿ ಪದವಿ ಕಾಲೇಜಿನಲ್ಲಿ ನಡೆದ ರಾಷ್ಟ್ರಮಟ್ಟದ ಭಾವೈಕ್ಯತಾ ಶಿಬಿರದ ಕೊನೆಯ ದಿನ 200ಕ್ಕೂ ಹೆಚ್ಚು ಶಿಬಿರಾರ್ಥಿಗಳಿಗೆ ನಾಗರಹೊಳೆ ಉದ್ಯಾನದಲ್ಲಿ ಲಕ್ಷ್ಮಣತೀರ್ಥ ನದಿಯ ಉಗಮ ಸ್ಥಾನಕ್ಕೆ ಕರೆದೊಯ್ದು ಪರಿಸರ ಪಾಠ ಜೊತೆಗೆ ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲಾಯಿತು.

ಶಿಬಿರಾರ್ಥಿಗಳು ನಾಗರಹೊಳೆ ಉದ್ಯಾನ ಸಂದರ್ಶನದಲ್ಲಿ ಪ್ರಾಣಿ, ಪಕ್ಷಿ-ಪ್ರಭೇದ, ವನಸಿರಿ ಕಣ್ತುಂಬಿಕೊಂಡರು. ನಾಗರಹೊಳೆ ವಲಯ ಅರಣ್ಯಾಧಿಕಾರಿ ಅಮಿತ್‌ಗೌಡ ಉದ್ಯಾನದ ಬಗ್ಗೆ ಮಾಹಿತಿ ನೀಡಿ, ಈ ಉದ್ಯಾನವನ್ನು ರಾಜೀವ್‌ ಗಾಂಧಿ ನ್ಯಾಷನಲ್‌ ಪಾರ್ಕ್‌ಎಂದು 1992ರಲ್ಲಿ ಮರು ನಾಮಕರಣ ಮಾಡುವ ಜೊತೆಗೆ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲಾಗಿತ್ತು.

ಇದರಿಂದಾಗಿ ಇಲ್ಲಿ ನೂರಕ್ಕೂ ಹೆಚ್ಚು ಹುಲಿಗಳು, ಕರಡಿ, ಕಪ್ಪು ಚಿರತೆ, ಚಿಪ್ಪು ಹಂದಿ, ಆನೆ, ಜಿಂಕೆ, ಕಾಡೆಮ್ಮೆ, ಆಮೆ, ಉಡ, ಸಪೆಂಟೈನಾ ಹದ್ದುಗಳು, ಸಸ್ತನಿಗಳು ಸ್ವತ್ಛಂದವಾಗಿ ವಿಹರಿಸುತ್ತಿವೆ. ಅನೇಕ ಸಸ್ಯ ಪ್ರಭೇದ ಇಲ್ಲಿದೆ ಎಂದು ಹೇಳಿದರು. 

ಡಿಆರ್‌ಎಫ್‌ಒ ಶ್ರೀನಿವಾಸ್‌ ಮಾತನಾಡಿ, ಈ ಉದ್ಯಾನವನ್ನು ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡಿದ್ದರಿಂದಾಗಿ ಅಕ್ರಮ ಪ್ರವೇಶಕ್ಕೆ ಕಡಿವಾಣ ಬಿದ್ದಿದ್ದು, 400 ವರ್ಷದಷ್ಟು ಹಳೆಯದಾದ ತೇಗದ ಮರ ಸೇರಿದಂತೆ ಬೀಟೆ, ನಂದಿ, ಮತ್ತಿ, ಹೊನ್ನೆ ಮರ, ವಿವಿಧ ಜಾತಿಯ ಮರ, ಸಸ್ತನಿಗಳಿಗೆ ಆಶ್ರಯ ತಾಣವಾಗಿದೆ. ಆಹಾರದ ಸರಪಳಿಗಾಗಿ ಬೀಳುವ ಯಾವ ಮರವನ್ನು ತೆಗೆಯದೆ ಬಿಡಲಾಗುತ್ತದೆ. ಇಂತಹ ಉದ್ಯಾನ ಸಂರಕ್ಷಣೆ ಎಲ್ಲರ ಹೊಣೆ ಎಂದರು.

ಇರ್ಪು ಜಲಪಾತ ಭೇಟಿ: ಲಕ್ಷ್ಮಣತೀರ್ಥ ನದಿ ಉಗಮ ಸ್ಥಾನವಾದ ಇರ್ಪು ಫಾಲ್ಸ್‌ಗೂ ಭೇಟಿ ಇತ್ತ ಶಿಬಿರಾರ್ಥಿಗಳು, ಜಲಪಾತದ ನೀರಿನ ಭೋರ್ಗರೆತ ಹಾಗೂ ನಿಸರ್ಗದ ಸೌಂದರ್ಯವನ್ನು ಕಣ್ತುಂಬಿಕೊಂಡು ಸಂತಸಪಟ್ಟರು.

ದರ್ಶನ ನೀಡಿದ ಹುಲಿರಾಯ: ಸಾಮಾನ್ಯವಾಗಿ ಹುಲಿ, ಕಪ್ಪು ಚಿರತೆ ದರ್ಶನವಾಗುವುದು ದುಸ್ತರ. ಆದರೆ, ಈ ವಿದ್ಯಾರ್ಥಿಗಳಿಗೆ ವಾಪಾಸ್‌ ಬರುವ ವೇಳೆ ರಸ್ತೆಯಂಚಿನಲ್ಲೇ ಮಲಗಿದ್ದ ಹುಲಿ ಸಾಕಷ್ಟು ಹೊತ್ತು ದರ್ಶನ ನೀಡಿ ಪುಳಕಿತರನ್ನಾಗಿಸಿತ್ತು. ಮರದ ಮೇಲಿದ್ದ ಕಪ್ಪು ಚಿರತೆ ಜೊತೆಗೆ ಕರಡಿ, ಆನೆಗಳು ಸೇರಿ ಅನೇಕ ಪ್ರಾಣಿ ಪ್ರಭೇದ, ವಿವಿಧ ಜಾತಿಯ ಮರಗಳನ್ನು ಕಂಡು ವನಸಿರಿಗೆ ಮನಸೋತಿದ್ದರು.

ಶಿಬಿರಾಧಿಕಾರಿ ಡಾ.ಕೆ.ಎಸ್‌.ಭಾಸ್ಕರ್‌, ರಮಣಿನಾಯಕ್‌, ಡಾ.ನಂಜುಂಡಸ್ವಾಮಿ, ಡಾ.ಕಲಾಶ್ರೀ ಸೇರಿ ವಿವಿಧ ರಾಜ್ಯಗಳ ಎನ್‌ಎಸ್‌ಎಸ್‌ ಅಧಿಕಾರಿಗಳು ಭಾಗವಹಿಸಿದ್ದರು.

ಟಾಪ್ ನ್ಯೂಸ್

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.