ಖುಷಿಯಿಂದಲೇ ಶಾಲೆಯತ್ತ ಹೆಜ್ಜೆ ಹಾಕಿದ ಚಿಣ್ಣರು

Team Udayavani, May 30, 2019, 6:00 AM IST

2905MLR23-SCHOOL3

ಮಹಾನಗರ: ಎಲ್ಲ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಬುಧವಾರ 2019- 20ನೇ ಸಾಲಿನ ಶೈಕ್ಷಣಿಕ ವರ್ಷಾರಂಭಕ್ಕೆ ತೆರೆದುಕೊಂಡಿವೆ. ಬೇಸಗೆ ರಜೆಯ ಮಜಾವನ್ನು ಕಳೆದು ವಿದ್ಯಾರ್ಥಿಗಳೂ ಖುಷಿಯಲ್ಲಿ ಶಾಲೆಯತ್ತ ಹೆಜ್ಜೆ ಹಾಕಿದ್ದಾರೆ. ಅವರನ್ನು ಬರ ಮಾಡಿಕೊಳ್ಳಲು ನಗರದ ಎಲ್ಲ ಸರಕಾರಿ ಶಾಲೆಗಳಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಹಮ್ಮಿಕೊಳ್ಳಲಾಯಿತು.

ಎಪ್ರಿಲ್ ಹತ್ತರಿಂದ ಒಂದೂ ವರೆ ತಿಂಗಳಿಗೂ ಹೆಚ್ಚು ಕಾಲ ರಜಾ ಕಾಲದ ಸಂಭ್ರಮವನ್ನು ಅನುಭವಿಸಿದ್ದ ಮಕ್ಕಳಿಗೆ ಇನ್ನೇನಿದ್ದರೂ ಬ್ಯಾಗ್‌ ಹೆಗಲೇರಿಸಿಕೊಂಡು ಶಾಲೆಗೆ ತೆರಳುವ ಸಮಯ. ಆಟದಲ್ಲಿ ಮೈಮರೆತ ಮಕ್ಕಳಿಗೆ ಪಾಠ ಕಲಿಯುವ ದಿನಗಳು. ರಜಾ ಕಾಲದಲ್ಲಿ ಖುಷಿಯಲ್ಲಿದ್ದ ಮಕ್ಕಳಿಗೆ ರಜೆ ಕಳೆದು ಶಾಲೆಗೆ ಬರುವಾಗ ಬೇಸರವಾಗಬಾರದು ಎಂಬ ಕಾರಣಕ್ಕಾಗಿ ಕೆಲವು ವರ್ಷಗಳಿಂದ ಸರಕಾರವು ಶಾಲಾ ಪ್ರಾರಂಭೋತ್ಸವವನ್ನು ಹಮ್ಮಿಕೊಳ್ಳಲು ಸೂಚಿಸಿತ್ತು.

ಹೂ ನೀಡಿ ಸ್ವಾಗತ
ಎಲ್ಲ ಶಾಲೆಗಳಲ್ಲಿಯೂ ಮಕ್ಕಳನ್ನು ವಿಶಿಷ್ಟವಾಗಿ ಸ್ವಾಗತಿಸಲಾಯಿತು. ಪ್ರಾರಂಭೋತ್ಸವದ ಹಿನ್ನೆಲೆಯಲ್ಲಿ ಶಾಲೆ ಗಳನ್ನು ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ಅತ್ತಾವರ, ಗಾಂಧಿ ನಗರ, ಕೊಂಚಾಡಿ ರಾಮಾಶ್ರಮ ಶಾಲೆಯಲ್ಲಿ ಶಾಲಾ ಗೇಟ್ ಬಳಿ ನಿಂತಿದ್ದ ಶಿಕ್ಷಕರು ಎಲ್ಲ ವಿದ್ಯಾರ್ಥಿಗಳಿಗೆ ಹೂ ನೀಡಿ ಶಾಲೆಯೊಳಗೆ ಬರಮಾಡಿಕೊಂಡರು. ಶಿಕ್ಷಕರ ಪ್ರೀತಿಗೆ ಫಿದಾ ಆದ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸುತ್ತಲೇ ಶಾಲೆಯೊಳಗೆ ಪ್ರವೇಶಿಸಿದರು. ಒಂದೂವರೆ ತಿಂಗಳಿನಿಂದ ದೂರವಾಗಿದ್ದ ಸ್ನೇಹಿತರ ಒಡನಾಟ ಈಗ ಮರು ಬೆಸೆದುಕೊಂಡಿದ್ದರಿಂದ ಫುಲ್ ಖುಷಿಯಾದ ಮಕ್ಕಳು ಪರಸ್ಪರ ರಜೆಯ ದಿನಗಳನ್ನು ಮೆಲುಕು ಹಾಕತೊಡಗಿದರು.

