ಮುರುಘರಾಜೇಂದ್ರ ಬೃಹನ್ಮಠದ ಇತಿಹಾಸ ದೊಡ್ಡದು


Team Udayavani, Mar 8, 2019, 8:26 AM IST

cta-2.jpg

ಚಿತ್ರದುರ್ಗ: ಧಾರ್ಮಿಕ ಕ್ಷೇತ್ರದಲ್ಲಿ ಮಠಗಳು ಮತ್ತು ಆಶ್ರಮಗಳ ಪಾತ್ರ ಮಹತ್ವದ್ದಾಗಿದೆ. ಅಂತಹ ಮಠಗಳಲ್ಲಿ ಮುರುಘರಾಜೇಂದ್ರ ಬೃಹನ್ಮಠಕ್ಕೆ ಐತಿಹಾಸಿಕ ಸ್ಥಾನವಿದೆ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿ ಮುರುಘಾ ಮಠದ ಬಸವ ಕೇಂದ್ರದ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಏಕತಾ ಶರಣ ಮೇಳ-2019ನ್ನು ಉದ್ಘಾಟಿಸಿ ಶರಣರು ಆಶೀರ್ವಚನ ನೀಡಿದರು.

 ಮುರುಘಾಮಠದ ಮಠಾಧೀಶರು ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ಸುಧಾರಣೆ, ಸಂಘಟನೆ ಮತ್ತು ಜನ ಜಾಗೃತಿಯಂಥ ಉತ್ಕೃಷ್ಟ ಕಾರ್ಯಗಳನ್ನು ನಡೆಸುತ್ತ ಬಂದಿದ್ದಾರೆ. 1924ರಲ್ಲಿ ಕರ್ನಾಟಕಕ್ಕೆ ಬಂದಿದ್ದ ಮಹಾತ್ಮಾ ಗಾಂಧಿಧೀಜಿಯಯವರು ಅಂದಿನ ಜಗದ್ಗುರುಗಳಾದ ಜಯದೇವ ಶ್ರೀಗಳನ್ನು ಭೇಟಿ ಮಾಡಿ ಅಸ್ಪೃಶ್ಯತೆ ನಿವಾರಣೆ ಬಗ್ಗೆ ಚರ್ಚಿಸಿದ್ದಾರೆ.

ಶ್ರೀಮಠದ ಮೂಲಕತೃಗಳಾದ ಮುರುಗಿ ಶಾಂತವೀರರನ್ನು ಛತ್ರಪತಿ ಶಿವಾಜಿ ಮಹಾರಾಜರು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಇದೇ ಮಠದ ಶಾಖಾ ಮಠವಾದ ಅಥಣಿ ಗಚ್ಚಿನಮಠದ ಮುರುಘೇಂದ್ರ ಶಿವಯೋಗಿಗಳನ್ನು ಬಾಲಗಂಗಾಧರ ತಿಲಕರು ಭಾರತಕ್ಕೆ ಸ್ವಾತಂತ್ರ್ಯಾ ಸಿಗುವಂತೆ ಆಶೀರ್ವದಿಸಬೇಕು ಎಂದು ಕೋರಿದ್ದರು. 

ಮಾತ್ರವಲ್ಲ, ಹತ್ತಾರು ರಾಜಮನೆತನಗಳು ಈ ಪೀಠದ ಆಶೀರ್ವಾದ ಪಡೆದ ಭವ್ಯ ಇತಿಹಾಸವಿದೆ. ಕಳೆದ 20 ವರ್ಷಗಳಿಂದ ಪ್ರತಿವರ್ಷ ರಾಜ್ಯದ ಹೊರಗಡೆ ಏಕತಾ ಮೇಳ ಸಂಘಟಿಸುತ್ತ ಬಂದಿದ್ದು, ಈ ಸಲ ಅಸ್ಸಾಂ ರಾಜ್ಯದ ರಾಜಧಾನಿ ಗುವಾಹಟಿಯಲ್ಲಿ ರಾಷ್ಟ್ರೀಯ ಏಕತಾ ಶರಣ ಮೇಳ ನಡೆಸಲಾಗುತ್ತಿದೆ ಎಂದರು.

