ಫ್ಯಾನ್‌ ಆಫ್ ರೆಬೆಲ್‌ಸ್ಟಾರ್‌


Team Udayavani, Mar 19, 2019, 5:41 AM IST

fan-ambi.jpg

ಕನ್ನಡದಲ್ಲಿ ಈಗಾಗಲೇ ಸ್ಟಾರ್‌ ನಟರ ಅಭಿಮಾನದಿಂದ ಅದೆಷ್ಟೋ ನಾಯಕ ನಟರು, ನಿರ್ಮಾಪಕರು, ನಿರ್ದೇಶಕರು ಅವರ ಕುರಿತಾದ ಚಿತ್ರಗಳನ್ನು ಮಾಡಿದ್ದಾರೆ. ಅಷ್ಟೇ ಅಲ್ಲ, ಅಭಿಮಾನಿ ಪಾತ್ರ ಮಾಡುವ ಮೂಲಕ ಚಿತ್ರ ಮಾಡಿರುವುದೂ ಇದೆ. ಈಗ “ಫ್ಯಾನ್‌ ಆಫ್ ರೆಬೆಲ್‌ಸ್ಟಾರ್‌’ ಎಂಬ ಚಿತ್ರವೂ ಸೇರ್ಪಡೆಯಾಗುತ್ತಿದೆ. ಹೌದು, ಇದು ಪಕ್ಕಾ ಅಂಬರೀಶ್‌ ಅಭಿಮಾನಿಯೊಬ್ಬನ ಕಥೆ ಹೊಂದಿರುವ ಚಿತ್ರ.

ಈ ಚಿತ್ರವನ್ನು ರಾಕೇಶ್‌ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ “ತರೆಲ ನನ್ಮಕ್ಳು’ ಮತ್ತು “ಪತಿ ಬೇಕು ಡಾಟ್‌ ಕಾಮ್‌ ಚಿತ್ರ ನಿರ್ದೇಶಿಸಿದ್ದರು. ಈಗ “ಫ್ಯಾನ್‌ ಆಫ್ ರೆಬೆಲ್‌ಸ್ಟಾರ್‌’ ಚಿತ್ರ ನಿರ್ದೇಶನಕ್ಕೆ ಅಣಿಯಾಗಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಜವಾಬ್ದಾರಿಯೂ ಅವರದೇ. ಇನ್ನು, ಈ ಚಿತ್ರದ ನಾಯಕ ಸೇರಿದಂತೆ ನಿರ್ಮಾಪಕರು ಸಹ ಅಂಬರೀಶ್‌ ಅವರ ಅಭಿಮಾನಿಗಳು. ಹಾಗಾಗಿ, ಅವರೆಲ್ಲರೂ ಸೇರಿ ಈ ಚಿತ್ರ ಮಾಡುತ್ತಿದ್ದಾರೆ.

ಇನ್ನು, ಅಂಬರೀಶ್‌ ಅವರ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದ, ಅವರ ಜೊತೆ ಇದ್ದಂತಹ ತಂತ್ರಜ್ಞರೇ ಇಲ್ಲೂ ಕೆಲಸ ಮಾಡಲಿದ್ದಾರೆ. ಹಾಗಾಗಿ ನಾಯಕ ಯಾರು, ನಿರ್ಮಾಪಕರು ಯಾರು, ಯಾರೆಲ್ಲ ತಂತ್ರಜ್ಞರು ಈ ಚಿತ್ರದಲ್ಲಿ ಕೆಲಸ ಮಾಡುತ್ತಾರೆ ಎಂಬಿತ್ಯಾದಿ ವಿಷಯವನ್ನು ಬಿಟ್ಟುಕೊಡದ ನಿರ್ದೇಶಕರು, ಎಲ್ಲವನ್ನೂ ಚಿತ್ರದ ಮುಹೂರ್ತ ವೇಳೆ ಹೇಳಲಿದ್ದಾರಂತೆ.
 

