ಬಾರ್ಸಿಲೋನಾ ಓಪನ್ ಫೈನಲ್ಗೆ ಮೆಡ್ವಡೇವ್
Team Udayavani, Apr 28, 2019, 10:20 AM IST
ಬಾರ್ಸಿಲೋನಾ: “ಬಾರ್ಸಿಲೋನಾ ಓಪನ್’ ಟೆನಿಸ್ ಕೂಟದಲ್ಲಿ ರಶ್ಯದ ಡ್ಯಾನಿಲ್ ಮೆಡ್ವಡೇವ್ ಫೈನಲ್ ಪ್ರವೇಶಿಸಿದ್ದಾರೆ.
ಶನಿವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮೆಡ್ವಡೇವ್ ಜಪಾನಿನ ಕಿ ನಿಶಿಕೋರಿ ವಿರುದ್ಧ 6-4, 3-6, 7-5 ಸೆಟ್ಗಳಿಂದ ಗೆದ್ದು ಫೈನಲ್ ಪ್ರವೇಶಿಸಿದರು.
ಈ ಪಂದ್ಯ 2 ಗಂಟೆ 25 ನಿಮಿಷಗಳ ವರೆಗೆ ನಡೆಯಿತು. ರಫೆಲ್ ನಡಾಲ್-ಡೊಮಿನಿಕ್ ಥೀಮ್ ನಡುವಿನ ವಿಜೇತರನ್ನು ಅವರು ಫೈನಲ್ನಲ್ಲಿ ಎದುರಿಸಲಿದ್ದಾರೆ.