ಹೆಚ್ಚಾಯ್ತು ಸಾಂಕ್ರಾಮಿಕ ರೋಗ ಭೀತಿ!

•ರಾಜ್ಯದಲ್ಲೇ ಅತೀ ಹೆಚ್ಚು ಡೆಂಘೀ ಪೀಡಿತರಿರುವ ಜಿಲ್ಲೆ ಎಂಬ ಕುಖ್ಯಾತಿ

Team Udayavani, May 17, 2019, 12:33 PM IST

Udayavani Kannada Newspaper

ಶಿವಮೊಗ್ಗ: ಮುಂಗಾರಿನಲ್ಲಿ ನೆರೆ, ಹಿಂಗಾರಿನಲ್ಲಿ ಬರದಿಂದ ತತ್ತರಿಸಿರುವ ಶಿವಮೊಗ್ಗ ಜಿಲ್ಲೆ, ಈಗ ಸಾಂಕ್ರಾಮಿಕ ರೋಗಗಳ ಹಾವಳಿಯಿಂದ ನರಳುತ್ತಿದೆ. ಮಾರಣಾಂತಿಕ ಮಂಗನ ಕಾಯಿಲೆ (ಕೆಎಫ್‌ಡಿ) ಇತಿಹಾಸದಲ್ಲೇ ತೀವ್ರ ಪ್ರಮಾಣದಲ್ಲೇ ಏರಿಕೆ ಕಂಡಿರುವ ಈ ಸನ್ನಿವೇಶದಲ್ಲೂ ಇತರೆ ರೋಗಗಳು ಜಿಲ್ಲೆಯ ಜನರನ್ನು ಕಾಡುತ್ತಿವೆ. ರಾಜ್ಯದಲ್ಲೇ ಅತಿ ಹೆಚ್ಚು ಡೆಂಘೀ ಪೀಡಿತರು ಜಿಲ್ಲೆಯಲ್ಲಿರುವುದು ಆತಂಕ ಮೂಡಿಸಿದೆ.

ಜಿಲ್ಲೆಯ ನಾಲ್ಕು ತಾಲೂಕುಗಳು ಬರಪಿಡೀತ ಎಂದು ಘೋಷಣೆಯಾಗಿವೆ. ತೀರ್ಥಹಳ್ಳಿ, ಹೊಸನಗರ, ಸಾಗರ ತಾಲೂಕುಗಳು ನೆರೆಪೀಡಿತವಾಗಿದ್ದವು. ಈಗ ಸಾಂಕ್ರಾಮಿಕ ರೋಗಗಳು ತಮ್ಮ ಪ್ರತಾಪ ಮೆರೆಯುತ್ತಿವೆ. ನವೆಂಬರ್‌ನಲ್ಲಿ ಶುರುವಾದ ಮಂಗನ ಕಾಯಿಲೆ (ಕೆಎಫ್‌ಡಿ) ಈವರೆಗೂ ಅಂದಾಜು 20 ಜನರನ್ನು ಬಲಿ ಪಡೆದಿದ್ದು ನೂರಾರು ಜನರನ್ನು ನಿತ್ರಾಣಗೊಳಿಸಿದೆ. ರೋಗದ ಭಯದಲ್ಲಿ ವ್ಯಾಕ್ಸಿನೇಷನ್‌ ಪಡೆದ ನೂರಾರು ಜನ ನೋವುಂಡು ಕಾಲ ಕಳೆಯುತ್ತಿದ್ದಾರೆ.ಇದರೊಂದಿಗೆ ಈಗ ಮತ್ತೆರೆಡು ಮಹಾಮಾರಿ ಜಿಲ್ಲೆಯನ್ನು ತಲ್ಲಣಗೊಳಿಸಿದೆ.