ಏಪ್ರಿಲ್‌ ಎರಡನೇ ವಾರದಲ್ಲಿ ಮಂಡ್ಯದಲ್ಲಿ ಚಿತ್ರಕ್ಕೆ ಮುಹೂರ್ತ ನೆರವೇರಲಿದ್ದು, ಅಂದು ಚಿತ್ರತಂಡವನ್ನು ಪರಿಚಯ ಮಾಡುವ ಯೋಚನೆ ನಿರ್ದೇಶಕರದ್ದು. ಅಂಬರೀಶ್‌ ಅವರ ಪಾರ್ಥಿವ ಶರೀರವನ್ನು ದರ್ಶನಕ್ಕೆ ಇಡಲಾಗಿದ್ದ ಕ್ರೀಡಾಂಗಣದಲ್ಲೇ ಚಿತ್ರದ ಮುಹೂರ್ತ ಸಮಾರಂಭ ನಡೆಯಲಿದೆ. ರಾತ್ರಿ ಸಮಯದಲ್ಲಿ ಚಿತ್ರಕ್ಕೆ ಮುಹೂರ್ತ ನಡೆಯುತ್ತಿದ್ದು, ಅಂದು ವಿಶೇಷ ಕಾರ್ಯಕ್ರಮ ಮೂಲಕ ನಾಯಕ, ನಾಯಕಿ, ತಂತ್ರಜ್ಞರು ಮತ್ತು ನಿರ್ಮಾಪಕರು ಯಾರು ಎಂಬುದನ್ನು ಹೇಳಲಾಗುವುದು ಎನ್ನುತ್ತಾರೆ ನಿರ್ದೇಶಕ ರಾಕೇಶ್‌.

ಎಲ್ಲಾ ಸರಿ, ಈ “ಫ್ಯಾನ್‌ ಆಫ್ ರೆಬೆಲ್‌ಸ್ಟಾರ್‌’ ಚಿತ್ರದ ಕಥೆ ಏನು? ಇದಕ್ಕೆ ಉತ್ತರಿಸುವ ನಿರ್ದೇಶಕ ರಾಕೇಶ್‌, “ಅಂಬರೀಶ್‌ ಅವರನ್ನು ನೋಡಿ ಬೆಳೆದ ವ್ಯಕ್ತಿ, ಅವರಿಂದ ಸ್ಫೂರ್ತಿಗೊಂಡು ಹೇಗೆ ತನ್ನ ಬದುಕು ಕಟ್ಟಿಕೊಳ್ಳುತ್ತಾನೆ ಮತ್ತು ಅಂಬರೀಶ್‌ ಅವರಂತೆಯೇ ನಾಡು, ನುಡಿ ಜಲಕ್ಕಾಗಿ ಹೇಗೆಲ್ಲಾ ಹೋರಾಡುತ್ತಾನೆ ಎಂಬಿತ್ಯಾದಿ ವಿಷಯ ಇರಲಿದೆ. ಮಂಡ್ಯದಲ್ಲೇ ಸುಮಾರು  68 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ.

ಐವರು ಅಂಬರೀಶ್‌ ಅಭಿಮಾನಿಗಳು ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಅವರೊಂದಿಗೆ ಉದ್ಯಮಿಯೊಬ್ಬರೂ ಸಾಥ್‌ ನೀಡುತ್ತಿದ್ದಾರೆ. ಅವರೂ ಸಹ ಅಂಬರೀಶ್‌ ಅಭಿಮಾನಿ ಎಂಬುದು ವಿಶೇಷ ಎನ್ನುವ ರಾಕೇಶ್‌, ಸುಮಲತಾ ಅಂಬರೀಶ್‌ ಅವರನ್ನು ಅಂದಿನ ಮುಹೂರ್ತ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತಿದೆ. ಉಳಿದಂತೆ ಅಂಬರೀಶ್‌ ಅವರ ಅನೇಕ ಆಪ್ತರು ಸಾಕ್ಷಿಯಾಗಲಿದ್ದಾರೆ ಎಂಬುದು ನಿರ್ದೇಶಕರ ಮಾತು.

