ರಾಜಕೀಯ ಲಾಭಕ್ಕಾಗಿ ಹೇಮೆ ಹೋರಾಟ


Team Udayavani, Feb 27, 2019, 6:56 AM IST

rajakiyaa.jpg

ಕುಣಿಗಲ್‌: ಲೋಕಸಭಾ ಚುನಾವಣೆ ರಾಜಕೀಯ ಲಾಭ ಪಡೆಯಲು ಹೇಮಾವತಿ ನೀರಿನ ವಿಚಾರ ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿದ್ದೀರಾ ಎಂದು ಮಾಜಿ ಸಂಸದ ಜಿ.ಎಸ್‌.ಬಸವರಾಜು ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ ಸಂಸದ ಡಿ.ಕೆ.ಸುರೇಶ್‌, ಮೊದಲು ನಿಮಗೆ ಬಿಜೆಪಿಯಿಂದ ಟಿಕೆಟ್‌ ಸಿಗುತ್ತಾ ಎಂಬುದರ ಬಗ್ಗೆ ಖಾತರಿ ಪಡಿಸಿಕೊಳ್ಳಿ ಎಂದು ವ್ಯಂಗ್ಯವಾಡಿದ್ದಾರೆ.

ತಾಲೂಕಿನ ಹೆಬ್ಬೂರು ಮತ್ತು ಎಡೆಯೂರು ವ್ಯಾಪ್ತಿಯ ಹೇಮಾವತಿ ಅಚ್ಚುಕಟ್ಟು ಪ್ರದೇಶದ 46 ಕೋಟಿ ರೂ.ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ತಾಲೂಕಿನ ಅಮೃತೂರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಆವರಣದಲ್ಲಿ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. 

ಆಗ ಏನ್‌ ಮಾಡುತ್ತಿದ್ದೀರಿ: ಕುಣಿಗಲ್‌ ತಾಲೂಕಿನ ಜನರ ಆಶೀರ್ವಾದದಿಂದ ನಾಲ್ಕು ಬಾರಿ ಸಂಸದರಾಗಿದ್ದೀರಾ, ಆದರೆ, ನಿಮ್ಮನ್ನು ಗೆಲ್ಲಿಸಿದ ತಾಲೂಕಿನ ಜನತೆಗೆ ನಿಮ್ಮ ಕೊಡುಗೆ ಏನು ಎಂದು ಜಿಎಸ್‌ಬಿ ವಿರುದ್ಧ ಹರಿಹಾಯ್ದರು. ನೀವು ಸಂಸದರಾಗಿದ್ದ ವೇಳೆ ಕಾವೇರಿ ಕೊಳ್ಳದ ನೀರನ್ನು ಕೃಷ್ಣ ಕೊಳ್ಳಕ್ಕೆ ತೆಗೆದುಕೊಂಡು ಹೋಗುವಾಗ ಏನು ಮಾಡುತ್ತಿದ್ದೀರಿ. ತುಮಕೂರು ಜಿಲ್ಲೆಗೆ ಹೇಮಾವತಿ 24 ಟಿಎಂಸಿ ನೀರು ನಿಗದಿಪಡಿಸಲಾಗಿದೆ.

ಈ ಪೈಕಿ ಕುಣಿಗಲ್‌ ತಾಲೂಕಿಗೆ 4 ಟಿಎಂಸಿ ನೀರು ಹರಿಯಬೇಕಾಗಿದೆ. ಆದರೆ. ನೀವು ಅಧಿಕಾರದಲ್ಲಿದ್ದ ವೇಳೆ ಹೇಮಾವತಿ ನಾಲೆಯ ಬಗ್ಗೆ ಎಚ್ಚರ ವಹಿಸಿ ಅಭಿವೃದ್ಧಿಪಡಿಸಿದ್ದರೆ, ಈ ಸಮಸ್ಯೆ ಎದುರಾಗುತ್ತಿರಲಿಲ್ಲ, ನಿಮ್ಮ ಬೇಜವಾಬ್ದಾರಿಯಿಂದ ಜಿಲ್ಲೆಯ ಜನರು ಸಮಸ್ಯೆ ಎದುರಿಸಬೇಕಾಗಿದೆ ಎಂದರು. ನಿಮಗೆ ಈ ಬಾರಿ ಬಿಜೆಪಿ ಟಿಕೆಟ್‌ ಕೊಡಲ್ಲ. ಆ ಕಡೆ ಗಮನ ಹರಿಸಿ.

