ಪರಿತ್ಯಕ್ತ ಶಿಶು ರಕ್ಷಣೆಗೆ “ಮಮತೆಯ ತೊಟ್ಟಿಲು’

Team Udayavani, Feb 26, 2019, 6:29 AM IST

parityakta.jpg

ಬೆಂಗಳೂರು: ಹೆತ್ತವರಿಂದ ತ್ಯಜಿಸಲ್ಪಟ್ಟ ಅನಾಥ ಮಗುವಿಗೆ ಸುರಕ್ಷಿತ ಆಶ್ರಯ ಒದಗಿಸುವ, ಆ ಮೂಲಕ ಶಿಶು ಮರಣ ಪ್ರಮಾಣ ಕುಗ್ಗಿಸುವ ಉದ್ದೇಶದೊಂದಿಗೆ ಸ್ವಯಂಸೇವಾ ಸಂಸ್ಥೆಯೊಂದು ಮಮತಾ ಕಾ ಜೋಲಾ (ಮಮತೆಯ ತೊಟ್ಟಿಲು) ಎಂಬ ವಿನೂತನ ಯೋಜನೆ ಜಾರಿಗೊಳಿಸಿದೆ.

ಅಸಹಜತೆ ಅಥವಾ ಇಷ್ಟವಿಲ್ಲದ ಕಾರಣಕ್ಕೆ ಜನಿಸಿದ ಮಗುವನ್ನು ಮಹಿಳೆಯರು ಕಸದ ತೊಟ್ಟಿ, ಖಾಲಿ ಜಾಗ ಅಥವಾ ಇತರ ಅನಾರೋಗ್ಯಕರ ಸ್ಥಳಗಳಲ್ಲಿ ಎಸೆದು ಹೋಗುತ್ತಾರೆ. ಇಂಥ ಸಂದರ್ಭದಲ್ಲಿ ಮಗು ಮೃತಪಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇಂತಹ ಶಿಶುಗಳ ರಕ್ಷಣೆಗೆ ವಿಶ್ರಾಂತಿ ಎನ್‌ಜಿಒ “ಮಮತೆಯ ತೊಟ್ಟಿಲು’ ಪರಿಚಯಿಸಿದೆ.

ಭಾರತೀಯ ದಂಡ ಸಂಹಿತೆ 317ರ ಪ್ರಕಾರ ಮಗುವನ್ನು ಹೀಗೆ ಎಸೆದು ಅಥವಾ ಬಿಟ್ಟು ಹೋಗುವುದು ಶಿಕ್ಷಾರ್ಹ ಅಪರಾಧ. ಪೋಷಕರಿಂದ ದೂರವಾಗುವ ಮಕ್ಕಳು ಮುಂದೆ ಏನಾದರು ಎಂಬ ಮಾಹಿತಿಯೇ ಇರುವುದಿಲ್ಲ. ಯಾವುದೇ ಮಗುವಿನ ಬದುಕು ಬರಡಾಗಬಾರದು ಎಂಬ ಆಶಯದೊಂದಿಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.

ಹೇಗಿದೆ ಯೋಜನೆ?: ಸಂಸ್ಥೆಯ ಕೇಂದ್ರಗಳು, ಪಿಎಚ್‌ಸಿ, ಆಸ್ಪತ್ರೆ ಸೇರಿ ವಿವಿಧ ಸ್ಥಳಗಳಲ್ಲಿ ತೊಟ್ಟಿಲು ಇರಿಸಲಾಗುತ್ತದೆ. ಅನಾಥ, ಪರಿತ್ಯಕ್ತ ಮಗುವನ್ನು ತಾಯಂದಿರು ಎಲ್ಲಿಯೋ ಎಸೆಯುವ ಬದಲು ಈ ತೊಟ್ಟಿಲಲ್ಲಿ ಇರಿಸಿ ಹೋಗಬಹುದು. ಈ ತೊಟ್ಟಿಲು ಗಾಳಿ, ಬೆಳಕಿನ ಜತೆ ಸುರಕ್ಷಿತ ವ್ಯವಸ್ಥೆ ಹೊಂದಿರುತ್ತದೆ. ತೊಟ್ಟಿಲಿಗೆ ಮಗುವನ್ನು ಹಾಕಿದ 30 ಸೆಕೆಂಡ್‌ ಒಳಗಾಗಿ ವಿಶ್ರಾಂತಿ ಎನ್‌ಜಿಒ ಸಿಬಂದಿಗೆ ಮಾಹಿತಿ ಲಭಿಸಲಿದೆ. ಇದಾದ 5 ನಿಮಿಷದಲ್ಲಿ ಮಗುವನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಲಾಗುತ್ತದೆ. ಮಗುವನ್ನು ಇರಿಸಿದವರ ಮಾಹಿತಿ ಗೌಪ್ಯವಾಗಿರುತ್ತದೆ.