ಬಳಿಕ ಎಸ್‌ಡಿಎಂಸಿ ಪದಾಧಿಕಾರಿಗಳು, ಶಿಕ್ಷಕರು, ಹೆತ್ತವರು ಮತ್ತು ಮಕ್ಕಳನ್ನೊಳಗೊಂಡ ಸಭೆ ನಡೆಸಿ ಶೈಕ್ಷಣಿಕ ವರ್ಷದ ಶಾಲಾ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಲಾಯಿತು. ಬಳಿಕ ಪಠ್ಯಪುಸ್ತಕ ವಿತರಿಸಲಾಯಿತು. ವಿದ್ಯಾರ್ಥಿಗಳು, ಹೆತ್ತವರು ಮತ್ತು ಬಂದ ಎಲ್ಲ ಅತಿಥಿಗಳಿಗೆ ಸಿಹಿತಿಂಡಿ ವಿತರಣೆ ನಡೆಯಿತು.

ಗಾಂಧಿನಗರ ಶಾಲೆಯಲ್ಲಿ ಮಾಜಿ ಕಾರ್ಪೊರೇಟರ್‌ ಜಯಂತಿ ಆಚಾರ್‌, ಐಆರ್‌ಟಿ ಸಾಧನಾ, ಎಸ್‌ಡಿಎಂಸಿ ಸದಸ್ಯ ಕನಕಪ್ಪ, ಮುಖ್ಯೋಪಾಧ್ಯಾಯಿನಿ ಯಶೋದಾ ಬಿ., ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ದೀಪಕ್‌ ಸುವರ್ಣ, ನಿವೃತ್ತ ಶಿಕ್ಷಕಿ ವೀಣಾ ಬಿ. ಮತ್ತಿತರರು ಉಪಸ್ಥಿತರಿದ್ದರು.

ಅತ್ತಾವರ ಹಿ.ಪ್ರಾ. ಶಾಲೆಯಲ್ಲಿ ಗೌರವ ಸಲಹೆಗಾರ ರತೀಂದ್ರನಾಥ್‌ ಎಚ್., ಎಸ್‌ಡಿಎಂಸಿ ಅಧ್ಯಕ್ಷೆ ಕವಿತಾ, ನಿವೃತ್ತ ಮುಖ್ಯೋಪಾಧ್ಯಾಯಿನಿ ಹೇಮಾವತಿ ಪಿ.ಎಸ್‌., ಪ್ರಭಾರ ಮುಖ್ಯೋಪಾಧ್ಯಾಯಿನಿ ಜಯಾ ಮತ್ತಿತರರು ಉಪಸ್ಥಿತರಿದ್ದರು.

