ಚೆಂಬೂರು ಕರ್ನಾಟಕ ಸಂಘ: “ಹಕ್ಕಿ ಹಾಡು’ ಕನ್ನಡ ನಾಟಕ ಪ್ರದರ್ಶನ


Team Udayavani, May 5, 2019, 6:09 PM IST

0405MUM01

ಮುಂಬಯಿ: ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಮತ್ತು ಕನ್ನಡ ಕಲಾ ಕೇಂದ್ರ ಮುಂಬಯಿ ಸಂಸ್ಥೆಗಳ ಸಹಕಾರದಲ್ಲಿ ಚೆಂಬೂರು ಕರ್ನಾಟಕ ಸಂಘದ ಸಂಚಾಲಕತ್ವದಲ್ಲಿ ನಾಡಿನ ಪ್ರಸಿದ್ಧ ನಿರ್ದೇಶಕಿ ಬೆಂಗಳೂರಿನ ದಾûಾಯಿಣಿ ಭಟ್‌ ತಮ್ಮ ನಿರ್ದೇಶನದಲ್ಲಿ ಚೆಂಬೂರು ಕರ್ನಾ ಟಕ ಸಂಘದ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ನಾಟಕ ತರಬೇತಿ ಶಿಬಿರವು ನಡೆಯಿತು.

ನಾಟಕ ಶಿಬಿರದ ಸಮಾರೋಪ ಸಮಾರಂಭವು ಶುಕ್ರವಾರ ಸಂಜೆ ಚೆಂಬೂರು ಘಾಟ್ಲಾದ ಸಂಸ್ಥೆಯ ಸಂಕುಲದಲ್ಲಿ ನಡೆಯಿತು. ಚೆಂಬೂರು ಕರ್ನಾಟಕ ಸಂಘದ ಅಧ್ಯಕ್ಷ ನ್ಯಾಯ ವಾದಿ ಎಚ್‌. ಕೆ. ಸುಧಾಕರ ಅರಾಟೆ ದೀಪ ಬೆಳಗಿಸಿ ಸಮಾರಂಭ ಉದ್ಘಾಟಿಸಿದರು. ಸಂಘದ ಗೌರವ‌ ಕಾರ್ಯದರ್ಶಿ ದೇವದಾಸ್‌ ಶೆಟ್ಟಿಗಾರ್‌, ಗೌರವ ಕೋಶಾಧಿಕಾರಿ ಟಿ. ಆರ್‌ ಶೆಟ್ಟಿ, ಸಹ‌ ಕೋಶಾಧಿಕಾರಿ ಸುಂದರ್‌ ಎನ್‌. ಕೋಟ್ಯಾನ್‌, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ದಯಾಸಾಗರ್‌ ಚೌಟ, ಕನ್ನಡ ಕಲಾ ಕೇಂದ್ರ ಮುಂಬಯಿ ಅಧ್ಯಕ್ಷ ಬಿ. ಬಾಲ ಚಂದ್ರ ರಾವ್‌ ಉಪಸ್ಥಿತರಿದ್ದರು.

ಮಕ್ಕಳಿಗೆ ನಾಟಕ ತರಬೇತಿ ನೀಡಿದ್ದ ನಾಡಿನ ಪ್ರಸಿದ್ಧ ನಿರ್ದೇಶಕಿ ದಾಕ್ಷಾಯಿಣಿ ಭಟ್‌ ಬೆಂಗಳೂರು ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ತರಬೇತಿ ಪಡೆದ ವಿದ್ಯಾರ್ಥಿಗಳೂ ಗುರು ವಂದನೆ ಸಲ್ಲಿಸಿದರು. ನಾಟಕದ ಇಂತಹ ಅನುಭವ ಪಡೆದ ನಾವು ಇನ್ನು ಮುಂದೆ ಯಾವುದೇ ಕಾರ್ಯ ಕ್ರಮವನ್ನು ತಮ್ಮ ಶಾಲಾ ವಿದ್ಯಾರ್ಥಿಗಳಿಂದಲೇ ಮಾಡಿಸು ತ್ತೇವೆ. ಶಿಬಿರವನ್ನು ಯಶಸ್ವಿಯಾಗಿ ನಡೆಸಿದ ಎಲ್ಲ ಪದಾಧಿಕಾರಿಗಳಿಗೆ, ಶಿಕ್ಷಕರಿಗೆ, ಪಾಲಕರಿಗೆ ಹಾಗೂ ತುಂಬಾ ಆಸಕ್ತಿಯಿಂದ ಅಭಿನಯಿಸಿದ ಎಲ್ಲ ಬಾಲ ಕಲಾಕಾರರಿಗೆ ಸಂಘದ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ನ್ಯಾಯವಾದಿ ಎಚ್‌. ಕೆ. ಸುಧಾಕರ ಅರಾಟೆ ನುಡಿದರು.

