ದಡ್ಡಲಕಾಡು ಸರಕಾರಿ ಮಾ. ಹಿ.ಪ್ರಾ. ಶಾಲೆ ಸಾಧನೆ

ಮುಚ್ಚುವ ಹಂತದಲ್ಲಿದ್ದ ಶಾಲೆಯಲ್ಲೀಗ 650ಕ್ಕೂ ಹೆಚ್ಚು ಮಕ್ಕಳು

Team Udayavani, May 11, 2019, 9:27 AM IST

30

ಬಂಟ್ವಾಳ: ಮೂಡ ನಡುಗೋಡು ಗ್ರಾಮ ದಡ್ಡಲಕಾಡು ಸರಕಾರಿ ಮಾದರಿ ಹಿ.ಪ್ರಾ. ಶಾಲೆ ಹಾಲಿ ಶೈಕ್ಷಣಿಕ ವರ್ಷಕ್ಕೆ ಒಟ್ಟು 650 ಮಕ್ಕಳ ಸಂಖ್ಯೆಯನ್ನು ಮುಟ್ಟುವ ಮೂಲಕ ಒಂದು ಕಾಲದಲ್ಲಿ ಮುಚ್ಚುವ ಹಂತದ ಶಾಲೆ ಕಿಕ್ಕಿರಿದು ತುಂಬುವಂತಾಗಿದೆ.

ಸ್ಥಳೀಯ ಯುವಕರ ತಂಡ ಶ್ರೀ ದುರ್ಗಾ ಫ್ರೆಂಡ್ಸ್‌ ಕ್ಲಬ್‌ ಹೆಸರಲ್ಲಿ ಒಟ್ಟುಗೂಡಿ ಶಾಲೆ ಬೆಳೆಸಲು ಪಣತೊಟ್ಟು ಯಶಸ್ವಿಯಾಗಿ ರಾಜ್ಯಪಾಲರೇ ಬರುವಂತೆ ಮಾಡಿದ ಭಗೀರಥ ಪ್ರಯತ್ನದ ಫಲ ಕೊಟ್ಟಿದೆ.ಒಂದನೇ ತರಗತಿಗೆ ಮಕ್ಕಳ ಸೇರ್ಪಡೆ 110, ಎಲ್ಕೆಜಿ, ಯುಕೆಜಿಗೆ 134 ಒಟ್ಟಾರೆಯಾಗಿ ಈ ವರ್ಷ 235 ಮಕ್ಕಳ ಸೇರ್ಪಡೆಯಾಗಿದೆ.

ಸೀಟು ಸಿಗುವುದೇ
ಈ ಸಾಲಿನ ಶೈಕ್ಷಣಿಕ ವರ್ಷಕ್ಕೆ ಒಂದನೇ ತರಗತಿಗೆ 110 ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿಸುವ ಮೂಲಕ ಸರಕಾರಿ ಶಾಲೆಗಳ ಮಕ್ಕಳ ಸೇರ್ಪಡೆಯಲ್ಲೇ ದಾಖಲೆ ಬರೆದಿದೆ. ಮನೆ ಮನೆ ಭೇಟಿ ಕಾರ್ಯಕ್ರಮ ವಿಲ್ಲದೆ, ಪ್ರಚಾರಕ್ಕಾಗಿ ಫ್ಲೆಕ್ಸ್‌, ಬ್ಯಾನರ್‌ಗಳನ್ನು ಅಳವಡಿಸದೇ ಇದ್ದರೂ ಈ ಸರಕಾರಿ ಶಾಲೆಗೆ ಮಕ್ಕಳನ್ನು ಸೇರಿಸಲು ವಿದ್ಯಾರ್ಥಿಗಳ ಹೆತವರು ಶಾಲೆಗೇ ಬರುತ್ತಾರೆ. ಸೀಟು ಉಂಟಾ ಎಂದು ಕೇಳುತ್ತಿದ್ದಾರೆ.

