ತುಳು ವೆಲ್ಫೇರ್‌ ಅಸೋಸಿಯೇಶನ್‌ ಡೊಂಬಿವಲಿ: ದಾಸರ ಭಜನಾ ಸ್ಪರ್ಧೆ

Team Udayavani, Mar 28, 2019, 5:35 PM IST

2703mum02

ಮುಂಬಯಿ: ತುಳು ವೆಲ್ಫೆàರ್‌ ಅಸೋಸಿಯೇಶನ್‌ ಸಮಾಜಪರ ಕಾರ್ಯಕ್ರಮವಲ್ಲದೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳಲ್ಲೂ ತೊಡಗಿಸಿಕೊಂಡಿದೆ. ಇಂದು ನಡೆದ ದಾಸರ ಪದಗಳ ಭಜನಾ ಸ್ಪರ್ಧೆಗೆ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ತುಳು-ಕನ್ನಡಿಗರು ಪಾಲ್ಗೊಂಡಿರುವುದು ಸಂತೋಷವಾಗುತ್ತಿದೆ. ಸಂಘದಲ್ಲಿ ಕಡಿಮೆ ಜಾಗವಿದ್ದರೂ ಕೂಡಾ ಸ್ಪರ್ಧೆಯಲ್ಲಿ ಸುಮಾರು 52 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದು, ಅಭಿನಂದನೀಯ. ದಾಸರ ಭಜನೆಗಳು ನಿತ್ಯ ನಿರಂತರವಾಗಿ ಬೆಳಗುತ್ತಿರಲಿ. ಆ ನಿಟ್ಟಿನಲ್ಲಿ ನಮ್ಮ ಈ ಪುಟ್ಟ ಪ್ರಯತ್ನಕ್ಕೆ ಸಹಕಾರ ದೊರಕುತ್ತಿರಲಿ. ದಾಸ ಸಾಹಿತ್ಯವನ್ನು ಇಂದಿನ ಯುವ ಪೀಳಿಗೆಗೆ ತಿಳಿಯಪಡಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಇದು ನಮ್ಮ ಮುಂದಿನ ಕಾರ್ಯಕ್ರಮಗಳಿಗೆ ಪ್ರೇರಣೆಯಾಗಿದೆ ಎಂದು ತುಳು ವೆಲ್ಫೆàರ್‌ ಅಸೋಸಿಯೇಶನ್‌ ಡೊಂಬಿವಲಿ ಅಧ್ಯಕ್ಷ ನಾರಾಯಣ ಪೂಜಾರಿ ನುಡಿದರು.
ಮಾ. 17ರಂದು ಮಧ್ಯಾಹ್ನ ತುಳು ವೆಲ್ಫೆàರ್‌ ಅಸೋಸಿಯೇಶನ್‌ ಡೊಂಬಿವಲಿ ಇದರ ಶ್ರೀ ಲಕ್ಷ್ಮೀ ನಾರಾಯಣ ಭಜನಾ ಮಂಡಳಿಯ ವತಿಯಿಂದ ಸಂಸ್ಥೆಯ ಕಚೇರಿಯಲ್ಲಿ ನಡೆದ ದಾಸರ ಭಜನಾ ಸ್ಪರ್ಧೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರಿಸರದ ತುಳು-ಕನ್ನಡಿಗರು ಸಂಸ್ಥೆಯ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಿದಾಗ ಕಾರ್ಯಕ್ರಮಗಳನ್ನು ಆಯೋಜಿಸಲು ಹುಮ್ಮಸ್ಸು ಬರುತ್ತದೆ. ಇಂತಹ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರ, ಪ್ರೋತ್ಸಾಹವಿರಲಿ ಎಂದು ನುಡಿದರು.
ಸಂಘದ ಗೌರವಾಧ್ಯಕ್ಷ ಯು. ಲಕ್ಷ್ಮಣ್‌ ಸುವರ್ಣ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಹೆಚ್ಚಿನ ತುಳು-ಕನ್ನಡಿಗರು ಸ್ಪರ್ಧೆಯಲ್ಲಿ ಭಾಗವಹಿಸಿರುವುದು ಶ್ಲಾಘನೀಯ. ದಾಸ ಸಾಹಿತ್ಯಕ್ಕೆ ಇದು ನಮ್ಮ ಕಿರು ಕೊಡುಗೆ ಎಂದು ಭಾವಿಸಿದ್ದೇವೆ. ನಿಮ್ಮೆಲ್ಲರ ಸಹಕಾರ ದೊರಕಿದ್ದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ನುಡಿದು ಸಂಸ್ಥೆಯ ಸಿದ್ಧಿ-ಸಾಧನೆಗಳನ್ನು ವಿವರಿಸಿ ಶುಭ ಹಾರೈಸಿದರು.

ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್‌ ಸಿ. ಮೂಲ್ಯ, ಕೋಶಾಧಿಕಾರಿ ಪ್ರಕಾಶ್‌ ಅಮೀನ್‌, ಪೂಜಾ ಸಮಿತಿಯ ಕಾರ್ಯಾಧ್ಯಕ್ಷ ಭಾಸ್ಕರ ಕೋಟ್ಯಾನ್‌, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿನೋದಾ ಶೆಟ್ಟಿ, ಸ್ಪರ್ಧೆಯ ತೀರ್ಪುಗಾರರರಾದ ನಿತ್ಯಪ್ರಕಾಶ್‌ ಎನ್‌. ಶೆಟ್ಟಿ, ವಾಸಂತಿ ಕುಲಕರ್ಣಿ, ಶಿಲ್ಪಾ ದೇಶ್ಪಾಂಡೆ ಹಾಗೂ ಇತರ ಪದಾಧಿಕಾರಿಗಳು, ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಂಘದ ಜತೆ ಕಾರ್ಯದರ್ಶಿ ವಸಂತ ಸುವರ್ಣ ಸ್ವಾಗತಿಸಿ ಅತಿಥಿಗಳನ್ನು ಹಾಗೂ ತೀರ್ಪುಗಾರರನ್ನು ಪರಿಚಯಿಸಿದರು. ಸಂಘದ ಕಾರ್ಯಕರ್ತರಾದ ಭಾಸ್ಕರ ಕೋಟ್ಯಾನ್‌, ತಾರಾನಾಥ ಕುಂದರ್‌, ವಿನೋದ್‌ ಶೆಟ್ಟಿ, ಕುಶಲಾ ಬಂಗೇರ, ವಿನೋದಾ ಪುತ್ರನ್‌ ಅವರು ಅತಿಥಿಗಳು ಮತ್ತು ತೀರ್ಪುಗಾರರನ್ನು ಗೌರವಿಸಿದರು. ತೀರ್ಪುಗಾರ ನಿತ್ಯಪ್ರಕಾಶ್‌ ಶೆಟ್ಟಿ ಅವರು ದಾಸರ ಕೀರ್ತನೆಯನ್ನು ಹಾಡಿದರು.

ಇನ್ನೋರ್ವ ತೀರ್ಪುಗಾರರಾದ ವಸಂತಿ ಕುಲಕರ್ಣಿ ಮಾತನಾಡಿ, ಮಕ್ಕಳೆಲ್ಲರೂ ಉತ್ತಮವಾಗಿ ಹಾಡಿದ್ದಾರೆ. ತಾಳ, ಲಯಕ್ಕೆ ಹೆಚ್ಚಿನ ಗಮನ ಹರಿಸಿದರೆ ಇನ್ನೂ ಉತ್ತಮ. ಪಾಲಕರು ಇದನ್ನು ಗಮನಿಸಬೇಕು ಎಂದರು.

ಶಿಲ್ಪಾ ದೇಶ್ಪಾಂಡೆ ಅವರು ಮಾತನಾಡಿ, ಆಂಗ್ಲ ಮಾಧ್ಯಮದ ಮಕ್ಕಳು ಇಷ್ಟು ಒಳ್ಳೆಯ ರೀತಿಯಿಂದ ದಾಸರ ಕೀರ್ತನೆಯನ್ನು ಹಾಡಿದ್ದು, ತುಂಬಾ ಖುಷಿ ನೀಡಿದೆ. ಈ ರೀತಿಯಾಗಿ ಎಲ್ಲ ಕಡೆಗಳಲ್ಲೂ ದಾಸರ ಭಜನಾ ಸ್ಪರ್ಧೆ ಆಯೋಜಿಸಿದರೆ ಯುವ ಪ್ರತಿಭೆಗಳು ಮುಂದೆ ಉತ್ತಮ ಭಜಕರಾಗಲು ಸಾಧ್ಯವಿದೆ ಎಂದು ನುಡಿದು ಕಾರ್ಯಕ್ರಮದ ಆಯೋಜಕರಿಗೆ ಅಭಿನಂದನೆ ಸಲ್ಲಿಸಿದರು.

ವಸಂತ ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್‌ ಸಿ. ಮೂಲ್ಯ ವಂದಿಸಿದರು. ವಿಜೇತ ಸ್ಪರ್ಧಿಗಳಿಗೆ ಗಣ್ಯರು
ಬಹುಮಾನ ವಿತರಿಸಿ ಶುಭ ಹಾರೈಸಿ ದರು. ಸಂಘದ ಪದಾಧಿಕಾರಿಗಳು, ಮಹಿಳಾ ವಿಭಾಗದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯ-ಸದಸ್ಯೆಯರು ಸಹಕರಿಸಿದರು. ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

5 ರಿಂದ 10 ವರ್ಷದೊಳಗಿನ ವಿಭಾಗದಲ್ಲಿ ಕೌಶಿಕ್‌ ಎಸ್‌. ರೈ ಪ್ರಥಮ, ವಿನಿಶಾ ಜೆ. ಶೆಟ್ಟಿ ದ್ವಿತೀಯ, ವೈಷ್ಣವಿ ವಿ. ರೈ ತೃತೀಯ, ಹಂಸಿನಿ ರಾವ್‌ ಸಮಾಧಾನಕರ ಬಹುಮಾನ ಪಡೆದರು. 11 ರಿಂದ 18 ವರ್ಷದೊಳಗಿನ ವಿಭಾಗದಲ್ಲಿ ಮಾನಸ ಬಂಗೇರ ಮತ್ತು ತೃಷಾ ಜೆ. ಆಳ್ವ ಪ್ರಥಮ, ಆತ್ಮಿಕಾ ಬಿ. ರೈ ದ್ವಿತೀಯ, ಆಶಿಕಾ ಎಸ್‌. ಪ್ರಭು ತೃತೀಯ, ರತನ್‌ ಎಸ್‌. ಪ್ರಭು ಸಮಾಧಾನಕರ ಬಹುಮಾನ ಗಳಿಸಿದರು. 18 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಅಶೋಕ್‌ ಮೆಂಡನ್‌ ಪ್ರಥಮ, ಮಾಧವ ಮೊಗವೀರ ಮತ್ತು ಸುನೀತಾ ಶೆಟ್ಟಿ ದ್ವಿತೀಯ, ಅರ್ಚನಾ ತಡಕೋಡ ತೃತೀಯ, ಸವಿತಾ ಭಟ್‌ ತೃತೀಯ ಬಹುಮಾನ ಗಳಿಸಿದರು.

ಟಾಪ್ ನ್ಯೂಸ್

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.