ಟ್ರೈಮ್ಯಾಕ್ಸ್‌ ಕಂಪನಿ ದಿವಾಳಿ; ಬಿಎಂಟಿಸಿಗೆ ತಟ್ಟಿದ ಬಿಸಿ


Team Udayavani, Mar 27, 2019, 11:44 AM IST

trymax

ಬೆಂಗಳೂರು: ಬಿಎಂಟಿಸಿಯ ಮಹತ್ವಾಕಾಂಕ್ಷಿ ಯೋಜನೆ “ಚತುರ ಸಾರಿಗೆ ವ್ಯವಸ್ಥೆ’ (ಐಟಿಎಸ್‌) ಸೇವಾ ನಿರ್ವಹಣೆಯನ್ನು ಗುತ್ತಿಗೆ ಪಡೆದ ಟ್ರೈಮ್ಯಾಕ್ಸ್‌ ಕಂಪೆನಿ ಆರ್ಥಿಕ ದಿವಾಳಿಯಾಗಿದ್ದು, ಇದರಿಂದ ಸಂಸ್ಥೆಯ ಐಟಿಎಸ್‌ ಸೇವೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ಬಸ್‌ಗಳಿಗೆ ಅಳವಡಿಸಿರುವ ಜಿಪಿಎಸ್‌ (ಜಿಯೊ ಪೊಸಿಷನಿಂಗ್‌ ಸಿಸ್ಟ್‌ಂ) ಹಾಗೂ ನಿರ್ವಾಹಕರು ನಿತ್ಯ ಬಳಸುವ ಎಲೆಕ್ಟ್ರಾನಿಕ್‌ ಟಿಕೆಟಿಂಗ್‌ ಮಷಿನ್‌ (ಇಟಿಎಂ)ಗಳ ಸಂಪೂರ್ಣ ನಿರ್ವಹಣೆಯ ಗುತ್ತಿಗೆಯನ್ನು ಟ್ರೈಮ್ಯಾಕ್ಸ್‌ ಐಟಿ ಇನ್‌ಫ್ರಾಸ್ಟ್ರಕ್ಚರ್‌ ಆಂಡ್‌ ಸರ್ವಿಸ್‌ ಲಿ., ಪಡೆದಿತ್ತು.

ಆದರೆ ಅದು ಈಗ ಆರ್ಥಿಕ ದಿವಾಳಿ ಆಗಿದ್ದು, ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಾಧೀಕರಣದ ಸೂಚನೆ ಮೇರೆಗೆ ಉದ್ದೇಶಿತ ಕಂಪೆನಿಯ ವ್ಯವಹಾರ ನೋಡಿಕೊಳ್ಳಲು ಇಂಟರಿಮ್‌ ರೆಸೊಲ್ಯುಷನ್‌ ಪ್ರೊಫೇಷನಲ್‌ (ಐಆರ್‌ಪಿ) ಅನ್ನು ಕೂಡ ನೇಮಿಸಲಾಗಿದೆ. ಇದು ಸಂಸ್ಥೆಯ ಐಟಿ ಸೇವೆಗಳ ವ್ಯತ್ಯಯಕ್ಕೆ ಕಾರಣವಾಗಲಿದೆ.

ಟ್ರೈಮ್ಯಾಕ್ಸ್‌ ಕಂಪೆನಿಯು 10,500-11,000 ಇಟಿಎಂಗಳನ್ನು ಪೂರೈಸಿದೆ. ಅದರಲ್ಲಿ ಈಗಾಗಲೇ ಶೇ. 40ರಷ್ಟು ಮಷಿನ್‌ಗಳು ರಿಪೇರಿಗೆ ಬಂದಿವೆ. ಆದರೆ, ಸಕಾಲದಲ್ಲಿ ದುರಸ್ತಿಗೊಳಿಸುವವರೇ ಇಲ್ಲದಂತಾಗಿದೆ. ಹಾಗಾಗಿ ಇದರ ಬಿಸಿ ತಟ್ಟಲು ಆರಂಭಿಸಿದೆ. ಮತ್ತೂಂದೆಡೆ ಜಿಪಿಎಸ್‌ ಕೈಕೊಟ್ಟರೂ, ಯಾವ ಬಸ್‌ಗಳು ಎಲ್ಲಿ ನಿಂತಿವೆ?