2015-16ರಲ್ಲಿ 33 ಮಕ್ಕಳಿಂದ ಮುಚ್ಚುವ ಸ್ಥಿತಿಗೆ ಬಂದಿದ್ದ ದಡ್ಡಲಕಾಡು ಶಾಲೆಯನ್ನು ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್‌ ದತ್ತು ಸ್ವೀಕರಿಸಿಕೊಂಡ ಬಳಿಕ ಶಾಲೆಯ ಅಭಿವೃದ್ದಿಯಲ್ಲಿ ಕ್ರಾಂತಿಯಾಗಿದೆ. ಶಾಲೆಗೆ ಸುಸಜ್ಜಿತ ಕಟ್ಟಡ, ಮೂಲ ಸೌಕರ್ಯಗಳನ್ನು ಒದಗಿಸುವ ಜತೆಗೆ ಗುಣಮಟ್ಟದ ಶಿಕ್ಷಣ ನೀಡಿದ ಕಾರಣ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗುತ್ತಿದೆ. ಎಲ್ಕೆಜಿ, ಯುಕೆಜಿಗೆ ಒಟ್ಟು 134 ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದು, ಮುಂದಿನ ದಿನಗಳಲ್ಲಿ ಕೊಠಡಿ ಸಮಸ್ಯೆ ಎದುರಾಗುವ ಕಾರಣ ದಾಖಲಾತಿಯನ್ನು ಪೂರ್ಣ ಗೊಳಿಸಲಾಗಿದೆ. ಒಂದನೇ ತರಗತಿಗೆ ಈಗಾಗಲೇ 110 ಮಕ್ಕಳು ಸೇರ್ಪಡೆಗೊಂಡಿರು ವುದರಿಂದ ಮೂರು ವಿಭಾಗಗಳನ್ನು ತೆರೆಯಲು ನಿರ್ಧರಿಸಲಾಗಿದೆ ಎಂದು ಮುಖ್ಯ ಶಿಕ್ಷಕ ಮೌರೀಸ್‌ ಡಿ’ಸೋಜಾ ತಿಳಿಸಿದ್ದಾರೆ.

ಪೋಷಕರಿಂದಲೇ ಶ್ರಮದಾನ
ಶಾಲೆಯ ಮೂರನೇ ಹಂತದ ನಿರ್ಮಾಣ ಕಾರ್ಯ ಆರಂಭ ಗೊಂಡಿದೆ. ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ಹೊಸ ಕೊಠಡಿಗಳು, ಆವರಣಗೋಡೆ, ಸಭಾಂಗಣ ನಿರ್ಮಾಣಗೊಳ್ಳಲಿದೆ. ಶಾಲಾ ದತ್ತು ಸಂಸ್ಥೆಯ ಅಧ್ಯಕ್ಷ ಪ್ರಕಾಶ್‌ ಅಂಚನ್‌ ನಿರಂತರ ಹೋರಾಟದ ಫಲವಾಗಿ ದಡ್ಡಲಕಾಡು ಸರಕಾರಿ ಶಾಲೆ ರಾಜ್ಯದಲ್ಲೇ ಮಾದರಿ ಶಾಲೆಯಾಗಿ ಬೆಳೆಯುತ್ತಿದ್ದು, ಸಮುದಾಯದ ಸಹಕಾರದೊಂದಿಗೆ ಮುನ್ನುಗುತ್ತಿದೆ. ಉಚಿತ ಸ್ಮಾರ್ಟ್‌ ಕ್ಲಾಸ್‌, ಯೋಗ, ನೃತ್ಯ, ಕರಾಟೆ, ಸಂಗೀತದೊಂದಿಗೆ ಕ್ರೀಡೆ, ಕೃಷಿ ಹಾಗೂ ಸಂಸ್ಕಾರಯುತ ಶಿಕ್ಷಣವನ್ನು ಈ ಶಾಲೆಯಲ್ಲಿ ನೀಡಲಾಗುತ್ತಿದೆ. ಒಂದನೇ ತರಗತಿಯಿಂದ 8ನೇ ತರಗತಿಯವರೆಗೆ ಕನ್ನಡ ಮಾಧ್ಯಮದೊಂದಿಗೆ ಆಂಗ್ಲ ಮಾಧ್ಯಮ ಕಲಿಕೆ, ವಿದ್ಯಾರ್ಥಿಗಳಿಗೆ ವಾಹನದ ವ್ಯವಸ್ಥೆಯೂ ಇರುವುದರಿಂದ ಸಹಜವಾಗಿಯೇ ಹೆತ್ತವರ ಒಲವು ಶಾಲೆಯತ್ತ ಬೀರಿದೆ.

