ಕೋಟಿ ಹಣ ಸುರಿದರೂ ನಿಲ್ಲದ ಬಯಲು ಶೌಚ


Team Udayavani, Apr 30, 2019, 1:00 PM IST

bag-1

ಹುನಗುಂದ: ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿ ಬಯಲು ಬಹಿರ್ದೆಸೆ ಮುಕ್ತ ದೇಶವನ್ನಾಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿವೆ. ಬೆಳಗಲ್ಲ ಗ್ರಾಪಂ ವ್ಯಾಪ್ತಿಯ ಬಿಸನಾಳ ಗ್ರಾಮದಲ್ಲಿ ಸಮುದಾಯ ಶೌಚಾಲಯ ನಿರ್ಮಿಸಿ ಒಂದು ವರ್ಷವಾದರೂ ಮೂಲಭೂತ ಸೌಕರ್ಯವಿಲ್ಲದೇ ಅನಾಥ ಸ್ಥಿತಿಯಲ್ಲಿವೆ.

ಹೌದು, ಆರೋಗ್ಯಕರ ಜೀವನ ಮತ್ತು ಉತ್ತಮ ವಾತವಾರಣ ಹೊಂದಲು ಮನೆಗೊಂದು ಶೌಚಾಲಯ ಇರಲಿ ಎಂಬ ಉದ್ದೇಶದಿಂದ ಸರ್ಕಾರಗಳು ಶೌಚಾಲಯ ನಿರ್ಮಾಣಕ್ಕಾಗಿ ಒತ್ತು ನೀಡುತ್ತಿವೆ. ಈ ಶೌಚಾಲಯ ನಿರ್ಮಾಣದ ಜವಾಬ್ದಾರಿ ಸ್ಥಳೀಯ ಸಂಸ್ಥೆಗಳಿಗೆ ವಹಿಸಿದ್ದಾರೆ. ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯತ, ಪಟ್ಟಣ ಪಂಚಾಯತ, ಪುರಸಭೆ, ನಗರಸಭೆಗಳ ಅಧಿಕಾರಿಗಳು ಸರ್ಕಾರ ಕೊಟ್ಟ ಟಾರ್ಗೆಟ್ ಮುಗಿಸುವ ಸಲುವಾಗಿ ನಾಮಕವಾಸ್ತೆ ಶೌಚಾಲಯ ನಿರ್ಮಿಸಿಕೊಟ್ಟು ಕೈ ತೊಳೆದುಕೊಳ್ಳುತ್ತಿದ್ದಾರೆ.

ಶೌಚಾಲಯ ನಿರ್ಮಿಸುವುದಷ್ಟೇ ಆಗಬಾರದು. ಅದಕ್ಕೆ ಬೇಕಾದ ಸೆಪ್ಟಿಕ್‌ ಟ್ಯಾಂಕ್‌, ನೀರಿನ ವ್ಯವಸ್ಥೆ, ವಿದ್ಯುತ್‌ ಸಂಪರ್ಕ ಮೊದಲಾದ ಮೂಲಭೂತ ಸೌಲಭ್ಯ ಒದಗಿಸುವುದು ಮುಖ್ಯವಾಗಿದೆ. ಅವುಗಳ ಬಳಕೆ ಕುರಿತು ಜನರಲ್ಲಿ ತಿಳಿವಳಿಕೆ ಮೂಡಿಸಬೇಕು.

ಮುಳ್ಳು ಕಂಟಿ ಮತ್ತು ತಿಪ್ಪಿಗುಂಡಿಯಲ್ಲಿ ಮರೆಯಾದ ಸಮುದಾಯ ಶೌಚಾಲಯಗಳು: ಗ್ರಾಪಂ 14 ನೆಯ ಹಣಕಾಸು ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿಯಲ್ಲಿ 20 ಸಮುದಾಯ ಶೌಚಾಲಯ ನಿರ್ಮಿಸಲಾಗಿದೆ. ಸರಿಯಾದ ನಿರ್ವಹಣೆ ಇಲ್ಲದಿರುವುದರಿಂದ ಅವುಗಳ ಸುತ್ತ ಮುಳ್ಳು ಕಂಟಿ ಬೆಳೆದಿವೆ. ಶೌಚಾಲಯದ ಮುಂದೆ ತಿಪ್ಪೆಗುಂಡಿ ಹಾಕಲಾಗಿದೆ. ಇದರ

ಮಧ್ಯೆದಲ್ಲಿ ಶೌಚಾಲಯ ಮರೆಯಾಗಿ ಹೋಗಿವೆ. ಇದನ್ನು ನೋಡಿದರೇ ಜನರ ಮರ್ಯಾದೆ ಉಳಿಸುವ ಸಮುದಾಯ ಶೌಚಾಲಯವೋ ಅಥವಾ ತಿಪ್ಪಿಗುಂಡಿಯ ಸ್ಥಳವೂ ಎನ್ನುವ ಮನೋಭಾವನೆ ಗ್ರಾಮಸ್ಥರಲ್ಲ್ಲಿ ಕಾಡುತ್ತಿದೆ.