ಸಮಾಜಸುಧಾರಕರು ಸಮಾಜದಲ್ಲಿನ ಅಂಕುಡೊಂಕುಗಳನ್ನು ತಮ್ಮ ಅರಿವು-ಆಚರಣೆಯಿಂದ ತಿದ್ದಿದ್ದಾರೆ. ಸಂಪ್ರದಾಯದ ಕಂದಕದಿಂದ ಜನಸಾಮಾನ್ಯರನ್ನು ಮೇಲೆತ್ತಿದ್ದಾರೆ. ಸ್ವಪ್ರಯತ್ನ, ಸತತ ಸಾಧನೆ, ದೃಢ ನಿರ್ಧಾರ, ಸ್ಪಷ್ಟವಾದ ಗುರಿ, ಸ್ವಂತ ಭರವಸೆ, ಮಾನವೀಯತೆ ಮತ್ತು ಬದ್ಧತೆ ಮುಂತಾದ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಸಮಾಜಕ್ಕೆ ಸನ್ಮಾರ್ಗ ತೋರಿಸಿದರು ಎಂದು ಸ್ಮರಿಸಿದರು.

ಬಸವಣ್ಣನವರಿಗಿಂತ ಮುಂಚೆಯೂ ಲಿಂಗ ತಾರತಮ್ಯ ಇತ್ತು. ಬಸವಣ್ಣನವರು ಸಮ ಸಮಾಜಕ್ಕಾಗಿ ಹೋರಾಟ ನಡೆಸಿ
ಮಹಿಳೆಯರಿಗೆ ಧಾರ್ಮಿಕ ಹಕ್ಕು ನೀಡಿದರು. ಅಸ್ಪೃಶ್ಯತೆ ಆಚರಣೆ ಮಿತಿ ಮೀರಿತ್ತು. ಶ್ರೇಣೀಕೃತ ವ್ಯವಸ್ಥೆ ಸಮಾಜವನ್ನು ವಿಭಜಿಸಿತ್ತು. ಬಸವಣ್ಣ ಮತ್ತು ಸಮಕಾಲೀನ ಶರಣರ ಸಾಮೂಹಿಕ ಹೋರಾಟದ ಫಲವಾಗಿ ಸಾಮಾಜಿಕ ಸಮಾನತೆ ಸಾಧ್ಯವಾಯಿತು ಎಂದರು. 

ಗುವಾಹಟಿ ನ್ಯಾಷನಲ್‌ ಲಾ ಯುನಿವರ್ಸಿಟಿ ಆ್ಯಂಡ್‌ ಜ್ಯುಡಿಷಿಯಲ್‌ ಅಕಾಡೆಮಿ ಕುಲಪತಿ ಡಾ| ಜೆ.ಎಸ್‌. ಪಾಟೀಲ್‌ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪದ ಮೂಲಕ ಸಾಮೂಹಿಕ ನಾಯಕತ್ವಕ್ಕೆ ಹೆಚ್ಚು ಒತ್ತು ನೀಡಿದ್ದರು. ಧಾರ್ಮಿಕ, ಸಾಮಾಜಿಕ, ಆರ್ಥಿಕ ಸಮಾನತೆಗಾಗಿ ನಿರಂತರವಾಗಿ ಹೋರಾಡಿದ್ದರು. ಅಸ್ಸಾಂ ಭಾಗದಲ್ಲಿ 16ನೇ ಶತಮಾನದಲ್ಲಿ ಬಂದ ಶಂಕರದೇವರು ಬಸವಣ್ಣನವರ ಹಾಗೆ ಆ ಜನರಿಗೆ ಸಮಾನತೆ ತರಲು ಯಶಸ್ವಿಯಾದರು. 

ಶಂಕರದೇವರು ಎಂದರೆ ಈ ಭಾಗದ ಜನರಿಗೆ ದೈವಸ್ವರೂಪಿಯಾಗಿದ್ದಾರೆ. ಅವರ ಆಚಾರ ವಿಚಾರಗಳು ಇಂದಿಗೂ ಪ್ರಸ್ತುತ. ಬಸವಣ್ಣನವರ ಕಲ್ಯಾಣ ಕ್ರಾಂತಿ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಲಿಲ್ಲ. ಸಾರ್ವತ್ರಿಕವಾಗಿ ಜಗತ್ತಿನಾದ್ಯಂತ ಪಸರಿಸಿತು ಎಂದು ತಿಳಿಸಿದರು.