ಎರಡು ಕಡೆ ಪ್ರಯೋಗ: ಪ್ರಸ್ತುತ ಮಾಲೂರು ತಾಲೂಕಿನ ಯಶವಂತಪುರ ಹಾಗೂ ಕೋಲಾರದ ಎಸ್‌ಎನ್‌ಆರ್‌ ಜಿಲ್ಲಾಸ್ಪತ್ರೆಗಳಲ್ಲಿ ಪ್ರಾಯೋಗಿಕವಾಗಿ ತೊಟ್ಟಿಲು ಇರಿಸಲಾಗಿದೆ. ಭಾರತದಲ್ಲೇ ಮೊದಲ ಬಾರಿ ಇಂಥ ಯೋಜನೆಯೊಂದನ್ನು ಜಾರಿಗೊಳಿಸಿದ್ದು, ಮುಂದಿನ ದಿನಗಳಲ್ಲಿ ಯೋಜನೆಯನ್ನು ಇನ್ನಷ್ಟು ವಿಸ್ತರಿಸಲಾಗುವುದು ಎಂದು ಎನ್‌ಜಿಒ ಸಂಸ್ಥಾಪಕಿ ಸರಸಾ ವಾಸುದೇವನ್‌ ತಿಳಿಸಿದ್ದಾರೆ.

ಹೆಣ್ಣು ಭ್ರೂಣ ಹತ್ಯೆ ತಡೆ: ಪ್ರತಿ ದಿನ ರಾಜ್ಯದ ಪ್ರತಿ ಜಿಲ್ಲೆಯಿಂದ ಒಂದು ನವಜಾತ ಶಿಶು ಹೆತ್ತವರಿಂದ ದೂರವಾಗಿ ಅನಾಥವಾಗುತ್ತದೆ. ಅನಾರೋಗ್ಯಕರ ಸ್ಥಳಗಳಲ್ಲಿ ಎಸೆಯುವ ಬದಲು ಶಿಶುಗಳನ್ನು ತೊಟ್ಟಿಲಿಗೆ ಹಾಕಿದರೆ ರಕ್ಷಿಸಬಹುದು. ಮುಖ್ಯವಾಗಿ ಹೆಣ್ಣು ಭೂಣ ಹತ್ಯೆ ತಡೆಗೆ ನೆರವಾಗುವುದು ಸಂಸ್ಥೆಯ ಆಶಯ.

ಮಮತೆಯ ತೊಟ್ಟಿಲು ಮೂಲಕ ರಕ್ಷಿಸುವ ಮಗುವಿಗೆ ಶಿಕ್ಷಣ ಸೇರಿ ಎಲ್ಲ ಸೌಕರ್ಯ ನೀಡಿ ಉತ್ತಮ ಭವಿಷ್ಯ ನಿರ್ಮಾಣಕ್ಕೆ ಪೂರಕ ವ್ಯವಸ್ಥೆ ಮಾಡುತ್ತೇವೆ. ಮುಂದೆ ಯೋಜನೆಯನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶವಿದೆ.
-ಸರಸಾ ವಾಸುದೇವನ್‌, ವಿಶ್ರಾಂತಿ ಸಂಸ್ಥಾಪಕಿ

* ರಾಜೇಶ್‌ ಪಟ್ಟಿ

ಟಾಪ್ ನ್ಯೂಸ್

Anushka Shetty: ಕನ್ನಡದ ಖ್ಯಾತ ನಿರ್ಮಾಪಕನ ಜೊತೆ ಅನುಷ್ಕಾ ಶೆಟ್ಟಿ ಮದುವೆ?

Anushka Shetty: ಕನ್ನಡದ ಖ್ಯಾತ ನಿರ್ಮಾಪಕನ ಜೊತೆ ಅನುಷ್ಕಾ ಶೆಟ್ಟಿ ಮದುವೆ?

ಯಾರಿಗೆ ಹೇಳೋಣ ನಮ್‌ ಪ್ರಾಬ್ಲಂ… ಸಿನಿಮಾ ಕೊರತೆಯಿಂದ ಥಿಯೇಟರ್‌ಗಳು ತಾತ್ಕಾಲಿಕ ಸ್ಥಗಿತ

ಯಾರಿಗೆ ಹೇಳೋಣ ನಮ್‌ ಪ್ರಾಬ್ಲಂ… ಸಿನಿಮಾ ಕೊರತೆಯಿಂದ ಥಿಯೇಟರ್‌ಗಳು ತಾತ್ಕಾಲಿಕ ಸ್ಥಗಿತ

Shimoga; ಪ್ಲಾಸ್ಟಿಕ್ ನುಂಗಿದ್ದ ಹಾವು ರಕ್ಷಣೆ

Shimoga; ಪ್ಲಾಸ್ಟಿಕ್ ನುಂಗಿದ್ದ ಹಾವು ರಕ್ಷಣೆ

Beans Price: ರಾಂಚಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಬೀನ್ಸ್‌ !

Beans Price: ರಾಂಚಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಬೀನ್ಸ್‌!