ಶೌಚಾಲಯ ನಿರ್ಮಾಣ: ಬಯಲು ಶೌಚ ತಪ್ಪಿಸಲು ಸರ್ಕಾರ ತಮ್ಮ ಸ್ವಂತ ಜಾಗೆಯಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಲು ಎಸ್‌ಸಿ, ಎಸ್‌ಟಿ ಜನಾಂಗದವರಿಗೆ 15 ಸಾವಿರ, ಇತರೆ ಜನಾಂಗಕ್ಕೆ 12 ಸಾವಿರ ಸಹಾಯ ಧನ ನೀಡಿದೆ. ಇನ್ನು ಜಾಗೆ ಇಲ್ಲದೇ ಇರುವ ಜನರಿಗೆ ಗ್ರಾಮ ಪಂಚಾಯತಗಳೇ ಎಷ್ಟು ಜನರಿಗೆ ಸ್ವಂತ ಜಾಗವಿಲ್ಲ ಎಂಬುದನ್ನು ತಿಳಿದುಕೊಂಡು ಅಂತಹ ಜನರಿಗೆ ಸಮುದಾಯ ಶೌಚಾಲಯ ನಿರ್ಮಾಣ ಮಾಡಬೇಕು ಎಂಬ ನಿಯಮವಿದೆ.

ಸರ್ಕಾರದ ವಿವಿಧ ಯೋಜನೆ ಅನುದಾನದಲ್ಲಿ ಸಮುದಾಯ ಶೌಚಾಲಯ ನಿರ್ಮಿಸಲು ಹಣಕಾಸಿನ ನೇರವು ನೀಡಿದರೂ ಬೇಕಾಬಿಟ್ಟಿಯಾಗಿ ಶೌಚಾಲಯ ಕಟ್ಟಿrಸಿ ಅದರ ಅನುದಾನ ತೆಗೆಯುವುದರಲ್ಲಿ ಜಾಣರಾಗಿದ್ದಾರೆ. ಅದಕ್ಕೆ ಬೇಕಾದ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ಮೂಕರಾಗಿದ್ದಾರೆ. ಸರ್ಕಾರ ಕೊಡುವ ಸಹಾಯ ಧನದ ಆಸೆಗಾಗಿ ಶೌಚ ನಿರ್ಮಿಸಿ ಅದನ್ನು ಬಳಕೆ ಮಾಡದೇ ಅದರಲ್ಲಿ ಕಟ್ಟಿಗೆ ಕುಳ್ಳು ಇಟ್ಟು ಮತ್ತೇ ಬಯಲು ಶೌಚಕ್ಕೆ ಹೋಗುವುದು ಮಾತ್ರ ಗ್ರಾಮದಲ್ಲಿ ತಪ್ಪಿಲ್ಲ.

ಬಿಸನಾಳದಲ್ಲಿ ಸಮುದಾಯ ಶೌಚಾಲಯ ಕಟ್ಟಿಸಿ ಒಂದು ವರ್ಷವಾಗಿದೆ. ಇಲ್ಲಿವರೆಗೆ ಅವುಗಳಿಗೆ ನೀರಿನ ವ್ಯವಸ್ಥೆಯಿಲ್ಲ. ಕರೆಂಟ್ ಸಹಿತ ಹಾಕಿಲ್ಲ. ಗ್ರಾಮದ ಜನರಿಗೆ ರಸ್ತೆ, ಹೊಲಗಳೇ ಶೌಚಾಲಯಗಳಾಗಿವೆ. ಈ ಶೌಚಾಲಯಗಳಿಗೆ ಮೂಲಭೂತ ಸೌಲಭ್ಯ ಒದಗಿಸಬೇಕು.
•ಮಹಾಂತಪ್ಪ ವಾಲೀಕಾರ, ಬಿಸನಾಳ ಗ್ರಾಮಸ್ಥ.

ಬೆಳಗಲ್ಲ ಗ್ರಾ.ಪಂ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಸಮುದಾಯ ಶೌಚಾಲಯ ಮೂಲಭೂತ ವ್ಯವಸ್ಥೆ ಬಗ್ಗೆ ನಾನು ಅಲ್ಲಿನ ಪಿಡಿಒ ಜೊತೆ ಮಾತನಾಡುತ್ತೇನೆ. ಸ್ವತಃ ನಾನೇ ಅಲ್ಲಿಗೆ ಹೋಗಿ ಅದಕ್ಕೆ ಬೇಕಾಗಿರುವ ಸೌಲಭ್ಯ ಕಲ್ಪಿಸುವ ವ್ಯವಸ್ಥೆ ಮಾಡುತ್ತೇನೆ.
•ಪುಷ್ಪಾ ಕಮ್ಮಾರ,ಹುನಗುಂದ ತಾಪಂ ಇಒ