ಟಾಪ್ ನ್ಯೂಸ್

1——asdsad

IPL ರೋಚಕ ಪಂದ್ಯ:ರಾಜಸ್ಥಾನ್‌ ವಿರುದ್ಧ ಹೈದರಾಬಾದ್ ಗೆ 1 ರನ್ ಜಯ

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

1-wewqewqe

BJP; ಭಾರತ ವಿಶ್ವ ಮಟ್ಟದಲ್ಲಿ ಮಿಂಚಿದ್ದು ಮೋದಿ ಅಭಿವೃದ್ಧಿಯಿಂದ: ಅಣ್ಣಾಮಲೈ

1-asdsad

Farmers ಸಂಪೂರ್ಣ ಸಾಲ ಮನ್ನಾ ಮಾಡದಿದ್ದರೆ ಬೀದಿಗಿಳಿದು ಹೋರಾಟ:ಯಡಿಯೂರಪ್ಪ

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

MP D.K. Suresh: ದೇವೇಗೌಡರ ಕುಟುಂಬವನ್ನು 420 ಎಂದು ಕರೆಯಲ್ಲ: ಡಿಕೆಸು

MP D.K. Suresh: ದೇವೇಗೌಡರ ಕುಟುಂಬವನ್ನು 420 ಎಂದು ಕರೆಯಲ್ಲ: ಡಿಕೆಸು

China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು

China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

rangasthala kannada movie

Kannada Cinema; ರಂಗಮಂಟಪ ಸುತ್ತ ‘ರಂಗಸ್ಥಳ’; ಹೊಸ ಚಿತ್ರದ ಟೈಟಲ್‌ ಲಾಂಚ್‌

jasti preethi kannada movie

Jasti Preethi; ಫೇಸ್ ಬುಕ್ ಪೋಸ್ಟ್ ಸಿನಿಮಾವಾಯಿತು..

Sandalwood: ಪ್ರೇಕ್ಷಕಳಾಗಿ ಕಾಂಗರೂ ನನಗೆ ಇಷ್ಟವಾಯಿತು..

Sandalwood: ಪ್ರೇಕ್ಷಕಳಾಗಿ ಕಾಂಗರೂ ನನಗೆ ಇಷ್ಟವಾಯಿತು..

Sandalwood: ಬಿಸಿಲ ಧಗೆ ಎಫೆಕ್ಟ್; ಔಟ್‌ಡೋರ್‌ ಶೂಟಿಂಗ್‌ನಿಂದ ಸಿನಿಮಂದಿ ದೂರ

Sandalwood: ಬಿಸಿಲ ಧಗೆ ಎಫೆಕ್ಟ್; ಔಟ್‌ಡೋರ್‌ ಶೂಟಿಂಗ್‌ನಿಂದ ಸಿನಿಮಂದಿ ದೂರ

Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ

Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

35

Siddaramaiah: ಚುನಾವಣೆ ಬಂದಾಗ ಮೋದಿಗೆ ರಾಜ್ಯದ ನೆನಪು; ಸಿದ್ದು

1——asdsad

IPL ರೋಚಕ ಪಂದ್ಯ:ರಾಜಸ್ಥಾನ್‌ ವಿರುದ್ಧ ಹೈದರಾಬಾದ್ ಗೆ 1 ರನ್ ಜಯ

Prajwal Revanna: ಪ್ರಜ್ವಲ್‌ ಶೀಘ್ರ ಬಂಧನ: ಡಾ| ಜಿ. ಪರಮೇಶ್ವರ್‌

Prajwal Revanna: ಪ್ರಜ್ವಲ್‌ ಶೀಘ್ರ ಬಂಧನ: ಡಾ| ಜಿ. ಪರಮೇಶ್ವರ್‌

Protest: ಪ್ರಜ್ವಲ್‌, ರೇವಣ್ಣ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

Protest: ಪ್ರಜ್ವಲ್‌, ರೇವಣ್ಣ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

Rahul Gandhi: ಜನಗಣತಿಯಿಂದಲೇ ಅಸಲಿ ರಾಜಕೀಯ ಶುರು: ರಾಹುಲ್‌

Rahul Gandhi: ಜನಗಣತಿಯಿಂದಲೇ ಅಸಲಿ ರಾಜಕೀಯ ಶುರು: ರಾಹುಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.