ಯಾವ ಮಾರ್ಗದಲ್ಲಿ ಬರುತ್ತಿವೆ? ಇದೆಲ್ಲವನ್ನೂ ನಿಖರವಾಗಿ ಹೇಳುವುದು ಕಷ್ಟಸಾಧ್ಯವಾಗಲಿದೆ. ಆಗ, ಮತ್ತೆ ಹಿಂದಿನ ವ್ಯವಸ್ಥೆ ಅಂದರೆ ಮ್ಯಾನ್ಯುವಲ್‌ ಆಗಿ ಮಾಡಬೇಕಾಗುತ್ತದೆ ಎಂದು ಹೆಸರು ಬಿಎಂಟಿಸಿ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು.

ಈ ಐಟಿಎಸ್‌ಗೆ ಸಂಬಂಧಿಸಿದ ಉಪಕರಣಗಳ ಖರೀದಿಗಾಗಿ ಬಿಎಂಟಿಸಿಯು ಯಾವುದೇ ಬಂಡವಾಳ ಹೂಡಿಕೆ ಮಾಡಿಲ್ಲ. ಆದರೆ, ಯಂತ್ರಗಳನ್ನು ಪೂರೈಸಿ, ನಿರ್ವಹಣೆ ಮಾಡುತ್ತಿರುವುದರ ಬದಲಿಗೆ ಮಾಸಿಕ ಸುಮಾರು ಒಂದು ಕೋಟಿ ರೂ. ಪಾವತಿಸುತ್ತಿತ್ತು. ಕೆಲ ದಿನಗಳಿಂದ ಈ ಹಣ ಪಾವತಿಯನ್ನು ತಡೆಹಿಡಿಯಲಾಗಿದೆ.

ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಟೆಂಡರ್‌ ಪಡೆದ ಕಂಪೆನಿಗೂ ನಿರಂತರವಾಗಿ ಎಚ್ಚರಿಕೆ ನೀಡುತ್ತ ಬರಲಾಗಿತ್ತು. ಈ ಮಧ್ಯೆ ಅದು ಆರ್ಥಿಕ ದಿವಾಳಿ ಆಗಿರುವುದು ಬೆಳಕಿಗೆಬಂದಿದೆ. ಇದರಿಂದ ಸಂಸ್ಥೆಗೆ ಯಾವುದೇ ನಷ್ಟ ಆಗುವುದಿಲ್ಲ. ಆದರೆ, ನಿಗಮದ ಐಟಿ ಸೇವೆಗಳಿಗೆ ತುಸು ಹಿನ್ನಡೆ ಆದಂತಾಗಿದೆ. 2016ರ ಜುಲೈನಲ್ಲಿ ಟ್ರೈಮ್ಯಾಕ್ಸ್‌ ಕಂಪೆನಿಗೆ ಗುತ್ತಿಗೆ ನೀಡಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಟೆಂಡರ್‌ ರದ್ದು?: ಬಿಎಂಟಿಸಿಯಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಬಸ್‌ಗಳ ಸಂಖ್ಯೆ ಆರು ಸಾವಿರ. ಪೂರೈಕೆ ಆಗಿರುವ ಇಟಿಎಂಗಳ ಸಂಖ್ಯೆ 10,500-11,000. ಅಂದರೆ ಶೇ. 40ರಷ್ಟು ನಮ್ಮ ಬಳಿ ಹೆಚ್ಚುವರಿ ಮಷಿನ್‌ಗಳಿವೆ. ಇನ್ನು ಈಗೆಲ್ಲಾ ಮೊಬೈಲ್‌ನಲ್ಲೇ ಜಿಪಿಎಸ್‌ ವ್ಯವಸ್ಥೆ ಲಭ್ಯ ಆಗುವುದರಿಂದ ಬಸ್‌ಗಳಿಗೆ ಅಳವಡಿಸಿರುವ ಜಿಪಿಎಸ್‌ ಕೈಕೊಟ್ಟರೆ ಅಷ್ಟೇನೂ ಸಮಸ್ಯೆ ಆಗದು.

