ಕಾಂಗ್ರೆಸ್‌ ದಲಿತರನ್ನು ತುಳಿಯುವ ಪಕ್ಷ

ಇಎಸ್‌ಐ ಕೇವಲ ತೋರಿಕೆಗಾಗಿ ಕಟ್ಟಿದ್ದು ಅಭಿವೃದ್ಧಿ ಮಾಡದವರನ್ನು ಬೆಂಬಲಿಸಬೇಡಿ

Team Udayavani, Apr 11, 2019, 12:36 PM IST

11-April-12

ಸೇಡಂ: ಮುಧೋಳ ಗ್ರಾಮದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ದಲಿತರ ಸಮಾವೇಶವನ್ನು ಬಿಜೆಪಿ ಮುಖಂಡರಾದ ಕೆ. ರತ್ನಪ್ರಭಾ ಉದ್ಘಾಟಿಸಿದರು.

ಸೇಡಂ: ಕಾಂಗ್ರೆಸ್‌ ಪಕ್ಷದಲ್ಲಿ ಏನೂ ಸರಿಯಿಲ್ಲ. ಅಲ್ಲಿ ದಲಿತರ ಏಳ್ಗೆ ಅಸಾಧ್ಯ.
ಅದೊಂದು ದಲಿತರನ್ನು ತುಳಿಯುವ ಪಕ್ಷವಾಗಿದೆ ಎಂದು ರಾಜ್ಯ ಸರ್ಕಾರದ
ನಿವೃತ್ತ ಮುಖ್ಯ ಕಾರ್ಯದರ್ಶಿ, ಬಿಜೆಪಿ ಮುಖಂಡರಾದ ಕೆ. ರತ್ನಪ್ರಭಾ
ಹೇಳಿದರು.

ತಾಲೂಕಿನ ಮುಧೋಳ ಗ್ರಾಮದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ
ದಲಿತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹತ್ತಾರು ವರ್ಷಗಳು ಕಳೆದರೂ ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿಯಾಗಿಲ್ಲ. ಚರಂಡಿ, ರಸ್ತೆಗಳು ನಿರ್ಮಾಣವಾಗಿಲ್ಲ.

ಸಮಸ್ಯೆಗಳ ಸುಳಿಯಲ್ಲೇ ಜನ ಜೀವನ ದೂಡುತ್ತಿದ್ದಾರೆ. ಈಗಲಾದರೂ
ಜನ ಎಚ್ಚೆತ್ತುಕೊಳ್ಳಬೇಕು. ಅನೇಕ ವರ್ಷಗಳ ಕಾಲ ಅ ಧಿಕಾರ ಕೊಟ್ಟಾಗ
ಅಭಿವೃದ್ಧಿ ಮಾಡದವರನ್ನು ಬೆಂಬಲಿಸುವುದು ಬಿಟ್ಟು, ಹೊಸಬರಿಗೆ
ಅವಕಾಶ ಕಲ್ಪಿಸಬೇಕು ಎನ್ನುವ ಮೂಲಕ ಡಾ| ಮಲ್ಲಿಕಾರ್ಜುನ
ಖರ್ಗೆ ಅವರನ್ನು ಪರೋಕ್ಷವಾಗಿ ಟೀಕಿಸಿದರು.

ಮತದಾರರಿಗೆ ಮತವೇ ಬಹುದೊಡ್ಡ ಆಯುಧ, ಅದರ ಸದ್ಬಳಕೆಯಾಗಬೇಕು. ಮತದಾರರು ಜಾಗೃತರಾಗಿ ಮತ ಚಲಾಯಿಸಬೇಕು. ನಾನು ಬಿಜೆಪಿಗೆ ಬರಲು ಪ್ರಮುಖ ಕಾರಣ ಡಾ| ಉಮೇಶ ಜಾಧವ ಎಂದು ಹೇಳಿದರು.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ ಮಾತನಾಡಿ, ದೇಶದ ಹೊರಗಿನಿಂದ ಪಾಕಿಸ್ತಾನ್‌ ಮತ್ತು ಒಳಗಿನಿಂದ ಡಾ| ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್‌ ಗಾಂಧಿ  ಹೊರತುಪಡಿಸಿದರೆ ಪ್ರಧಾನಿ ಮೋದಿ ಅವರನ್ನು ವಿರೋಧಿಸುವವರೇ ಇಲ್ಲ. ಖರ್ಗೆ ತಮ್ಮ ಮಗನಿಗಾಗಿ ಅನೇಕ
ಮುಖಂಡರನ್ನು ಹೊರಹಾಕಿದ್ದಾರೆ ಎಂದು ಹೇಳಿದರು.