ಜಿಲ್ಲೆಯಲ್ಲೇ ಹೆಚ್ಚು: ರಾಜ್ಯದಲ್ಲೇ ಅತಿಹೆಚ್ಚು ಡೆಂಘೀ ಪೀಡಿತರು ಕಂಡುಬಂದಿರುವ ಶಿವಮೊಗ್ಗ ಜಿಲ್ಲೆ ಚಿಕೂನ್‌ಗುನ್ಯಾ ಪ್ರಕರಣಗಳಲ್ಲೂ ಮೂರನೇ ಸ್ಥಾನದಲ್ಲಿದೆ. ಈವರೆಗೆ ಜಿಲ್ಲೆಯಲ್ಲಿ 99 ಜನರು ಡೆಂಘೀ ಪೀಡಿತರು, 50 ಮಂದಿ ಚಿಕೂನ್‌ಗುನ್ಯಾ ಪೀಡಿತರನ್ನು ಗುರುತಿಸಲಾಗಿದೆ. ಡೆಂಘೀ ಪೀಡಿತರಲ್ಲಿ ಯಾದಗಿರಿ ಎರಡನೇ ಸ್ಥಾನದಲ್ಲಿದ್ದರೆ, ಚಿಕೂನ್‌ಗುನ್ಯಾ ಪೀಡಿತರ ಸಂಖ್ಯೆಯಲ್ಲಿ ಮೊದಲನೇ ಸ್ಥಾನದಲ್ಲಿದೆ. ಹಿಂದಿನ ದಾಖಲೆಗೆ ಹೋಲಿಸಿದರೆ ಈ ಬಾರಿ ಪೀಡಿತರ ಸಂಖ್ಯೆ ಕಡಿಮೆ ಇದ್ದರೂ ಜಿಲ್ಲೆ ರಾಜ್ಯದಲ್ಲೇ ಮೊದಲನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ 2018ರಲ್ಲಿ 262 ಮಂದಿ ಡೆಂಘೀ ಪೀಡಿತರಾಗಿದ್ದು, 2017ರಲ್ಲಿ 584 ಮಂದಿ, 2016ರಲ್ಲಿ 412, 2015ರಲ್ಲಿ 130 ಮಂದಿ ಪೀಡಿತರಾಗಿದ್ದರು. ಅದೇ ರೀತಿ ಚಿಕೂನ್‌ಗುನ್ಯಾಕ್ಕೆ 2018ರಲ್ಲಿ 250, 2017ರಲ್ಲಿ 43, 2016ರಲ್ಲಿ 53, 2015ರಲ್ಲಿ 68 ಮಂದಿ ತುತ್ತಾಗಿದ್ದರು.

ಮಲೆನಾಡಲ್ಲೇ ಹೆಚ್ಚು: ಈಗಾಗಲೇ ಕೆಎಫ್‌ಡಿ ಪೀಡಿತ ಸಾಗರ ಹಾಗೂ ತೀರ್ಥಹಳ್ಳಿ ಪ್ರದೇಶಗಳಲ್ಲೇ ಈ ರೋಗಗಳು ಹೆಚ್ಚಾಗಿವೆ. ತೀರ್ಥಹಳ್ಳಿಯಲ್ಲಿ 35 ಮಂದಿ ಡೆಂಘೀ, 12 ಮಂದಿ ಚಿಕೂನ್‌ಗುನ್ಯಾ ಪೀಡಿತರನ್ನು ಗುರುತಿಸಲಾಗಿದೆ. ಈ ಎರಡೂ ತಾಲೂಕುಗಳು ಮಲೆನಾಡು ಪ್ರದೇಶಗಳಾಗಿರುವುದರಿಂದ ಸೊಳ್ಳೆಗಳ ಸಂತಾನೋತ್ಪತ್ತಿಗೆ ಪೂರಕವಾಗಿವೆ. ಇದು ಸಹ ಕಾಯಿಲೆ ಉಲ್ಬಣಕ್ಕೆ ಕಾರಣ ಎನ್ನಲಾಗುತ್ತಿದೆ. ಇನ್ನು ಭದ್ರಾವತಿಯಲ್ಲಿ ಡೆಂಘೀ 7, ಚಿಕೂನ್‌ಗುನ್ಯಾ 9, ಶಿವಮೊಗ್ಗದಲ್ಲಿ ಡೆಂಘೀ 15, ಚಿಕೂನ್‌ಗುನ್ಯಾ 7, ಹೊಸನಗರದಲ್ಲಿ ಡೆಂಘೀ 4, ಚಿಕೂನ್‌ಗುನ್ಯಾ 4, ಸೊರಬದಲ್ಲಿ ಡೆಂಘೀ 13, ಚಿಕೂನ್‌ಗುನ್ಯಾ 7, ಶಿಕಾರಿಪುರದಲ್ಲಿ ಡೆಂಘೀ 6, ಚಿಕೂನ್‌ಗುನ್ಯಾ 9 ಪ್ರಕರಣ ದಾಖಲಾಗಿವೆ.