ಬಾಲಚಂದ್ರ ರಾವ್‌ ಅವರು ಸಂಘದ ಅಧ್ಯಕ್ಷರಿಗೆ ಸ್ಮರಣಿಕೆಯನ್ನು ನೀಡಿ ಈ ನಾಟಕ ಪ್ರದರ್ಶನಕ್ಕೆ ಮೂಲ ಕಾರಣ ಸಂಘದ ಅಧ್ಯಕ್ಷರು. ತುಂಬಾ ವರ್ಷದ ಮೊದಲು ಹಾಕಿದ ಬೀಜ ಇಂದು ವೃಕ್ಷವಾಗಿ ಬೆಳೆದಿದೆ ಎಂದು ಹೇಳಿದರು.

ತುಂಬಾ ಹೆಮ್ಮೆಯ ವಿಷಯ ಎಂದರೆ ನಮ್ಮ ಸಂಘದ ಅಧ್ಯಕ್ಷರು ತಾವು ಕುಳಿತ ಕುರ್ಚಿಯ ಬೆಲೆಯನ್ನು ತುಂಬಾ ಎತ್ತರಕ್ಕೆ ಏರಿಸುತ್ತಾರೆ. ಕಾರ್ಯಕ್ರಮದ ಯಶಸ್ಸಿಗೆ ಒಳ್ಳೆಯ ಮನಸ್ಸು ಹಾಗೂ ಒಳ್ಳೆಯ ಸ್ಪಂದನ ಇರಬೇಕು. ರಂಗ ವೇದಿಕೆಗೆ ಬೇಕಾದ ಸಕಲ ಸೌಕರ್ಯಗಳನ್ನು ಒದಗಿಸಿದ ಟಿ. ಆರ್‌. ಶೆಟ್ಟಿ ಹಾಗೂ ದೇವದಾಸ್‌ ಶೆಟ್ಟಿಗಾರ್‌ ಅವರಿಗೆ ಕೃತಜ್ಞತೆಗಳು ಎಂದು ದಯಾಸಾಗರ್‌ ಚೌಟ ಅವರು ನುಡಿದರು.

ಹಾಡು ಹಕ್ಕಿ ನಾಟಕವನ್ನು ಪ್ರದರ್ಶಿಸಿ ಸಭಿಕರ ಮನ ಗೆದ್ದ ವಿದ್ಯಾರ್ಥಿಗಳ ಬಗ್ಗೆ ಅನೇಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ರಂಗತಜ್ಞ ಡಾ| ಭರತ್‌ ಕುಮಾರ್‌ ಪೊಲಿಪು ವಿದ್ಯಾರ್ಥಿಗಳ ಅಭಿನಯಕ್ಕೆ ಬೆರಗಾಗಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸುತ್ತಾ, ಮಕ್ಕಳು ತುಂಬಾ ಅಂದವಾಗಿ ತಮ್ಮ ಪಾತ್ರವನ್ನು ತಾವೇ ಅನುಭವಿಸಿ ಮಾಡಿದ್ದಾರೆ. ಚೆಂಬೂರು ಕರ್ನಾಟಕ ಸಂಘದ ಸಾಂಸ್ಕೃತಿಕ ಕಾಳಜಿಯನ್ನು ನಾನು ತುಂಬಾ ಇಷ್ಟ ಪಡುತ್ತೇನೆ, ಇದಕ್ಕೆ ಮಾಡಿದ ಖರ್ಚು ಅದು ಖರ್ಚು ಅಲ್ಲ ಬದುಕಿನ ಬಂಡವಾಳ ಎಂದರು.