ಏಕೆ ಸುಮ್ಮನೆ ಕುಣಿಗಲ್‌ ತಾಲೂಕಿನ ವಿರುದ್ಧ ಮಾತನಾಡುತ್ತಿದೀªರಾ. ನಾವು ಎಲ್ಲಿಗೂ ನೀರು ತೆಗೆದುಕೊಂಡು ಹೋಗುತ್ತಿಲ್ಲ. ಕುಣಿಗಲ್‌ಗೆ ಮಾತ್ರ ನೀರು ಸರಾಗವಾಗಿ ಹರಿಯಲು ಪೈಪ್‌ಲೈನ್‌ ಲಿಂಕ್‌ ಮಾಡಿಕೊಳ್ಳುತ್ತಿದೇªವೆ. ಟಿಬಿಸಿ ನಾಲೆ ಅಗಲೀಕರಣಕ್ಕೆ 422 ಕೋಟಿ ರೂ.ಗಳನ್ನು ಸಮ್ಮಿಶ್ರ ಸರ್ಕಾರ ಮಂಜೂರಾತಿ ಮಾಡಿದೆ. ಇಲ್ಲಿ ನಾವು ತುಮಕೂರು ಜಿಲ್ಲೆಗೆ ಹರಿಸುವ ನೀರಿಗೆ ವಿರೋಧ ಮಾಡಿಲ್ಲ. ಆದರೆ ಕುಣಿಗಲ್‌ಗೆ ಮಾತ್ರ ನೀರು ಕೇಳುತ್ತಿದ್ದೇವೆ ಎಂದರು.

ಕಳಪೆ ಮಾಡಿದರೆ ಕಾಮಗಾರಿ ನಿಲ್ಲಿಸಿ: ನಮಗೆ ಗುತ್ತಿಗೆದಾರರು ಮುಖ್ಯ ಅಲ್ಲ ಜನ ಮುಖ್ಯ. ರಸ್ತೆ ಕಾಮಗಾರಿ ಕಳಪೆ ಮಾಡಿದರೆ ಮುಲಾಜಿಲ್ಲದೆ ತಡೆದು ನಿಲ್ಲಿಸಿ. ನಿಮ್ಮೂರ ರಸ್ತೆ ಶಾಶ್ವತವಾಗಿರಬೇಕು ಎಂದು ಸಾರ್ವಜನಿಕರಿಗೆ ಸಂಸದರು ಸಲಹೆ ನೀಡಿದರು. 

ಶಾಸಕ ಡಾ.ರಂಗನಾಥ್‌, ಜಿ.ಪಂ ಸದಸ್ಯೆ ಅನುಸೂಯಮ್ಮ ವೈ.ಕೆ.ಆರ್‌, ಪುರಸಭಾ ಅಧ್ಯಕ್ಷೆ ನಳಿನಾ, ತಾಪಂ ಸದಸ್ಯರಾದ ವಿಶ್ವನಾಥ್‌, ಮುಖಂಡರಾದ ಕೆಂಪೀರೇಗೌಡ, ಕೆಂಪೇಗೌಡ, ಅಲ್ಲಾಬಕಾಶ್‌, ನಂಜೇಗೌಡ್ರು, ಆಡಿಟರ್‌ ನಾಗರಾಜ್‌, ಗೂಳಿಗೌಡ, ರೆಹಮಾನ್‌ ಷರೀಫ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ‌ ವೆಂಕಟರಾಮು, ರಂಗಣ್ಣಗೌಡ, ಪುರಸಭಾ ಸದಸ್ಯರಾದ ಚಂದ್ರಶೇಖರ್‌, ಪಾಪಣ್ಣ, ಗ್ರಾಪಂ ಅಧ್ಯಕ್ಷ ವೆಂಕಟರಾಮು, ಸದಸ್ಯರಾದ ಕಮಲಮ್ಮ, ಶ್ರೀನಿವಾಸ್‌ ಇದ್ದರು. 

ಟಾಪ್ ನ್ಯೂಸ್

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.