ಗುಲ್ಮೊಹರ್‌ ಸೊಬಗಿಗೆ ದಾರಿಹೋಕರು ಫಿದಾ

Team Udayavani, Apr 26, 2019, 3:01 PM IST

cham

ಗುಂಡ್ಲುಪೇಟೆ: ಬೇಸಿಗೆಯ ಬಿಸಿಲ ತಾಪ ತಾಳಲಾರದ ಈ ದಿನಗಳಲ್ಲೂ ಗುಲ್ ಮೊಹರ್‌ ಹೂವಿನ ಸೊಬಗಿಗೆ ದಾರಿಹೋಕರು, ವಾಹನ ಸಂಚಾರರು ಮಾರು ಹೋಗುತ್ತಿರುವುದು ಕಂಡು ಬರುತ್ತಿದೆ.

ಮೈಸೂರಿನಿಂದ ಪ್ರಯಾಣ ಕೈಗೊಳ್ಳುವ ವಾಹನ ಸವಾರರಿಗೆ, ಪ್ರಯಾಣಿಕರಿಗೆ, ದಾರಿ ಹೋಕರಿಗೆ ನಂಜ ನಗೂಡು, ಬೇಗೂರು, ಗುಂಡ್ಲುಪೇಟೆ ಯಿಂದ ಬಂಡೀ ಪುರ ರಾಷ್ಟ್ರೀಯ ಉದ್ಯಾನದವರೆಗೂ ಅರಳಿ ನಿಂತ ಗುಲ್ಮೊಹರ್‌ ಹೂವಿನ ಅಂದ ಕಣ್‌ ಸೆಳೆಯುತ್ತದೆ.

ಕಣ್ಣನ್ನೇ ಬಿಡಲಾಗುತ್ತಿಲ್ಲ, ಕಣ್ಣರಳಿಸಲು ಕರೆ: ಬೇಸಿಗೆ ಯ ಬಿಸಿಲ ತಾಪದಿಂದ ಉರಿಯುವ ಕಣ್ಣುಗಳನ್ನು ಬಿಡಲಾರದೇ ಕೆಲಕಾಲ ಮನಸ್ಸಿನ ಆಹ್ಲಾದಕ್ಕಾಗಿ ಕಣ್‌ ಮುಚ್ಚುವ ಜನರನ್ನು ಮತ್ತೆ ಕಣ್‌ ತೆರೆಯುವಂತೆ ಪ್ರೇರೇಪಿಸುವ ರೀತಿಯಲ್ಲಿ ಈ ಗುಲ್ ಮೊಹರ್‌ ಹೂಗಳು ಅರಳಿ ನಿಂತಿರುವುದು ಕಣ್‌ ಮನಸೂರೆ ಗೊಳ್ಳುತ್ತದೆ. ಬೇಗೂರು ಹೋಬಳಿಯ ಸುತ್ತ ಮುತ್ತಲ ರಸ್ತೆಯ ಎರಡೂ ಬದಿಗಳಲ್ಲಿ ಗುಲ್ಮೊಹರ್‌ ಮರ ಗಳು ಕೆಂಬಣ್ಣದ ರಂಗುರಂಗಾದ ಹೂಗಳನ್ನು ಬಿಟ್ಟು ನೋಡುಗರನ್ನು ಸೆಳೆಯುತ್ತಿವೆ.

ಶುಭಕ್ಕೂ ಬೇಕು: ಮನೆಗಳಲ್ಲಿ ನಡೆಯುವ ಶುಭ ಸಮಾರಂಭಗಳಿಗೆ ಕಲ್ಯಾಣ ಮಂಟಪ ಹಾಗೂ ಮನೆ ಯ ಆವರಣದಲ್ಲಿ ನಿರ್ಮಿಸಲಾಗುವ ಚಪ್ಪರವನ್ನು ಈ ಮರದ ಹೂಗಳನ್ನು ಬಳಸಿ ಸಿಂಗರಿಸುವುದು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಯಾವುದೇ ಖರ್ಚಿಲ್ಲದೇ, ದಾರಿ ಮಧ್ಯೆ ಅರಳಿ ನಿಂತ ಸುಂದರ ಹೂವನ್ನು ಶುಭ ಸಮಾರಂಭಗಳಲ್ಲಿ ಬಳಸುವುದು ಒಂದು ಕಡೆಯಾದರೆ, ಶುಭ ಸಮಾರಂಭಗಳಲ್ಲಿ ಅಶುಭವೆಂದು ಕಂಡು ಬರುವ ಕೆಂಪು ಬಣ್ಣದ ಗುಲ್ ಮೊಹರ್‌ ಹೂ ಬಳಸುವುದು ಆಶ್ಚರ್ಯವಾದರೂ ಸತ್ಯ.