ಪ್ರಸಿದ್ಧ ರಂಗ ನಿರ್ದೇಶಕ ಮೋಹನ್‌ ಮಾರ್ನಾಡ್‌ ಮಾತನಾಡಿ, ವಿದ್ಯಾರ್ಥಿಗಳನ್ನು ಕಲಾವಿದರನ್ನಾಗಿ ಮಾಡುವುದು ತುಂಬಾ ಪುಣ್ಯದ ಕೆಲಸ ನಾವು ಮಾನವರಾಗಿ ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂದು ನುಡಿದರು. ಕವಿ ಗೋಪಾಲ ತ್ರಾಸಿ ಮಾತನಾಡಿ, ಈ ರಂಗ ವೇದಿಕೆಯಿಂದ 10, 20 ಕಲಾವಿದರು ಮುಂಬಯಿ ರಂಗಭೂಮಿಗೆ ಬರಬೇಕು ಎಂದರು. ಸುಮಾರು ಹದಿನೈದು ದಿನಗಳ ರಂಗ ತರಬೇತಿ ಶಿಬಿರದ ಅನುಭವದ ಬಗ್ಗೆ ವಿದ್ಯಾರ್ಥಿಗಳಾದ ಯಶಸ್ವಿನಿ ಶೆಟ್ಟಿ, ಶಿವರುದ್ರ ರಾಜಕುಮಾರ್‌, ಪೋಲ್‌ ಲಕ್ಷಿ ¾ ಮತ್ತು ಪಲ್ಲವಿ ಕಟ್ಟಿಮನಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ನಾಟಕಕ್ಕೆ ಸಹಕರಿಸಿದ ಕನ್ನಡ ಕಲಾಕೇಂದ್ರ ಮುಂಬಯಿ ಕಾರ್ಯದರ್ಶಿ ಮಧುಸೂದನ್‌, ಹಳೆ ವಿದ್ಯಾರ್ಥಿ ಗಾಯಕರಾದ ಭರತ್‌ ಶೆಟ್ಟಿ ಮತ್ತು ಮನೋಜ್‌ ಗೌಡ, ಆನಂದ್‌, ಜೀವನ್‌ ಬೋರ್ಡಿಂಗ್‌ನ ಮಾಲಕ ನರೇಶ್‌ ಶೆಟ್ಟಿ, ಮೇಕಪ್‌ ಮ್ಯಾನ್‌ ರಾಜ್‌ದೀಪ್‌ ಮತ್ತು ಮನೋಜ್‌, ಅನ್ನ ಪೂರ್ಣ, ನಾರಾಯಣ ಕರಿ, ಕಲಾ ಶಿಕ್ಷಕ ಪ್ರಮೋದ್‌ ಕುರ್ನೆ ಇವರನ್ನುಅಭಿನಂದಿಸಲಾಯಿತು. ಶಿಕ್ಷಕಿ ವಿಜೇತಾ ಎಂ. ಸುವರ್ಣ ಅವರು ದಾಕ್ಷಾಯಿಣಿ ಅವರನ್ನು ಪರಿಚಯಿಸಿದರು. ಶಿಕ್ಷಕಿ ಅನಿತಾ ಶೆಟ್ಟಿ ಸಭಾ ಕಾರ್ಯಕ್ರಮ ನಿರೂಪಿಸಿ ದರು. ಶಿಕ್ಷಕ ಶೈಲೇಶ್‌ ಸಾಲ್ಯಾನ್‌ ವಂದಿಸಿದರು. ತರಬೇತಿ ಪಡೆದ ಸಂಘದ ಶಾಲಾ ವಿದ್ಯಾರ್ಥಿಗಳು ದಾûಾಯಿಣಿ ಭಟ್‌ ನಿರ್ದೇಶನದಲ್ಲಿ “ಹಕ್ಕಿ ಹಾಡು’ ಎಂಬ ಕನ್ನಡ ನಾಟಕ ಪ್ರದರ್ಶಿಸಿದ‌ರು.

ರಂಗ ಭೂಮಿ ನಮಗೆ ಕಲಿಸುವುದು ಕಟ್ಟುವ ಕಲೆಯನ್ನೇ ಹೊರತು ಒಡೆಯುವ ಕಲೆಯನ್ನಲ್ಲ. ವ್ಯಕ್ತಿತ್ವ ವಿಕಸನ ಎಂದರೆ ನಾಟಕವನ್ನು ಮಾಡುವುದು. ಚೆಂಬೂರು ಕರ್ನಾಟಕ ಸಂಘದಲ್ಲಿ ನನಗೆ ಸರಳ ಮನಸ್ಸಿನ ವ್ಯಕ್ತಿಗಳು ಸಿಕ್ಕಿದ್ದಾರೆ. ಸರ್ವ ರೀತಿಯಲ್ಲಿ ಸಹಕಾರ ನೀಡಿದ ಸಂಘದ ಎಲ್ಲ ಸದಸ್ಯರಿಗೆ ನನ್ನ ತುಂಬು ಹೃದಯದ ಕೃತಜ್ಞತೆಗಳು. ಪಾಲಕರು ನಾಟಕ ಅಭಿನಯಕ್ಕೆ ಮಕ್ಕಳಿಗೆ ಬೆಂಬಲ ನೀಡಬೇಕು
– ದಾಕ್ಷಾಯಿಣಿ ಭಟ್‌ (ನಾಟಕ ನಿರ್ದೇಶಕಿ).

ಟಾಪ್ ನ್ಯೂಸ್

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.