ಹೆಚ್ಚು ಶಿಕ್ಷಕರು
ದಡ್ಡಲಕಾಡು ಶಾಲೆಯಲ್ಲಿ ಹೆಚ್ಚಾಗಿರುವ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ಈಗ ಐದು ಮಂದಿ ಶಿಕ್ಷಕರಿದ್ದಾರೆ. 6 ಮಂದಿಯನ್ನು ಮುಂದಕ್ಕೆ ನಿಯೋಜನೆಯಲ್ಲಿ ಒದಗಿಸಲಾಗುವುದು. ಅಂದರೆ ಸರಕಾರದಿಂದ ಒಟ್ಟು 11 ಮಂದಿ ಶಿಕ್ಷಕರನ್ನು ಒದಗಿಸಿದಂತಾಗುವುದು.
-ಎನ್‌. ಶಿವಪ್ರಕಾಶ್‌ ಕ್ಷೇತ್ರ ಶಿಕ್ಷಣಾಧಿಕಾರಿ, ಬಂಟ್ವಾಳ

ಶಾಲೆಯಲ್ಲಿದೆ ವಿವಿಧ ಸೌಲಭ್ಯಗಳು
ಶಾಲಾ ದತ್ತು ಸಂಸ್ಥೆಯ ಅಧ್ಯಕ್ಷ ಪ್ರಕಾಶ್‌ ಅಂಚನ್‌ ನಿರಂತರ ಹೋರಾಟದ ಫಲವಾಗಿ ದಡ್ಡಲಕಾಡು ಸರಕಾರಿ ಶಾಲೆ ರಾಜ್ಯದಲ್ಲೇ ಮಾದರಿ ಶಾಲೆಯಾಗಿ ಬೆಳೆಯುತ್ತಿದ್ದು, ಸಮುದಾಯದ ಸಹಕಾರದೊಂದಿಗೆ ಮುನ್ನುಗುತ್ತಿದೆ. ಉಚಿತ ಸ್ಮಾರ್ಟ್‌ ಕ್ಲಾಸ್‌, ಯೋಗ, ನೃತ್ಯ, ಕರಾಟೆ, ಸಂಗೀತದೊಂದಿಗೆ ಕ್ರೀಡೆ, ಕೃಷಿ ಹಾಗೂ ಸಂಸ್ಕಾರಯುತ ಶಿಕ್ಷಣವನ್ನು ಈ ಶಾಲೆಯಲ್ಲಿ ನೀಡಲಾಗುತ್ತಿದೆ. ಒಂದನೇ ತರಗತಿಯಿಂದ 8ನೇ ತರಗತಿಯವರೆಗೆ ಕನ್ನಡ ಮಾಧ್ಯಮದೊಂದಿಗೆ ಆಂಗ್ಲ ಮಾಧ್ಯಮ ಕಲಿಕೆ, ವಿದ್ಯಾರ್ಥಿಗಳಿಗೆ ವಾಹನದ ವ್ಯವಸ್ಥೆಯೂ ಇರುವುದರಿಂದ ಸಹಜವಾಗಿಯೇ ಹೆತ್ತವರ ಒಲವು ಶಾಲೆಯತ್ತ ಬೀರಿದೆ.

ಟಾಪ್ ನ್ಯೂಸ್

Ullal; ಸ್ಕೂಟರ್ ಗಳ ಢಿಕ್ಕಿ; ಸಹಸವಾರ ಮೃತ್ಯು

Ullal; ಸ್ಕೂಟರ್ ಗಳ ಢಿಕ್ಕಿ; ಸಹಸವಾರ ಮೃತ್ಯು

3

ಫಾಹದ್‌ ಫಾಸಿಲ್‌ ಜೊತೆ ʼದೃಶ್ಯಂʼ ನಿರ್ದೇಶಕನ ಸಿನಿಮಾ:‌ ಸುದ್ದಿ ಕೇಳಿ ಥ್ರಿಲ್‌ ಆದ ಫ್ಯಾನ್ಸ್

Kalaburagi; Suresh Sajjan submits nomination as BJP rebel candidate

Kalaburagi; ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸುರೇಶ ಸಜ್ಜನ್ ನಾಮಪತ್ರ ಸಲ್ಲಿಕೆ

doctor

Mistake; ಮಗುವಿನ ಬೆರಳಿಗೆ ಶಸ್ತ್ರಚಿಕಿತ್ಸೆ ಬೇಕಿತ್ತು: ವೈದ್ಯರು ಮಾಡಿದ್ದು ನಾಲಗೆಗೆ!