ಲೋಕಸಭೆ ಬಿಜೆಪಿ ಅಭ್ಯರ್ಥಿ ಡಾ| ಉಮೇಶ ಜಾಧವ
ಮಾತನಾಡಿ, ಕಲಬುರಗಿ ರಸ್ತೆಯಲ್ಲಿ ನಿರ್ಮಾಣವಾಗಿರುವ 10 ಸಾವಿರ ಕೋಟಿ
ರೂ. ವೆಚ್ಚದ ಇಎಸ್‌ಐಸಿ ಆಸ್ಪತ್ರೆ ಕೇವಲ ತೋರಿಕೆಗಾಗಿ ಖರ್ಗೆ ಕಟ್ಟಿಸಿದ್ದಾರೆ. ಅಲ್ಲಿ ಸರಿಯಾದ ವೈದ್ಯಕೀಯ ಸೌಲಭ್ಯವಿಲ್ಲ. ನಮಗೆ ಅವಕಾಶ ಕೊಡಿ ದೇಶದಲ್ಲೇ ನಂ.1 ಆಸ್ಪತ್ರೆಯಾಗಿ ಮಾರ್ಪಾಡು ಮಾಡುತ್ತೇವೆ ಎಂದರು.

ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ, ಶಶಿಲ ನಮೋಶಿ,
ಮಾಜಿ ಉಪ ಸಭಾಪತಿ ಚಂದ್ರಶೇಖರರೆಡ್ಡಿ ದೇಶಮುಖ ಮದನಾ, ಜಿಪಂ ಸದಸ್ಯ ಶರಣು ಮೆಡಿಕಲ್‌, ಡಾ| ಮಿಸ್ಕಿನ್‌, ವಿಕ್ರಂ ಪಾಟೀಲ, ಪರ್ವತರೆಡ್ಡಿ ಪಾಟೀಲ
ನಾಮವಾರ, ಡಾ| ಮಧುಸೂಧನರೆಡ್ಡಿ, ಭೀಮರಾಯ ಕೋಡ್ಲಾ,
ಕಲ್ಯಾಣಪ್ಪಗೌಡ ಪಾಟೀಲ, ಧರ್ಮಣ್ಣ ಇಟಗಾ, ನಾಗಪ್ಪ ಕೊಳ್ಳಿ, ವಿಶ್ವನಾಥರೆಡ್ಡಿ ಪಾಟೀಲ, ಓಂಪ್ರಕಾಶ ಪಾಟೀಲ ಹಾಗೂ ಮತ್ತಿತರರು ಇದ್ದರು.

ಟಾಪ್ ನ್ಯೂಸ್

ಕಾಶಿಯಲ್ಲಿ ಕಾಲು ಸಂಕ- ಬಟ್ಟೆ ಒಗೆಯುವ ಕಲ್ಲಾಗಿದೆ ಕೆಳದಿ ಸಾಮ್ರಾಜ್ಯದ ಶಾಸನ

ಅವ್ಯವಸ್ಥೆ… ಕಾಶಿಯಲ್ಲಿ ಕಾಲು ಸಂಕ- ಬಟ್ಟೆ ಒಗೆಯುವ ಕಲ್ಲಾಗಿದೆ ಕೆಳದಿ ಸಾಮ್ರಾಜ್ಯದ ಶಾಸನ

PU ಕಂಪ್ಯೂಟರ್‌ ಸೈನ್ಸ್‌, ಸೈಕಾಲಜಿಗೂ ಎನ್‌ಸಿಇಆರ್‌ಟಿ ಪಠ್ಯ

PU ಕಂಪ್ಯೂಟರ್‌ ಸೈನ್ಸ್‌, ಸೈಕಾಲಜಿಗೂ ಎನ್‌ಸಿಇಆರ್‌ಟಿ ಪಠ್ಯ

ಕೇರಳದಲ್ಲಿ 2 ವಾರದಲ್ಲಿ 2 ಲಕ್ಷ ಮಂದಿಗೆ ಸಾಂಕ್ರಾಮಿಕ ರೋಗ; 10 ಸಾವು

ಕೇರಳದಲ್ಲಿ 2 ವಾರದಲ್ಲಿ 2 ಲಕ್ಷ ಮಂದಿಗೆ ಸಾಂಕ್ರಾಮಿಕ ರೋಗ; 10 ಸಾವು

KARಸಾಗರದಾಚೆಯಿಂದ ತವರಿಗೆ ಕರೆ ತಂದ ಕೃಷಿ ಪ್ರೀತಿ

Karkala ಸಾಗರದಾಚೆಯಿಂದ ತವರಿಗೆ ಕರೆ ತಂದ ಕೃಷಿ ಪ್ರೀತಿ

Hyderabad: ನಟಿ ಪವಿತ್ರ ಜಯರಾಂ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ, ಗೆಳೆಯ ಚಂದು ಆತ್ಮಹತ್ಯೆ

Hyderabad: ನಟಿ ಪವಿತ್ರ ಜಯರಾಂ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ, ಗೆಳೆಯ ಚಂದು ಆತ್ಮಹತ್ಯೆ

lರಾಜ್ಯದಲ್ಲಿ 12 ವರ್ಷಗಳಲ್ಲಿ 881ಸಾವು! ಸಿಡಿಲಾಘಾತದಿಂದ ಸಾವು ಬೆಳಗಾವಿ,ಬೀದರ್‌ನಲ್ಲೇ ಹೆಚ್ಚು

ರಾಜ್ಯದಲ್ಲಿ 12 ವರ್ಷಗಳಲ್ಲಿ 881ಸಾವು! ಸಿಡಿಲಾಘಾತದಿಂದ ಸಾವು ಬೆಳಗಾವಿ,ಬೀದರ್‌ನಲ್ಲೇ ಹೆಚ್ಚು

Bengaluru-Mysuru Expressway; 15 ದಿನಗಳ‌ಲ್ಲಿ 12 ಸಾವಿರ ವಾಹನಗಳಿಗೆ ದಂಡ!

