ಪಾಕ್ ನಿರ್ಬಂಧ ತೆರವು?
Team Udayavani, May 13, 2019, 6:04 AM IST
ಲಾಹೋರ್: ಪಾಕಿಸ್ಥಾನದ ವಾಯುಗಡಿ ಪ್ರವೇಶಿಸದಂತೆ ಭಾರತೀಯ ವಿಮಾನಗಳಿಗೆ ಹೇರಲಾಗಿರುವ ನಿರ್ಬಂಧ ಸಡಿಲಿಸುವ ಬಗ್ಗೆ ಪಾಕಿಸ್ಥಾನ ಸರಕಾರ ಚಿಂತನೆ ನಡೆಸಿದೆ.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪಾಕಿಸ್ಥಾನ ನಾಗರಿಕ ವಿಮಾನ ಯಾನ ಸಚಿವಾಲಯ ವಕ್ತಾರ ಮುಜ್ತಾಬಾ ಬೇಗ್, ‘ಭಾರತೀಯ ವಿಮಾನಗಳಿಗೆ ಪಾಕ್ ವಾಯು ವಲಯದೊಳಗೆ ಅವಕಾಶ ಕಲ್ಪಿಸುವ ಬಗ್ಗೆ ಮೇ 15ರಂದು ನಡೆಯಲಿರುವ ಸಭೆಯಲ್ಲಿ ನಿರ್ಧರಿಸಲಾಗುತ್ತದೆ’ ಎಂದಿದ್ದಾರೆ.
ಫೆ. 26ರ ಅನಂತರದ ಬಾಲಾಕೋಟ್ ಮೇಲಿನ ದಾಳಿ ಹಿನ್ನೆಲೆಯಲ್ಲಿ ಪಾಕ್ ವಾಯು ವಲಯ ಪ್ರವೇಶಿಸುವುದಕ್ಕೆ ಸಂಪೂರ್ಣವಾಗಿ ನಿಷೇಧ ಹೇರಲಾಗಿತ್ತು. ಅನಂತರ, ಫೆ. 27ರಲ್ಲಿ ಹೊಸದಿಲ್ಲಿ, ಬ್ಯಾಂಕಾಕ್, ಕೌಲಾಲಂಪುರ ವಿಮಾನಗಳನ್ನು ಹೊರತುಪಡಿಸಿ ಮಿಕ್ಕ ವಿಮಾನಗಳ ಹಾರಾಟಕ್ಕೆ ಅವಕಾಶ ಕಲ್ಪಿಸಿತ್ತು.