ಅಮೇಥಿಯಲ್ಲಿ ಮತಗಟ್ಟೆ ವಶೀಕರಣ, ರಾಹುಲ್ ಕೈವಾಡ: ಇರಾನಿ ಆರೋಪ
Team Udayavani, May 6, 2019, 11:32 AM IST
ಲಕ್ನೋ : ಅಮೇಥಿ ಸಂಸದೀಯ ಕ್ಷೇತ್ರದಲ್ಲಿ ಇಂದು ಮತದಾನ ನಡೆಯುತ್ತಿದ್ದು ಮತಗಟ್ಟೆ ವಶೀಕರಣ ಯತ್ನ ನಡೆಯುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ನಾಯಕಿ Smriti ಇರಾನಿ ಅವರು ‘ಈ ದುಷ್ಕೃತ್ಯದ ಹಿಂದೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೈವಾಡ ಇದೆ’ ಎಂದು ದೂರಿದ್ದಾರೆ.
ಗಾಂಧಿ ಕುಟುಂಬದ ಭದ್ರ ಕೋಟೆ ಎಂದು ತಿಳಿಯಲಾಗಿರುವ ಅಮೇಥಿ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ವಿರುದ್ದ ಇರಾನಿ ಬಿಜೆಪಿ ಅಭ್ಯರ್ಥಿಯಾಗಿ ಸೆಣಸುತ್ತಿದ್ದಾರೆ.
‘ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಮತಗಟ್ಟೆ ವಶೀಕರಣ ನಡೆಯುತ್ತಿರುವ ಬಗ್ಗೆ ತಾನು ಚುನಾವಣಾ ಆಯೋಗ ಮತ್ತು ರಾಜ್ಯಾಡಳಿತೆಯನ್ನು ಅಲರ್ಟ್ ಮಾಡಿದ್ದೇನೆ’ ಎಂದು ಮಾಧ್ಯಮದೊಂದಿಗೆ ಮಾತನಾಡುತ್ತಾ ಹೇಳಿರುವ ಇರಾನಿ ಅವರು, ‘ರಾಹುಲ್ ಗಾಂಧಿಯನ್ನು ಶಿಕ್ಷಿಸಬೇಕೋ ಬೇಡವೋ ಎಂಬದನ್ನು ಈ ಕ್ಷೇತ್ರದ ಮತದಾರರೇ ತೀರ್ಮಾನಿಸಬೇಕು’ ಎಂದು ಹೇಳಿದರು.
ಅಮೇಥಿಯ ಬೂತ್ ನಂಬರ್ 316ರಲ್ಲಿ ಮಹಿಳೆಯೊಬ್ಬರು ತಾನು ಬಿಜೆಪಿಗೆ ಮತ ಹಾಕಲು ಬಯಸಿದ್ದಾಗ್ಯೂ ಅಲ್ಲಿನ ಕರ್ತವ್ಯ ನಿರತ ಅಧಿಕಾರಿಯೋರ್ವರು ತಾನು ಕಾಂಗ್ರೆಸ್ ಗೆ ಮತ ಹಾಕುವಂತೆ ಮಾಡಿದರು ಎಂದು ಹೇಳುವ ವಿಡಿಯೋ ಒಂದು ವೈರಲ್ ಆದುದನ್ನು ಅನುಸರಿಸಿ ಇರಾನಿ ಅವರು ‘ರಾಹುಲ್ ಗಾಂಧಿ ಅವರ ಕುಮ್ಮಕ್ಕಿನಿಂದ ಮತಗಟ್ಟೆ ವಶೀಕರಣ ನಡೆಯುತ್ತಿದೆ’ ಎಂದು ಆರೋಪಿಸಿದರು.