ಮನೆ ಮೇಲೆ ಜಿಎಸ್ಟಿ ಇಳಿಕೆ ಎ. 1ರಿಂದ ಜಾರಿ
Team Udayavani, Mar 21, 2019, 12:30 AM IST
ಹೊಸದಿಲ್ಲಿ: ಗೃಹ ಯೋಜನೆಗಳ ಮೇಲಿನ ಜಿಎಸ್ಟಿಯನ್ನು ಶೇ. 12ರಿಂದ ಶೇ. 5ಕ್ಕೆ ಇಳಿಸಲಾಗಿದ್ದು, ಹೊಸ ಆದೇಶ ಇದೇ ಎಪ್ರಿಲ್ನ ಅನಂತರ ಜಾರಿಗೊಳ್ಳಲಿದೆ ಎಂದು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಕೌನ್ಸಿಲ್ ಹೇಳಿದೆ.
ಅಂದರೆ, ಎಪ್ರಿಲ್ನ ಅನಂತರ ಶುರುವಾಗುವ ಗೃಹ ನಿರ್ಮಾಣ ಯೋಜನೆಗಳಿಗೆ ಮಾತ್ರ ಈ ನಿಯಮ ಅನ್ವಯವಾಗುತ್ತದೆ. ಇದೇ ವೇಳೆ, ಮುಂಬಯಿನಲ್ಲಿ 75 ಲಕ್ಷ ರೂ.ವರೆಗಿನ ಮನೆಗಳನ್ನು ಕೈಗಟಕುವ ಮನೆ ಯೋಜನೆಯ ವ್ಯಾಪ್ತಿಗೆ ತರಬೇಕೆಂದು ಮಹಾರಾಷ್ಟ್ರ ಸರಕಾರ ಮನವಿ ಮಾಡಿದ್ದು, ಆ ಕುರಿತ ನಿರ್ಧಾರವನ್ನು ಸದ್ಯಕ್ಕೆ ಮುಂದೂಡಲಾಗಿದೆ ಎಂದು ಕೌನ್ಸೆಲ್ ತಿಳಿಸಿದೆ.
ಪ್ರಸ್ತುತ, ಕೈಟಕುವ ಮನೆಗಳ ಮೇಲಿನ ಜಿಎಸ್ಟಿ ಶೇ. 5ರಷ್ಟಿದ್ದು, ಇತರ ಗೃಹ ಯೋಜನೆಗಳ ಮೇಲಿನ ಜಿಎಸ್ಟಿ ಶೇ. 12ರಷ್ಟಿದೆ. ಎಪ್ರಿಲ್ನಿಂದ ಜಾರಿಗೆ ಬರಲಿರುವ ಹೊಸ ನಿಯಮ ದಂತೆ, ಕೈಗಟಕುವ ಮನೆಗಳ ವ್ಯಾಪ್ತಿಯೊಳಗಿನ ಮನೆಗಳಿಗೆ ಶೇ. 1ಕ್ಕೆ ಇಳಿಯಲಿದ್ದು, ಇತರೆ ನಿರ್ಮಾಣ ಹಂತದ ಗೃಹ ಯೋಜ ನೆಗಳ ಮೇಲಿನ ಜಿಎಸ್ಟಿ ಶೇ. 5ಕ್ಕೆ ಇಳಿಯಲಿದೆ. ಹಾಗಾಗಿ, ಮಹಾರಾಷ್ಟ್ರ ಸರಕಾರ 75 ಲಕ್ಷ ರೂ.ವರೆಗಿನ ಮನೆಗಳನ್ನು ಕೈಗಟಕುವ ಮನೆಗಳೆಂದು ಪರಿಗಣಿಸಲು ಮನವಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MUST WATCH
ಹೊಸ ಸೇರ್ಪಡೆ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