Bengaluru-Mysuru Expressway; 15 ದಿನಗಳ‌ಲ್ಲಿ 12 ಸಾವಿರ ವಾಹನಗಳಿಗೆ ದಂಡ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi; Suresh Sajjan submits nomination as BJP rebel candidate

Kalaburagi; ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸುರೇಶ ಸಜ್ಜನ್ ನಾಮಪತ್ರ ಸಲ್ಲಿಕೆ

Kalaburagi: ಮರ್ಮಾಂಗಕ್ಕೆ ಕರೆಂಟ್ ಶಾಕ್ ನೀಡಿದ ಪ್ರಕರಣ: ಶೀಘ್ರ ಇನ್ನುಳಿದ ಆರೋಪಿಗಳ ಬಂಧನ

Kalaburagi: ಮರ್ಮಾಂಗಕ್ಕೆ ಕರೆಂಟ್ ಶಾಕ್ ನೀಡಿದ ಪ್ರಕರಣ: ಶೀಘ್ರ ಇನ್ನುಳಿದ ಆರೋಪಿಗಳ ಬಂಧನ

ಕಲಬುರಗಿ: ಎಂಎಲ್ಸಿ ಚುನಾವಣೆಯಲ್ಲಿ ಕೈತಪ್ಪಿದ ಟಿಕೆಟ್: ಬಿಜೆಪಿಯಲ್ಲಿ ಬಂಡಾಯ ಬಿಸಿ

ಎಂಎಲ್ಸಿ ಚುನಾವಣೆ: ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮುಂದಾದ ಬಿಜೆಪಿ ನಾಯಕ…

2-kalburgi

Kalburgi: ಕರೆಂಟ್ ಶಾಕ್ ಪ್ರಕರಣ;ಖಂಡಿಸಿ ಹಿಂದೂ ಜಾಗೃತಿ ಸೇನೆಯಿಂದ ಸರಕಾರದ ಪ್ರತಿಕೃತಿ ದಹನ

1-wqew-ewqe

Kalaburagi: ಹಣಕ್ಕಾಗಿ ಮೂವರ ವಿವಸ್ತ್ರಗೊಳಿಸಿ ಗುಪ್ತಾಂಗಕ್ಕೆ ಶಾಕ್‌!: 7 ಮಂದಿ ಸೆರೆ

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

ಕಾಶಿಯಲ್ಲಿ ಕಾಲು ಸಂಕ- ಬಟ್ಟೆ ಒಗೆಯುವ ಕಲ್ಲಾಗಿದೆ ಕೆಳದಿ ಸಾಮ್ರಾಜ್ಯದ ಶಾಸನ

ಅವ್ಯವಸ್ಥೆ… ಕಾಶಿಯಲ್ಲಿ ಕಾಲು ಸಂಕ- ಬಟ್ಟೆ ಒಗೆಯುವ ಕಲ್ಲಾಗಿದೆ ಕೆಳದಿ ಸಾಮ್ರಾಜ್ಯದ ಶಾಸನ

PU ಕಂಪ್ಯೂಟರ್‌ ಸೈನ್ಸ್‌, ಸೈಕಾಲಜಿಗೂ ಎನ್‌ಸಿಇಆರ್‌ಟಿ ಪಠ್ಯ

PU ಕಂಪ್ಯೂಟರ್‌ ಸೈನ್ಸ್‌, ಸೈಕಾಲಜಿಗೂ ಎನ್‌ಸಿಇಆರ್‌ಟಿ ಪಠ್ಯ

ಕೇರಳದಲ್ಲಿ 2 ವಾರದಲ್ಲಿ 2 ಲಕ್ಷ ಮಂದಿಗೆ ಸಾಂಕ್ರಾಮಿಕ ರೋಗ; 10 ಸಾವು

ಕೇರಳದಲ್ಲಿ 2 ವಾರದಲ್ಲಿ 2 ಲಕ್ಷ ಮಂದಿಗೆ ಸಾಂಕ್ರಾಮಿಕ ರೋಗ; 10 ಸಾವು

KARಸಾಗರದಾಚೆಯಿಂದ ತವರಿಗೆ ಕರೆ ತಂದ ಕೃಷಿ ಪ್ರೀತಿ

Karkala ಸಾಗರದಾಚೆಯಿಂದ ತವರಿಗೆ ಕರೆ ತಂದ ಕೃಷಿ ಪ್ರೀತಿ

Hyderabad: ನಟಿ ಪವಿತ್ರ ಜಯರಾಂ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ, ಗೆಳೆಯ ಚಂದು ಆತ್ಮಹತ್ಯೆ

Hyderabad: ನಟಿ ಪವಿತ್ರ ಜಯರಾಂ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ, ಗೆಳೆಯ ಚಂದು ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.