ಬೆಂಗಳೂರು ನಗರ 8, ರಾಮನಗರ 4, ಕೋಲಾರ 12, ಚಿಕ್ಕಬಳ್ಳಾಪುರ 3, ತುಮಕೂರು 3, ಚಿತ್ರದುರ್ಗ 17, ದಾವಣಗೆರೆ 20, ವಿಜಯಪುರ 3, ಧಾರವಾಡ 3, ಗದಗ 9, ಹಾವೇರಿ 26, ಉತ್ತರ ಕನ್ನಡ 3, ಕಲಬುರ್ಗಿ 41, ಯಾದಗಿರಿ 57, ಬೀದರ್‌ 22, ಬಳ್ಳಾರಿ 18, ರಾಯಚೂರು 19. ಕೊಪ್ಪಳ 14, ಮಂಡ್ಯ 1, ಹಾಸನ 3, ದಕ್ಷಿಣ ಕನ್ನಡ 47, ಉಡುಪಿ 48, ಚಿಕ್ಕಮಗಳೂರು 4, ಕೊಡಗಿನಲ್ಲಿ ಒಬ್ಬರು ಡೆಂಘೀ ಪೀಡಿತರಾಗಿದ್ದಾರೆ.

ಡೆಂಘೀ ಪೀಡಿತರು
ಬೆಂಗಳೂರು ನಗರ 8, ರಾಮನಗರ 4, ಕೋಲಾರ 12, ಚಿಕ್ಕಬಳ್ಳಾಪುರ 3, ತುಮಕೂರು 3, ಚಿತ್ರದುರ್ಗ 17, ದಾವಣಗೆರೆ 20, ವಿಜಯಪುರ 3, ಧಾರವಾಡ 3, ಗದಗ 9, ಹಾವೇರಿ 26, ಉತ್ತರ ಕನ್ನಡ 3, ಕಲಬುರ್ಗಿ 41, ಯಾದಗಿರಿ 57, ಬೀದರ್‌ 22, ಬಳ್ಳಾರಿ 18, ರಾಯಚೂರು 19. ಕೊಪ್ಪಳ 14, ಮಂಡ್ಯ 1, ಹಾಸನ 3, ದಕ್ಷಿಣ ಕನ್ನಡ 47, ಉಡುಪಿ 48, ಚಿಕ್ಕಮಗಳೂರು 4, ಕೊಡಗಿನಲ್ಲಿ ಒಬ್ಬರು ಡೆಂಘೀ ಪೀಡಿತರಾಗಿದ್ದಾರೆ.

ಶಿವಮೊಗ್ಗದಲ್ಲಿ ವೈದ್ಯಕೀಯ ಸೌಲಭ್ಯ ಚೆನ್ನಾಗಿರುವುದರಿಂದ ಅಕ್ಕಪಕ್ಕದ ಜಿಲ್ಲೆಯ ಜನರು ಇಲ್ಲಿಗೆ ಬರುತ್ತಾರೆ. ಹಾಗಾಗಿ ಒಟ್ಟಾರೆ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಆದರೆ ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಮೂರು ವರ್ಷದ ಅಂಕಿ-ಅಂಶದ ಆಧಾರದ ಮೇಲೆ ಮ್ಯಾಪಿಂಗ್‌ ಮಾಡಿ ಆಶಾ ಕಾರ್ಯಕರ್ತೆಯರನ್ನು ಬಳಸಿಕೊಂಡು ಮನೆಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸಲಾಗುತ್ತಿದೆ.
ಡಾ| ರಾಜೇಶ್‌ ಸುರಗೀಹಳ್ಳಿ,
ಡಿಎಚ್ಒ, ಶಿವಮೊಗ್ಗ

•ಶರತ್‌ ಭದ್ರಾವತಿ

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.