ರಾಷ್ಟ್ರಾಧ್ಯಕ್ಷನಾಗಿ ಅಭಿನಯಿಸಿದಾತ ಉಕ್ರೇನ್‌ ಅಧ್ಯಕ್ಷ!


Team Udayavani, Apr 23, 2019, 6:01 AM IST

ukrain

ಕೀವ್‌ (ಉಕ್ರೇನ್‌): ಇದು ಯಾವುದೇ ಸಿನೆಮಾ ಕತೆಯಲ್ಲ; ಟಿವಿ ಕಾರ್ಯ ಕ್ರಮದಲ್ಲಿ ರಾಷ್ಟ್ರಾಧ್ಯಕ್ಷನಾಗಿ ನಟಿಸಿ ಜನಪ್ರಿಯತೆ ಗಳಿಸಿಕೊಂಡ ಹಾಸ್ಯನಟರೊಬ್ಬರು ವಾಸ್ತವವಾಗಿ ಅದೇ ದೇಶದ ಅಧ್ಯಕ್ಷರಾಗಿ ಚುನಾತರಾದ ನಿಜಕತೆ!

ರಾಜಕೀಯದ ಗಂಧಗಾಳಿಯೂ ಇಲ್ಲದ ನಟ ವೊಲೊಡಿಮಿರ್‌ ಝೆಲೆನ್ಸಿ$R (41) ಉಕ್ರೇನ್‌ನಲ್ಲಿ ಎಷ್ಟೊಂದು ಜನಪ್ರಿಯತೆ ಗಳಿಸಿದ್ದರೆಂದರೆ, ಚುನಾವಣೆಯಲ್ಲಿ ಇವರು ಅಧ್ಯಕ್ಷರಾಗಿ ಆಯ್ಕೆಯಾದರು! ಇತ್ತೀಚೆಗೆ ನಡೆದಿದ್ದ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರು, ಹಾಲಿ ಅಧ್ಯಕ್ಷ ಪೆಟ್ರೊ ಪೊರೊಶೆಂಕೊ ವಿರುದ್ಧ ಶೇ. 73.2 ಮತಗಳನ್ನು ಗಳಿಸಿ ಜಯಶಾಲಿಯಾಗಿದ್ದಾರೆ. ಅಧ್ಯಕ್ಷರ ಆಡಳಿತ ವೈಖರಿಯನ್ನು ಅಣಕಿಸುವ “ಸರ್ವೆಂಟ್‌ ಆಫ್ ದ ಪೀಪಲ್‌’ ಎಂಬ ವಿಡಂಬ ನಾತ್ಮಕ ಟಿವಿ ಕಾರ್ಯಕ್ರಮವನ್ನು ಝೆಲೆನ್ಸಿ ನಡೆಸುತ್ತಿದ್ದರು.

ಉಕ್ರೇನ್‌ನ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಸಮಸ್ಯೆಗಳನ್ನಿಟ್ಟುಕೊಂಡು ಜನರಿಗೆ ಹತ್ತಿರವಾಗಿರುವ, ಜನರು ನಿತ್ಯ ಎದುರಿಸುತ್ತಿರುವ ಸಮಸ್ಯೆಗಳಿಗೆ ಉತ್ತರವೆಂಬಂತೆ ರೂಪುಗೊಂಡ ಈ ಧಾರಾವಾಹಿಯಲ್ಲಿ ಖುದ್ದು ಝೆಲೆನ್ಸಿ$R ಅವರೇ ದೇಶದ ಅಧ್ಯಕ್ಷರಾಗಿ ಪಾತ್ರ ನಿರ್ವಹಿಸುತ್ತಾರೆ. 2015ರಲ್ಲಿ ಶುರುವಾದ ಧಾರಾವಾಹಿ ದೇಶದಲ್ಲಿ ಅಗಾಧ ಜನಪ್ರಿಯತೆ ಗಳಿಸಿತ್ತು.

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಝೆಲೆನ್ಸಿ$R ಈ ಬಾರಿಯ ಅಧ್ಯಕ್ಷೀಯ ಚುನಾವಣ ಅಖಾಡದಲ್ಲಿ ಹಾಲಿ ಅಧ್ಯಕ್ಷ ಪೆಟ್ರೊ ಪೊರೊಶೆಂಕೊ ವಿರುದ್ಧವೇ ಕಣಕ್ಕಿಳಿದಿದ್ದರು. ಮೊದಲೇ ಆಡಳಿತ ವಿರೋಧಿ ಅಲೆ ಇದ್ದಿದ್ದರಿಂದ ಅದು ಝೆಲೆನ್ಸಿ$R ಪಾಲಿಗೆ “ವಿಜಯ ಮಾಲೆ’ಯಾಗಿ ಬದಲಾಗಿದೆ.

