ಇವಿಎಂ ಪ್ರಶ್ನೆ ಬೋಗಸ್, 370ನೇ ವಿಧಿ ನಿಲುವು ಸ್ಪಷ್ಟ : ಬಿಹಾರ ಸಿಎಂ ನಿತೀಶ್
Team Udayavani, May 21, 2019, 3:54 PM IST
ಪಟ್ನಾ : ‘ಇವಿಎಂ ಸಾಚಾತನದ ಬಗ್ಗೆ ಜನರು ಬೋಗಸ್ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ; ನಿಜಕ್ಕಾದರೆ ಇವಿಎಂ ಗಳನ್ನು ಪರಿಚಯಿಸಲಾದ ಬಳಿಕವೇ ಚುನಾವಣೆಗಳು ಹೆಚ್ಚು ಪಾರದರ್ಶಶಕವಾಗಿವೆ’ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
“ಈ ಹಿಂದೆಯೂ ಅನೇಕ ಬಾರಿ ಇವಿಎಂ ತಂತ್ರಜ್ಞಾನವನ್ನೇ ಪ್ರಶ್ನಿಸಲಾಗಿದೆ ಮತ್ತು ಚುನಾವಣಾ ಆಯೋಗ ಅದಕ್ಕೆ ತಕ್ಕುದಾದ ಉತ್ತರವನ್ನೇ ನೀಡಿದೆ; ಚುನಾವಣೆಯಲ್ಲಿ ಸೋಲಾಗುವ ಶಂಕೆ ಇರುವ ಬಣಗಳು ಇವಿಎಂ ಗಳಲ್ಲಿ ಲೋಪದೋಷ ಇದೆ ಎಂದು ಗುಲ್ಲೆಬ್ಬಿಸುತ್ತಿವೆ; ಇದೇನೂ ಹೊಸ ವಿಷಯವಲ್ಲ’ ಎಂದು ನಿತೀಶ್ ಹೇಳಿದರು.
‘ಎನ್ಡಿಎ ಮರಳಿ ಅಧಿಕಾರಕ್ಕೆ ಬರಲಿದೆ ಎಂಬ ಮತಗಟ್ಟೆ ಸಮೀಕ್ಷೆಗಳ ಮೂಲಕ ಮತದಾರರು ಸಂವಿಧಾನದ 370ನೇ ವಿಧಿ, ಸಮಾನ ನಾಗರಿಕ ಸಂಹಿತೆ, ಇವಿಎಂ ಇತ್ಯಾದಿ ವಿಷಯಗಳಲ್ಲಿನ ತಮ್ಮ ನಿಲುವನ್ನು ದೃಢಪಡಿಸಿದ್ದಾರೆ’ ಎಂದು ನಿತೀಶ್ ಹೇಳಿದರು.
ನಿತೀಶ್ ಅವರು ಎನ್ಡಿಎ ಮಿತ್ರ ಪಕ್ಷಗಳಿಗಾಗಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಏರ್ಪಡಿಸಿರುವ ಭೋಜನ ಕೂಟದಲ್ಲಿ ಪಾಲ್ಗೊಳ್ಳಲು ದಿಲ್ಲಿಗೆ ನಿರ್ಗಮಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
Encounter: ಛತ್ತೀಸ್ಗಢದಲ್ಲಿ ಎನ್ಕೌಂಟರ್… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