ಕಣ್ಮನ ಸೆಳೆಯುವ ಹೂ: ಕಳೆದ ವಾರದಿಂದೀಚೆಗೆ ಸುರಿದ ಮಳೆಯಿಂದ ಬೇಗೂರು ಹೋಬಳಿಯ ರಸ್ತೆ ಬದಿಗಳಲ್ಲಿ ಹೆಚ್ಚಾಗಿ ಕಾಣ ಸಿಗುವ ಗುಲ್ಮೊಹರ್‌ ಮರವು ಬೇಗೂರು ಮತ್ತು ಎಚ್.ಡಿ.ಕೋಟೆ ತಾಲೂಕಿನ ಹೆಡಿಯಾಲ, ಬೇಗೂರು ಹಾಗೂ ಚಾಮರಾಜ ನಗರ ತಾಲೂಕಿನ ಪ್ರವಾಸಿ ಸ್ಥಳ ಕನಕಗಿರಿ ಅಲ್ಲದೇ ರಾಷ್ಟ್ರೀಯ ಹೆದ್ದಾರಿ 766 ಸೇರಿದಂತೆ ರಸ್ತೆಯ ಇಕ್ಕೆಲಗಳಲ್ಲಿ ಕೆಂಬಣ್ಣದ ಹೂ ಬಿಟ್ಟು ನೋಡಿದರೆ ಮತ್ತೂ ಮ್ಮೆ ನೋಡಬೇಕೆನ್ನಿಸುವಂತೆ ಕಣ್ಮನ ಸೆಳೆಯುತ್ತಿದೆ.

ಕೈಬೀಸಿ ಕರೆಯುವ ಪ್ರವಾಸಿ ತಾಣಗಳು: ಪ್ರಖ್ಯಾತ ಪ್ರವಾಸಿ ತಾಣಗಳಾದ ಊಟಿ (ಉದಕಮಂಡಲ), ಹಿಮವದ್‌ ಗೋಪಾಲಸ್ವಾಮಿ ಬೆಟ್ಟ, ಪ್ರಖ್ಯಾತ ಬಂಡೀ ಪುರ ರಾಷ್ಟ್ರೀಯ ಉದ್ಯಾನಕ್ಕೆ ತೆರಳುವ ಪ್ರವಾಸಿಗರನ್ನು ಇದು ಮತ್ತೂಮ್ಮೆ ಬನ್ನಿ ಎಂಬಂತೆ ಪ್ರವಾಸಿ ಸ್ಥಳಗಳಿಗೆ ಕೈಬೀಸಿ ಕರೆಯುವಂತಿದೆ. ರಾಷ್ಟ್ರೀಯ ಹೆದ್ದಾರಿ ಯಲ್ಲಿರುವ ಗುಲ್ ಮೊಹರ್‌ ಕೆಂಬಣ್ಣದಿಂದ ಕೂಡಿ ದ್ದರೂ ಯಾವುದೇ ಅಪಾಯವಿಲ್ಲ ಎಂದು ಹೆಡಿಯಾಲ ರಸ್ತೆಯ ನಾಗಲಿಂಗೇಶ್ವರ ಗವಿ ಮತ್ತು ಕನಕಗಿರಿ ರಸ್ತೆಯ ಜೈನರ ದೇವಾಲಯಗಳು ಪ್ರವಾಸಿಗರನ್ನು ಅಪ್ಯಾಯಮಾನವಾಗಿ ಬರಮಾಡಿಕೊಳ್ಳುತ್ತವೆ.

ಗುಲ್ಮೊಹರ್‌ ಅಂಗಸೌಷ್ಟವ: ಸುಮಾರು 15 ರಿಂದ 18 ಮೀ ಎತ್ತರ ಬೆಳೆಯುವ ನಿಲುವುಳ್ಳ ಮರವು ಫ‌ಲವತ್ತಾದ ನೆಲ ಮತ್ತು ನೀರಿದ್ದರೆ ಜಿರಾಫೆಗಿಂತಲೂ ಎತ್ತರ ಬೆಳೆಯುತ್ತದೆ. ಆಕಾರದಲ್ಲಿ ಛತ್ರಿಯಂತಿರುವ ಈ ಮರದ ತೊಗಟೆ ಮಾತ್ರ ಒರಟಾಗಿ ಅಲ್ಲಲ್ಲಿ ಗಂಟುಗಳನ್ನು ಹೊಂದಿದೆ. ಬಣ್ಣ ಮಾಸಲಾಗಿರುವ ಕಂದು ಬಣ್ಣ. ಹೂಗಳು ರೇಸಿಮ್‌ ಮಾದರಿಯ ಹೂಗೊಂಚಲಂತಿದ್ದರೆ, 15 ರಿಂದ 20 ಜೋಡಿ ಪರ್ಣಿಕೆಗಳನ್ನು ಹೊಂದಿವೆ.