ಹಾಲಿ ಅಧ್ಯಕ್ಷರ ಸರಕಾರದಲ್ಲಿನ ಭ್ರಷ್ಟಾಚಾರ, ಸಾಮಾಜಿಕ ನ್ಯಾಯ ವಿಲೇವಾರಿಯಲ್ಲಿನ ತಾರತಮ್ಯ, ರಷ್ಯಾ ಬೆಂಬಲಿತ ಶಕ್ತಿಗಳೊಂದಿಗಿನ ಕದನದಿಂದಾಗಿ ಪೂರ್ವ ಉಕ್ರೇನ್‌ನಲ್ಲಿನ ಅಶಾಂತ ವಾತಾವರಣ ಮತ್ತು ಅದರಿಂದ 13,000 ಜನರ ಸಾವು ಮುಂತಾದ ಬೆಳವಣಿಗೆಗಳಿಂದ ನೊಂದಿದ್ದ ಜನ ಝೆಲೆನ್ಸಿ$Rಯಲ್ಲಿ ಒಬ್ಬ ಸಂವೇದಿ ರಾಷ್ಟ್ರಾಧ್ಯಕ್ಷರನ್ನು ಗುರುತಿಸಿ ಅವರಿಗೆ ಮತ ಹಾಕಿದ್ದಾರೆ ಎಂದು ಕೆಲವು ಪತ್ರಿಕೆಗಳು ವರದಿ ಮಾಡಿವೆ. ಫ‌ಲಿತಾಂಶದ ಕುರಿತು ಪ್ರತಿಕ್ರಿಯಿಸಿರುವ ಅವರು, ನಮ್ಮನ್ನೊಮ್ಮೆ ನೋಡಿ, ಅಸಾಧ್ಯವಾದುದು ಏನೂ ಇಲ್ಲ’ ಎಂದಿದ್ದಾರೆ.

ಯಾರೀ ಝೆಲೆನ್ಸಿ$R?
ಝೆಲೆನ್ಸಿ$R ಹುಟ್ಟಿದ್ದು, ಸೋವಿಯತ್‌ ರಷ್ಯಾದ ಭಾಗವಾಗಿದ್ದ ಉಕ್ರೇನಿಯನ್‌ ಎಸ್‌ಎಸ್‌ಆರ್‌ನ ಕ್ರಿವ್ವಿ ರಿಹ್‌ ಎಂಬಲ್ಲಿ. ಕ್ರಿವ್ಹಿ ರಿಹ್‌ನಲ್ಲೇ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ಅವರು, ಅನಂತರ ಕಿÂವ್‌ ನ್ಯಾಶನಲ್‌ ಎಕನಾಮಿಕ್‌ ಯೂನಿವರ್ಸಿಟಿಯಲ್ಲಿ ಕಾನೂನು ಪದವಿ ಪಡೆದಿದ್ದಾರೆ.

ತನ್ನ 17ನೇ ವರ್ಷದಲ್ಲಿ ಕೆ.ವಿ.ಎನ್‌. ತಂಡವನ್ನು ಸೇರಿಕೊಂಡ ಅವರು, ಲಿವ್‌ ಇನ್‌ ದ ಬಿಗ್‌ ಸಿಟಿ, ಆಫೀಸ್‌ ರೊಮಾನ್ಸ್‌, ಅವರ್‌ ಟೈಂ, ರೆವಿಸ್ಕಿ ವರ್ಸಸ್‌ ನೆಪೋಲಿಯನ್‌ ಮುಂತಾದ ಸಿನೆಮಾಗಳಲ್ಲಿ ಅಭಿನಯಿಸಿದರು.

ತಿರುವು ತಂದ ಆ ಪ್ರಕರಣ
2014ರಲ್ಲಿ ಅಂದಿನ ಉಕ್ರೇನ್‌ನ ಸಂಸ್ಕೃತಿ ಸಚಿವಾಲಯವು ರಷ್ಯಾದ ಕಲಾವಿದರು ಉಕ್ರೇನ್‌ನ ಕಲಾ ಕ್ಷೇತ್ರಗಳಲ್ಲಿ ಕೆಲಸ ಮಾಡಬಾರದೆಂಬ ನಿಯಮ ಜಾರಿಗೊಳಿಸಲು ಮುಂದಾಗಿತ್ತು. ಇದನ್ನು ಝೆಲೆನ್ಸಿ$R ಬಹಿರಂಗವಾಗಿ ವಿರೋಧಿಸಿದ್ದರು. ಇಂಥ ರಾಜಕೀಯ ವಾಕ್ಸಮರದ ಪರಿಣಾಮ ಇವರ ಲವ್‌ ಇನ್‌ ಬಿಗ್‌ ಸಿಟಿ – 2 ಚಿತ್ರವನ್ನು ನಿಷೇಧಿಸಲಾಯಿತು. ಅಷ್ಟರಲ್ಲಿ ಉಕ್ರೇನ್‌ನಲ್ಲಿನ ಹಿಂಸಾಚಾರ, ತಾರತಮ್ಯ ಧೋರಣೆಗಳು ಜನರನ್ನು ಹಿಂಡಿ ಹಿಪ್ಪೆ ಮಾಡಿತ್ತು. ಇದೆಲ್ಲದನ್ನೂ ವಿರೋಧಿಸುವ ಆದರೆ, ವಿಡಂಬ ನಾತ್ಮಕವಾಗಿ ಸರಕಾರದ ರೀತಿ ನೀತಿಗಳನ್ನು ಹಳಿಯುವ ಹೊಸ ಪ್ರಯತ್ನಕ್ಕೆ ಝೆಲೆನ್ಸಿ$R ಮುಂದಾಗಿದ್ದು, ಇದರ ಫ‌ಲ “ಸರ್ವೆಂಟ್‌ ಆಫ್ ದ ಪೀಪಲ್‌’.

ಟಾಪ್ ನ್ಯೂಸ್

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

1-cuba

Cuba ನಗದು ಕೊರತೆ: ಎಟಿಎಂ ಮುಂದೆ ಜನರ ಕ್ಯೂ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

police

Bidar; ಹಣ ಹಂಚುವ ದೂರು: ನಾಗಮಾರಪಳ್ಳಿ‌ ಮನೆಯಲ್ಲಿ ಪರಿಶೀಲನೆ

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.