ಅಷ್ಟಕ್ಕೂ ಟ್ರೈಮ್ಯಾಕ್ಸ್‌ಗೆ ಟೆಂಡರ್‌ ನೀಡಿದ್ದರೂ, ವಾಸ್ತವವಾಗಿ ನಿರ್ವಹಣೆ ಮಾಡುತ್ತಿರುವುದು ಉಪ ಗುತ್ತಿಗೆದಾರ ಕಂಪೆನಿಗಳಾಗಿವೆ. ಅವುಗಳೊಂದಿಗೆ ಈಗಾಗಲೇ ನಿರಂತರ ಸಂಪರ್ಕದಲ್ಲಿದ್ದೇವೆ. ನೇರವಾಗಿ ಹಣ ಪಾವತಿಸಲಿದ್ದು, ನಿಯಮಿತ ನಿರ್ವಹಣೆ ಮಾಡುವಂತೆ ಕೋರಲಾಗಿದೆ. ಮತ್ತೂಂದೆಡೆ ಐಆರ್‌ಪಿ ಜತೆಗೂ ಪತ್ರ ವ್ಯವಹಾರ ನಡೆಸಲಾಗಿದೆ.

ಮುಂದಿನ ದಿನಗಳಲ್ಲಿ ಟ್ರೈಮ್ಯಾಕ್ಸ್‌ಗೆ ನೀಡಿದ ಟೆಂಡರ್‌ ಕೂಡ ರದ್ದುಪಡಿಸಲು ಉದ್ದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಡಳಿತದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಈ ಐಟಿಎಸ್‌ ಅನುಷ್ಠಾನಗೊಳಿಸಲಾಗಿತ್ತು. ಈ ವ್ಯವಸ್ಥೆ ಜಾರಿಗೆ ಬಂದಾಗಿನಿಂದ ಸಂಸ್ಥೆಯಲ್ಲಿ ಸೋರಿಕೆ ಪ್ರಮಾಣ ಕೂಡ ಇಳಿಕೆ ಆಗಿತ್ತು. ಈಗಾಗಲೇ ನಷ್ಟದಲ್ಲಿರುವ ಸಂಸ್ಥೆಯಲ್ಲಿ ಮ್ಯಾನ್ಯುವಲ್‌ ವ್ಯವಸ್ಥೆ ಬಂದರೆ, ಮತ್ತಷ್ಟು ಸಮಸ್ಯೆ ಆಗಲಿದೆ.

ಕೆಎಸ್‌ಆರ್‌ಟಿಸಿಯಲ್ಲಿ ವ್ಯವಸ್ಥೆ ಭಿನ್ನ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ಯಲ್ಲೂ ನಿರ್ವಾಹಕರಿಗೆ ಇದೇ ರೀತಿಯ ಇಟಿಎಂಗಳನ್ನು ನೀಡಲಾಗಿದೆ. ಆದರೆ, ಅವುಗಳನ್ನು ಕ್ವಾಂಟಮ್‌ ಎಂಬ ನಿಗಮವು ಖರೀದಿ ಮಾಡಿದ್ದು, ಮೂರು ವರ್ಷ ವಾರಂಟಿ ಅವಧಿ ಇರುತ್ತದೆ. ಆ ಯಂತ್ರಗಳನ್ನು ಪೂರೈಸಿದ ಕಂಪೆನಿಯೇ ನಿರ್ವಹಣೆ ಮಾಡುತ್ತಿದೆ ಎನ್ನಲಾಗಿದೆ.

* ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

gold-and-silver

Silver ಕೆ.ಜಿ ಗೆ 1,800 ರೂ. ಏರಿಕೆ: ಸಾರ್ವಕಾಲಿಕ ದಾಖಲೆ

IT WORK

Microsoft ಚಿಂತನೆ : ಚೀನದಿಂದ 800 ನೌಕರರ‌ ವರ್ಗ

voter

EC; ಮೊದಲ 4 ಹಂತದ ಚುನಾವಣೆಯಲ್ಲಿ ಶೇ.67 ಮತದಾನ

kejriwal 2

ಜೂ.4ರ ಬಳಿಕ ಐಎನ್‌ಡಿಐಎ ಸರಕಾರ: ಅರವಿಂದ ಕೇಜ್ರಿವಾಲ್‌

Amit Shah

ತುಸು ಬಿಸಿ ಹೆಚ್ಚಾದರೆ ರಾಹುಲ್‌ ಬ್ಯಾಂಕಾಕ್‌ಗೆ ಓಟ: ಅಮಿತ್‌ ಶಾ

congress

Congress ತಮಿಳುನಾಡಿನಲ್ಲಿ ಸ್ವಂತ ಬಲದಿಂದ ಸರಕಾರ ರಚನೆ ಯಾವಾಗ?: ಕೆ.ಸೆಲ್ವ ಪೆರುಂತಗೈ

1-qweqwew

IPL ಭಾರಿ ಮಳೆಯಿಂದ ಪಂದ್ಯ ರದ್ದು; ಹೈದರಾಬಾದ್ ಪ್ಲೇ ಆಫ್ ಗೆ ಪ್ರವೇಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-bng

17 ಕೋಟಿ ರೂ. ವಿದ್ಯುತ್‌ ಬಿಲ್‌ ಕಂಡು ಮನೆ ಮಾಲೀಕನಿಗೆ ಶಾಕ್‌!

7-ಬನಗ

Bengaluru: ಕಾಲೇಜಿನ 6ನೇ ಮಹಡಿಯಿಂದ ಜಿಗಿದು ಬಿಇ ವಿದ್ಯಾರ್ಥಿ ಆತ್ಮಹತ್ಯೆ

6-bng-crime

Drugs ಮಾರಾಟ: ಮೂವರು ವಿದೇಶಿ ಪ್ರಜೆಗಳು ಸೇರಿ 8 ಮಂದಿ ಬಂಧನ ‌

5-bng-crime-1

Bengaluru Crime: ಮನೆ ಮಾಲಕಿಯ ಕೊಂದು ಚಿನ್ನ ದೋಚಿದಳು!

E-bus: ಚಾಲಕರ ಧರಣಿ: ರಸ್ತೆಗಿಳಿಯದ 113 ಇ-ಬಸ್‌

E-bus: ಚಾಲಕರ ಧರಣಿ: ರಸ್ತೆಗಿಳಿಯದ 113 ಇ-ಬಸ್‌

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

1-wqeqewqe

Traffic ದಂಡವನ್ನು ತಪ್ಪಿಸಲು ಹೆಲ್ಮೆಟ್‌ ಧರಿಸಿ ಕಾರು ಚಾಲನೆ!

gold-and-silver

Silver ಕೆ.ಜಿ ಗೆ 1,800 ರೂ. ಏರಿಕೆ: ಸಾರ್ವಕಾಲಿಕ ದಾಖಲೆ

rain

Kerala; ಮೂರ್ನಾಲ್ಕು ದಿನ ಭಾರಿ ಮಳೆ: ಹವಾಮಾನ ಇಲಾಖೆ

marriage 2

Wedding gifts ಪಟ್ಟಿ ಇರಿಸಿಕೊಳ್ಳುವುದು ಕಡ್ಡಾಯ

IT WORK

Microsoft ಚಿಂತನೆ : ಚೀನದಿಂದ 800 ನೌಕರರ‌ ವರ್ಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.