Bidar; ಪಲ್ಟಿಯಾಗಿ ನಾಲಿಗೆ ಬಿದ್ದ ಕಾರು; ಚಾಲಕ ಸ್ಥಳದಲ್ಲೇ ಸಾವು

Bidar; ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ನಾಲಿಗೆ ಬಿದ್ದ ಕಾರು; ಚಾಲಕ ಸ್ಥಳದಲ್ಲೇ ಸಾವು

Why not hold a press conference? Prime Minister Modi replied

PM Modi ಪತ್ರಿಕಾಗೋಷ್ಠಿ ಯಾಕೆ ನಡೆಸುವುದಿಲ್ಲ? ಉತ್ತರಿಸಿದ ಪ್ರಧಾನಿ ಮೋದಿ

4-Pavagada

Pavagada: ಸಿಡಿಲಿನ ಪರಿಣಾಮ ಹೊತ್ತಿ ಉರಿದ ದನದ ಕೊಟ್ಟಿಗೆ; ಸ್ಥಳದಲ್ಲಿಯೇ ಹಸು ಸಜೀವ ದಹನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬೆದರಿಸಲು ನೇಣಿಗೆ ಕೊರಳೊಡ್ಡಿದ ಪತಿ ದಿಢೀರ್‌ ಕುಣಿಕೆ ಬಿಗಿದು ಸಾವು

Bengaluru: ಬೆದರಿಸಲು ನೇಣಿಗೆ ಕೊರಳೊಡ್ಡಿದ ಪತಿ ದಿಢೀರ್‌ ಕುಣಿಕೆ ಬಿಗಿದು ಸಾವು

Fraud: ಗೃಹ ಸಚಿವರ ಆಪ್ತ ಎಂದು ನಂಬಿಸಿ ಹಲವರಿಗೆ ವಂಚನೆ

Fraud: ಗೃಹ ಸಚಿವರ ಆಪ್ತ ಎಂದು ನಂಬಿಸಿ ಹಲವರಿಗೆ ವಂಚನೆ

Beans Price: ರಾಂಚಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಬೀನ್ಸ್‌ !

Beans Price: ರಾಂಚಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಬೀನ್ಸ್‌!

Crime: ಕೈ, ಕತ್ತು ಕೊಯ್ದ ಸ್ಥಿತಿಯಲ್ಲಿ ಯುವತಿ ಶವ ಪತ್ತೆ

Crime: ಕೈ, ಕತ್ತು ಕೊಯ್ದ ಸ್ಥಿತಿಯಲ್ಲಿ ಯುವತಿ ಶವ ಪತ್ತೆ

8-bng

17 ಕೋಟಿ ರೂ. ವಿದ್ಯುತ್‌ ಬಿಲ್‌ ಕಂಡು ಮನೆ ಮಾಲೀಕನಿಗೆ ಶಾಕ್‌!

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

Anushka Shetty: ಕನ್ನಡದ ಖ್ಯಾತ ನಿರ್ಮಾಪಕನ ಜೊತೆ ಅನುಷ್ಕಾ ಶೆಟ್ಟಿ ಮದುವೆ?

Anushka Shetty: ಕನ್ನಡದ ಖ್ಯಾತ ನಿರ್ಮಾಪಕನ ಜೊತೆ ಅನುಷ್ಕಾ ಶೆಟ್ಟಿ ಮದುವೆ?

ಯಾರಿಗೆ ಹೇಳೋಣ ನಮ್‌ ಪ್ರಾಬ್ಲಂ… ಸಿನಿಮಾ ಕೊರತೆಯಿಂದ ಥಿಯೇಟರ್‌ಗಳು ತಾತ್ಕಾಲಿಕ ಸ್ಥಗಿತ

ಯಾರಿಗೆ ಹೇಳೋಣ ನಮ್‌ ಪ್ರಾಬ್ಲಂ… ಸಿನಿಮಾ ಕೊರತೆಯಿಂದ ಥಿಯೇಟರ್‌ಗಳು ತಾತ್ಕಾಲಿಕ ಸ್ಥಗಿತ

Shimoga; ಪ್ಲಾಸ್ಟಿಕ್ ನುಂಗಿದ್ದ ಹಾವು ರಕ್ಷಣೆ

Shimoga; ಪ್ಲಾಸ್ಟಿಕ್ ನುಂಗಿದ್ದ ಹಾವು ರಕ್ಷಣೆ

Vijayapura; ತ್ಯಾಜ್ಯನೀರಿನ ಸಂಸ್ಕರಣಾಘಟಕ ದುರಂತ; ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ತಂಡ ಭೇಟಿ

Vijayapura; ತ್ಯಾಜ್ಯನೀರಿನ ಸಂಸ್ಕರಣಾಘಟಕ ದುರಂತ; ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ತಂಡ ಭೇಟಿ

Bengaluru: ಬೆದರಿಸಲು ನೇಣಿಗೆ ಕೊರಳೊಡ್ಡಿದ ಪತಿ ದಿಢೀರ್‌ ಕುಣಿಕೆ ಬಿಗಿದು ಸಾವು

Bengaluru: ಬೆದರಿಸಲು ನೇಣಿಗೆ ಕೊರಳೊಡ್ಡಿದ ಪತಿ ದಿಢೀರ್‌ ಕುಣಿಕೆ ಬಿಗಿದು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.