ಕ್ಯಾನ್ಸರ್ ಔಷಧ ಬೆಲೆ ಭಾರೀ ಕಡಿತಗೊಳಿಸಿದ ಸರಕಾರ
Team Udayavani, May 21, 2019, 6:15 AM IST
ಹೊಸದಿಲ್ಲಿ: ಕ್ಯಾನ್ಸರ್ ಚಿಕಿತ್ಸೆಗೆ ಬಳಸಲಾಗುತ್ತಿರುವ 9 ಔಷಧಗಳ ಬೆಲೆಯನ್ನು ಗಮನಾರ್ಹವಾಗಿ ಕಡಿಮೆಗೊಳಿಸಿ ಕೇಂದ್ರ ಸರಕಾರದ ಔಷಧ ಬೆಲೆ ನಿಯಂತ್ರಣಾ ಪ್ರಾಧಿಕಾರ ಆದೇಶ ಹೊರಡಿಸಿದೆ.
ಲಾಭದ ಮಾರ್ಜಿನ್ನಲ್ಲಿ ಶೇ. 30ರಿಂದ ಶೇ. 60ರ ವರೆಗೂ ಇಳಿಕೆ ಮಾಡಲಾಗಿದೆ. ಎರ್ಲೊಟಿನಿಬ್, ಪೆಮ್ಎಕ್ಸೆಲ್, ಎಪೋಕ್ಲೊರ್, ಲಿಯೋಪ್ರೊಗೋನ್ ಡಿಪೋ, ಲ್ಯಾನೋಲಿಮಸ್ ಔಷಧಗಳ ಬೆಲೆ ಕಡಿಮೆ ಮಾಡಲಾಗಿದೆ.
ಇದರಿಂದಾಗಿ ಶ್ವಾಸಕೋಶದ ಕ್ಯಾನ್ಸರ್ನಿಂದ ಬಳಲುತ್ತಿರುವ ರೋಗಿಗಳಿಗೆ ಕೀಮೋಥೆರಪಿಯಲ್ಲಿ ಬಳಸಲಾಗುತ್ತಿದ್ದ ಪೆಮ್ಎಕ್ಸೆಲ್ ಎಂಬ 500 ಮಿ.ಗ್ರಾಂ ಚುಚ್ಚುಮದ್ದಿನ ಬೆಲೆ 22 ಸಾವಿರ ರೂ. ಇಂದ 2800 ರೂ.ಗೆ ಇಳಿಕೆಯಾಗಲಿದೆ.
ಎರಡನೇ ಬಾರಿಗೆ ಈ ರೀತಿ ಕ್ಯಾನ್ಸರ್ಗೆ ಚಿಕಿತ್ಸೆ ನೀಡಲಾಗುವ ಔಷಧಗಳ ಲಾಭದ ಮಾರ್ಜಿನ್ ಮೇಲೆ ಇಳಿಕೆ ಮಾಡಿ ಬೆಲೆ ಇಳಿಕೆಗೆ ಆದೇಶ ಹೊರಡಿಸಲಾಗಿದೆ. ಈ ಹಿಂದೆ ಫೆಬ್ರವರಿಯಲ್ಲಿ ಕ್ಯಾನ್ಸರ್ ಸಂಬಂಧಿ 42 ಔಷಧಗಳ ಬೆಲೆಯನ್ನು ಇಳಿಕೆ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