ಸಹಾಯಕ ಪ್ರಾಧ್ಯಾಪಕ ಡಾ| ನೀಲ್‌ ಮೋಹನ್‌ ರಾಯ್‌ ಮಾತನಾಡಿ, ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವಲ್ಲಿ ಶಂಕರದೇವರ ಪಾತ್ರ ಮಹತ್ವದ್ದಾಗಿದೆ. ಶಂಕರದೇವರು ಅಸಮಾನತೆಯ ವಿರುದ್ಧ ಹೋರಾಟ ಮಾಡಿ ಸಫಲತೆ ಕಂಡರು ಎಂದು ತಿಳಿಸಿದರು.

ಪಾಂಡೋಮಟ್ಟಿಯ ಗುರುಬಸವ ಸ್ವಾಮಿಗಳು, ಬಸವ ಶಾಂತಲಿಂಗ ಸ್ವಾಮಿಗಳು, ಬಸವ ಪ್ರಭು ಸ್ವಾಮಿಗಳು, ಬಸವಭೂಷಣ ಸ್ವಾಮಿಗಳು, ಇಮ್ಮಡಿ ಬಸವ ಮೇದಾರ ಕೇತೇಶ್ವರ ಸ್ವಾಮಿಗಳು, ಬಸವ ಮಡಿವಾಳ ಮಾಚಿದೇವ ಸ್ವಾಮಿಗಳು, ಬಸವ ಮುರುಘಾ ಸಾರಂಗ ದೇಶೀಕೇಂದ್ರ ಸ್ವಾಮಿಗಳು, ಮಲ್ಲಿಕಾರ್ಜುನ ಸ್ವಾಮಿಗಳು, ಬಸವ ನಿರಂಜನ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. 

ರಾಜೀವ ಗಾಂಧಿ ಯುನಿವರ್ಸಿಟಿಯ ಗ್ರಂಥಪಾಲಕ ಡಾ| ಮಾಲತೇಶ ಮೋಟೆಬೆನ್ನೂರು, ಗುವಾಹಟಿ ಪಾಂಡು ಕಾಲೇಜಿನ ಪ್ರಾಂಶುಪಾಲ ಡಾ| ಜೋಗೇಶ್‌ ಕಾಕಥಿ ಇದ್ದರು. ಮೇಘಶ್ರೀ ಸಾಣಿಕೊಪ್ಪ ಪ್ರಾರ್ಥಿಸಿದರು. ಈಶ್ವರ ಸಾಣಿಕೊಪ್ಪ ಸ್ವಾಗತಿಸಿದರು.

ಬಸವ ತತ್ವ ಮತ್ತು ಅಸ್ಸಾಂನ ಶಂಕರ ದೇವರ ತತ್ವಗಳಿಗೆ ಹೋಲಿಕೆ ಇದೆ. ಬಸವಣ್ಣನವರು ಕಾಯಕದ ಮೂಲಕ ಜನರನ್ನು ತಲುಪಿದರೆ ಶಂಕರದೇವರು ತಮ್ಮ ತತ್ವಗಳ ಮೂಲಕ ಹಳ್ಳಿಗಳಿಗೆ ಹೋಗಿ ಹಾಡುತ್ತ ಕುಣಿಯುತ್ತ ಜನರನ್ನು ತಲುಪಿದರು. ಅವರದೂ ಭಕ್ತಿಮಾರ್ಗ. ಮಾನವ ಕುಲಕ್ಕೆ ಜ್ಞಾನ ದೀವಿಗೆ ಹಚ್ಚುವಲ್ಲಿ ಯಶಸ್ವಿಯಾದರು.
 ಪ್ರೊ| ಅಮಲೆಂದು ಚಕ್ರವರ್ತಿ, ಗುವಾಹಟಿಯ ಪ್ರಾಧ್ಯಾಪಕ

ಟಾಪ್ ನ್ಯೂಸ್

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Brahmavar

Padubidri: ಅಪಘಾತದ ಗಾಯಾಳು ಸಾವು

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.