ಐದು ಪುಷ್ಪಪತ್ರ: ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೂ ಬಿಡುವ ಮುನ್ನ ಸಂಯುಕ್ತ ಮಾದರಿಯಲ್ಲಿರುವ ಎಲೆಗಳು ಉದುರುತ್ತವೆ. ಸಾಕಷ್ಟು ದೊಡ್ಡದಾಗಿ ಕಿತ್ತಳೆಮಿಶ್ರಿತ ಕೆಂಪುಬಣ್ಣ, ಕಗ್ಗೆಂಪು ಬಣ್ಣ ಹೊಂದಿರುವ ಸುಂದರ ಹೂಗಳು. ಐದು ಪುಷ್ಪಪತ್ರಗಳನ್ನು ಹೊಂದಿದ್ದು, ಹಸಿರನ್ನು ಹೊರಭಾಗದಲ್ಲಿ, ಕೆಂಪನ್ನು ಒಳಭಾಗದಲ್ಲಿ ಹೊಂದಿವೆ. ಹೊಂದಿರುವ ಐದು ದಳಗಳಲ್ಲಿ ನಾಲ್ಕು ಒಂದೇ ರೀತಿಯಿದ್ದರೆ, ಉಳಿದೊ ಂದು ಕೊಂಚ ದೊಡ್ಡದಾಗಿ ಬಿಳಿ ಅಥವಾ ಹಳದಿ ಬಣ್ಣ ಹೊಂದಿದ್ದು, ಮೈ ಮೇಲೆ ಕೆಂಪು ಮಚ್ಚೆಗಳನ್ನು ಹೊಂದಿ ರುತ್ತದೆ. ಎಲ್ಲ ದಳಗಳ ಅಂಚು ಮಡಿಸಿ ದಂತಿದ್ದು, ಕೇಸರಗಳು ಬಿಡಿಯಾಗಿವೆ. 6096 ಮೀ. ಉದ್ದವಾದ ಕತ್ತಿಕಾಯಿಗಳು ಮರದ ಮೇಲೆ ನೇತಾಡುತ್ತಿರುತ್ತವೆ.

ಕುಲಕುಲವೆಂದು ಕೇಳದಿರಿ ಎಂದು: ಫ‌ಬಿಯೋಸೆ ಕುಟುಂಬಕ್ಕೆ ಸೇರಿದ ಗುಲ್ಮೊಹರ್‌ ಡೆಲೋನಿಕ್ಸ್‌ ರೆಜಿಯಾ ಎಂಬ ಸಸ್ಯಶಾಸ್ತ್ರೀಯ ಹೆಸರನ್ನು ಹೊಂದಿದೆ. ರಾಯಲ್ ಪೊಯಿನ್ಸಿಯೆನಾ ಎಂದು ಕರೆಯುತ್ತಾರೆ. ಹಿಂದಿಯಲ್ಲಿ ಗುಲ್ಮೊಹರ್‌ ಎಂದರೆ ಸ್ಥಳೀಯರು ಕೆಂಪುತುರಾಯಿ, ದೊಡ್ಡರತ್ನಗಂಧಿ, ಸೀಮೆಸಂಕೇಶ್ವರ ಎಂದೂ ಕರೆಯುತ್ತಾರೆ. ಪ್ಲಾಂಟೀ ಸಾಮ್ರಾಜ್ಯದ ಹೂ ಬಿಡುವ ಸಸ್ಯಗಳ ವಿಭಾಗಕ್ಕೆ ಸೇರಿದ್ದು, ಮ್ಯಾಗ್ನೋಲಿಪ್ಸಿಡಾ ವರ್ಗದ್ದಾಗಿರುವ ಗುಲ್ಮೊಹರ್‌ ಫಾಬಲ್ಸ್ ಗಣಕ್ಕೆ ಸೇರಿದೆ. ಕ್ಯಾಸಾಲ್ಪಿನಿಯಾ ಬುಡಕಟ್ಟಿನ ಫ‌ಬಾಸಿಯೇ ಕುಟುಂಬಕ್ಕೆ ಸೇರಿದ್ದು ವೈಜ್ಞಾನಿಕವಾಗಿ ಡೆಲೋನಿಕ್ಸ್‌ ದ್ವೀದ ಹೆಸರಿನಿಂದ ಡೆಲೋನಿಕ್ಸ್‌ ರೆಜಿಯ ಎಂದು ಕರೆಸಿಕೊಳ್ಳುತ್ತದೆ.

ಮನು ಶ್ಯಾನುಭೋಗ್‌. ಎಂ

ಟಾಪ್ ನ್ಯೂಸ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.