ಫುಟ್ಬಾಲ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ ಹಾಕಿ ಕೋಚ್!
Team Udayavani, Mar 2, 2019, 12:30 AM IST
ಹೊಸದಿಲ್ಲಿ: ಭಾರತದ ಮಾಜಿ ಹಾಕಿ ಕೋಚ್ ಹರೇಂದ್ರ ಸಿಂಗ್ ಅವರೀಗ ಫುಟ್ಬಾಲ್ ಕೋಚ್ ಆಗಿ ಬದಲಾಗುವರೇ? ಇಂಥದೊಂದು ಕುತೂಹಲ ದೇಶದ ಕ್ರೀಡಾಭಿಮಾನಿಗಳನ್ನು ಕಾಡಲಾರಂಭಿಸಿದೆ. ಇದಕ್ಕೆ ಕಾರಣ, ಅವರು ಆಲ್ ಇಂಡಿಯಾ ಫುಟ್ಬಾಲ್ ಫೆಡರೇಶನ್ (ಎಐಎಫ್ಎಫ್) “ಡಿ’ ದರ್ಜೆಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿರುವುದು!
ಈ ಕುರಿತು ಪ್ರತಿಕ್ರಿಯಿಸಿದ ಹರೇಂದ್ರ ಸಿಂಗ್, “ನನ್ನ ಮೊದಲ ಆದ್ಯತೆ ಯಾವತ್ತೂ ಹಾಕಿಗೆ. ಹಾಕಿಯನ್ನು ನಾನು ಯಾವತ್ತೂ ಕಡೆಗಣಿಸುವುದಿಲ್ಲ. ಫುಟ್ಬಾಲ್ ನನ್ನ ನೆಚ್ಚಿನ ಕ್ರೀಡೆಯಾದುದರಿಂದ ಇದಕ್ಕೆ ನಾನು ಅರ್ಜಿ ಸಲ್ಲಿಸಿದ್ದೇನೆ, ಅಷ್ಟೇ…’ ಎಂದಿದ್ದಾರೆ. ಈ ನಡುವೆ ಯುರೋಪ್ ಸೇರಿದಂತೆ 2 ದೇಶಗಳಿಂದ ತನಗೆ ಹಾಕಿ ಕೋಚಿಂಗ್ ಅವಕಾಶ ಬಂದಿತ್ತು ಎಂಬುದಾಗಿಯೂ ಅವರು ಹೇಳಿದರು.
ತವರಲ್ಲೇ ನಡೆದ ಕಳೆದ ಹಾಕಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ಕಪ್ ಎತ್ತಲು ವಿಫಲವಾದ ಕಾರಣ ಹರೇಂದ್ರ ಸಿಂಗ್ ಅವರನ್ನು ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಳಿಸಲಾಗಿತ್ತು. ನೂತನ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವೂ ಗುರುವಾರಕ್ಕೆ ಮುಗಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