1-wqeewqe

J’khand; ಬಂಧಿತ ಸಚಿವ ಅಲಂಗೀರ್ ಆಲಂ 6 ದಿನಗಳ ಕಾಲ ಇಡಿ ಕಸ್ಟಡಿಗೆ

JP Nadda

Naveen Patnaik ಅವರಿಗೆ ಬೀಳ್ಕೊಡುಗೆ ನೀಡಲು ಒಡಿಶಾ ಜನ ಸಜ್ಜು: ಜೆ.ಪಿ.ನಡ್ಡಾ

Money Laundering Case; ಇಡಿ ಸುಮ್ಮನೆ ಬಂಧಿಸುವಂತಿಲ್ಲ..: ಮಹತ್ವದ ತೀರ್ಪು ನೀಡಿದ ಸುಪ್ರೀಂ

Money Laundering Case; ಇಡಿ ಸುಮ್ಮನೆ ಬಂಧಿಸುವಂತಿಲ್ಲ..: ಮಹತ್ವದ ತೀರ್ಪು ನೀಡಿದ ಸುಪ್ರೀಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada: 14 ಗ್ರಾ.ಪಂ.ಗಳಲ್ಲಿ ಶೇಕಡಾ 100 ತೆರಿಗೆ ಸಂಗ್ರಹ

Dakshina Kannada: 14 ಗ್ರಾ.ಪಂ.ಗಳಲ್ಲಿ ಶೇಕಡಾ 100 ತೆರಿಗೆ ಸಂಗ್ರಹ

Arecanut ಚಾಲಿ ಅಡಿಕೆ ಧಾರಣೆ ಏರಿಕೆ; 500 ರೂ. ಹೊಸ್ತಿಲಿನಲ್ಲಿ ಸಿಂಗಲ್‌, ಡಬ್ಬಲ್‌ ಚೋಲ್‌

Arecanut ಚಾಲಿ ಅಡಿಕೆ ಧಾರಣೆ ಏರಿಕೆ; 500 ರೂ. ಹೊಸ್ತಿಲಿನಲ್ಲಿ ಸಿಂಗಲ್‌, ಡಬ್ಬಲ್‌ ಚೋಲ್‌

ಒಂದೇ ಮಳೆಗೆ ತುಂಬಿ ಹರಿದ ಮೃತ್ಯುಂಜಯ ನದಿ

ಒಂದೇ ಮಳೆಗೆ ತುಂಬಿ ಹರಿದ ಮೃತ್ಯುಂಜಯ ನದಿ

Wind-Rain: ವಿವಿಧೆಡೆ ಉರುಳಿ ಬಿದ್ದ ಮರಗಳು

Wind-Rain: ವಿವಿಧೆಡೆ ಉರುಳಿ ಬಿದ್ದ ಮರಗಳು

ಸುಬ್ರಹ್ಮಣ್ಯ: ಗಾಳಿ ಮಳೆಗೆ ಮರ ಬಿದ್ದು ಮಹಿಳೆ ಮೃತ್ಯು…

ಸುಬ್ರಹ್ಮಣ್ಯ: ಗಾಳಿ ಮಳೆಗೆ ಮರ ಬಿದ್ದು ಮಹಿಳೆ ಮೃತ್ಯು…

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

Ullal; ಸ್ಕೂಟರ್ ಗಳ ಢಿಕ್ಕಿ; ಸಹಸವಾರ ಮೃತ್ಯು

Ullal; ಸ್ಕೂಟರ್ ಗಳ ಢಿಕ್ಕಿ; ಸಹಸವಾರ ಮೃತ್ಯು

1-qweqwewqe

Rabkavi Banhatti: ಪ್ರಾಚೀನ ದೇವಸ್ಥಾನಕ್ಕೆ ಬೇಕಿದೆ ರಕ್ಷಣೆ

3

ಫಾಹದ್‌ ಫಾಸಿಲ್‌ ಜೊತೆ ʼದೃಶ್ಯಂʼ ನಿರ್ದೇಶಕನ ಸಿನಿಮಾ:‌ ಸುದ್ದಿ ಕೇಳಿ ಥ್ರಿಲ್‌ ಆದ ಫ್ಯಾನ್ಸ್

1-qwew-eqw-wq

Yellapur; ಶಾಲೆಯ ಮೇಲೆ ಬಿದ್ದ ಬೃಹತ್ ಮರ

Kalaburagi; Suresh Sajjan submits nomination as BJP rebel candidate

Kalaburagi; ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸುರೇಶ ಸಜ್ಜನ್ ನಾಮಪತ್ರ ಸಲ್ಲಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.