ಟಾಪ್ ನ್ಯೂಸ್

Ullal; ಸ್ಕೂಟರ್ ಗಳ ಢಿಕ್ಕಿ; ಸಹಸವಾರ ಮೃತ್ಯು

Ullal; ಸ್ಕೂಟರ್ ಗಳ ಢಿಕ್ಕಿ; ಸಹಸವಾರ ಮೃತ್ಯು

3

ಫಾಹದ್‌ ಫಾಸಿಲ್‌ ಜೊತೆ ʼದೃಶ್ಯಂʼ ನಿರ್ದೇಶಕನ ಸಿನಿಮಾ:‌ ಸುದ್ದಿ ಕೇಳಿ ಥ್ರಿಲ್‌ ಆದ ಫ್ಯಾನ್ಸ್

Kalaburagi; Suresh Sajjan submits nomination as BJP rebel candidate

Kalaburagi; ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸುರೇಶ ಸಜ್ಜನ್ ನಾಮಪತ್ರ ಸಲ್ಲಿಕೆ

doctor

Mistake; ಮಗುವಿನ ಬೆರಳಿಗೆ ಶಸ್ತ್ರಚಿಕಿತ್ಸೆ ಬೇಕಿತ್ತು: ವೈದ್ಯರು ಮಾಡಿದ್ದು ನಾಲಗೆಗೆ!

1-wqeewqe

J’khand; ಬಂಧಿತ ಸಚಿವ ಅಲಂಗೀರ್ ಆಲಂ 6 ದಿನಗಳ ಕಾಲ ಇಡಿ ಕಸ್ಟಡಿಗೆ

JP Nadda

Naveen Patnaik ಅವರಿಗೆ ಬೀಳ್ಕೊಡುಗೆ ನೀಡಲು ಒಡಿಶಾ ಜನ ಸಜ್ಜು: ಜೆ.ಪಿ.ನಡ್ಡಾ

Money Laundering Case; ಇಡಿ ಸುಮ್ಮನೆ ಬಂಧಿಸುವಂತಿಲ್ಲ..: ಮಹತ್ವದ ತೀರ್ಪು ನೀಡಿದ ಸುಪ್ರೀಂ

Money Laundering Case; ಇಡಿ ಸುಮ್ಮನೆ ಬಂಧಿಸುವಂತಿಲ್ಲ..: ಮಹತ್ವದ ತೀರ್ಪು ನೀಡಿದ ಸುಪ್ರೀಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqwewqe

Rabkavi Banhatti: ಪ್ರಾಚೀನ ದೇವಸ್ಥಾನಕ್ಕೆ ಬೇಕಿದೆ ರಕ್ಷಣೆ

ಆನ್‌ಲೈನ್‌ ವಂಚನೆ: 6 ವರ್ಷದಲ್ಲಿ 4 ಕೋಟಿ ರೂ. ಕಳೆದುಕೊಂಡ ವಿದ್ಯಾವಂತರು!

ಆನ್‌ಲೈನ್‌ ವಂಚನೆ: 6 ವರ್ಷದಲ್ಲಿ 4 ಕೋಟಿ ರೂ. ಕಳೆದುಕೊಂಡ ವಿದ್ಯಾವಂತರು!

Online ವಂಚಕರಿದ್ದಾರೆ ಹುಷಾರ್‌..!”ಉದಯವಾಣಿ’ ಇಂದಿನಿಂದ ಸರಣಿ ವರದಿ ಆರಂಭಿಸಿದೆ

Online ವಂಚಕರಿದ್ದಾರೆ ಹುಷಾರ್‌..!”ಉದಯವಾಣಿ’ ಇಂದಿನಿಂದ ಸರಣಿ ವರದಿ ಆರಂಭಿಸಿದೆ

1-pV

Bagalkote; ಅಬ್ಬರದ ಮಳೆ: ಸಿಡಿಲು ಬಡಿದು ಯುವಕ ಸಾವು

1-eqwewqeqw

Bagalkote; ಕಾರಿಗೆ ಬೆಂಕಿ ಹೊತ್ತಿಕೊಂಡು ವ್ಯಕ್ತಿ ಸಜೀವ ದಹನ!

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

Ullal; ಸ್ಕೂಟರ್ ಗಳ ಢಿಕ್ಕಿ; ಸಹಸವಾರ ಮೃತ್ಯು

Ullal; ಸ್ಕೂಟರ್ ಗಳ ಢಿಕ್ಕಿ; ಸಹಸವಾರ ಮೃತ್ಯು

1-qweqwewqe

Rabkavi Banhatti: ಪ್ರಾಚೀನ ದೇವಸ್ಥಾನಕ್ಕೆ ಬೇಕಿದೆ ರಕ್ಷಣೆ

3

ಫಾಹದ್‌ ಫಾಸಿಲ್‌ ಜೊತೆ ʼದೃಶ್ಯಂʼ ನಿರ್ದೇಶಕನ ಸಿನಿಮಾ:‌ ಸುದ್ದಿ ಕೇಳಿ ಥ್ರಿಲ್‌ ಆದ ಫ್ಯಾನ್ಸ್

1-qwew-eqw-wq

Yellapur; ಶಾಲೆಯ ಮೇಲೆ ಬಿದ್ದ ಬೃಹತ್ ಮರ

Kalaburagi; Suresh Sajjan submits nomination as BJP rebel candidate

Kalaburagi; ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸುರೇಶ ಸಜ್ಜನ್ ನಾಮಪತ್ರ ಸಲ್ಲಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.