ಬಿಸಿಯೂಟ ಸವಿದರು
ಬೆಳಗ್ಗೆ ಒಂಬತ್ತು ಗಂಟೆಗೆ ಶಾಲೆಗೆ ಆಗಮಿಸಿದ ಮಕ್ಕಳು ಶಾಲಾ ಪರಿಸರವನ್ನು ಸ್ವಚ್ಛಗೊಳಿಸಿದರು. ಬಳಿಕ ತಮ್ಮ ತಮ್ಮ ತರಗತಿಗೆ ತೆರಳಿ ಹೊಸ ಪಠ್ಯಪುಸ್ತಕಗಳನ್ನು ನೋಡಿದರು. ಬಳಿಕ ಮಧ್ಯಾಹ್ನದ ಬಿಸಿಯೂಟ ಸವಿದರು. ಕೆಲವು ಶಾಲೆಗಳಲ್ಲಿ ಬಿಸಿಯೂಟಕ್ಕೆ ಪಾಯಸದ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಟ್ಯಾಂಕರ್‌ ನೀರು ಪೂರೈಕೆ
ಶಾಲಾರಂಭದ ದಿನದಂದೇ ಕೆಲವು ಶಾಲೆಗಳಲ್ಲಿ ನೀರಿನ ಸಮಸ್ಯೆ ಉಂಟಾಯಿತು.
ವಿಶೇಷವೆಂದರೆ, ಈ ಶೈಕ್ಷಣಿಕ ವರ್ಷದಿಂದ ಒಂದನೇ ತರಗತಿ ಮಕ್ಕಳಿಗೆ ಸಂಪೂರ್ಣ ಇಂಗ್ಲಿಷ್‌ನಲ್ಲಿ ಕಲಿಯುವ ಸದವಕಾಶ ಲಭ್ಯವಾಗಲಿದೆ. ಕನ್ನಡ ಭಾಷಾ ಪಠ್ಯ ಹೊರತು ಪಡಿಸಿ ಇಂಗ್ಲಿಷ್‌, ಪರಿಸರ ಅಧ್ಯಯನ ಮತ್ತು ಗಣಿತ ಪಠ್ಯಗಳನ್ನು ಮಕ್ಕಳು ಇಂದಿನಿಂದಲೇ ಇಂಗ್ಲಿಷ್‌ನಲ್ಲಿ ಕಲಿಯಲಿದ್ದಾರೆ. ಆದರೆ, ಕನ್ನಡ ಮಾಧ್ಯಮ ಬೇಕಾದವರಿಗೆ ನಲಿಕಲಿ ಯೋಜನೆಯಡಿಯಲ್ಲಿ ಕನ್ನಡ ಮಾಧ್ಯಮ ಶಿಕ್ಷಣವೂ ಇರಲಿದೆ ಎಂದು ಶಾಲೆಗಳ ಮುಖ್ಯ ಶಿಕ್ಷಕರು ತಿಳಿಸಿದ್ದಾರೆ.

ಇಂಗ್ಲಿಷ್‌ ಮಾಧ್ಯಮ ಆರಂಭ

ಬೆಳಗ್ಗೆ ಮಕ್ಕಳಿಗೆ ಹೂ ನೀಡಿ ಅವರನ್ನು ಶಾಲೆಗೆ ಬರ ಮಾಡಿಕೊಳ್ಳಲಾಯಿತು. ಉತ್ಸಾಹದಿಂದಲೇ ಮಕ್ಕಳು ಶಾಲೆಗೆ ಆಗಮಿಸಿದ್ದಾರೆ. ಮಕ್ಕಳು ಮತ್ತು ಹೆತ್ತವರಿಗೆ ಇಡೀ ವರ್ಷದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಲಾಯಿತು.
– ಯಶೋದಾ ಬಿ.,

ಮುಖ್ಯೋಪಾಧ್ಯಾಯಿನಿ ಗಾಂಧಿನಗರ ಸ.ಹಿ.ಪ್ರಾ. ಶಾಲೆ
ಈ ಶೈಕ್ಷಣಿಕ ವರ್ಷದಿಂದ ಆಯ್ದ ಸರಕಾರಿ ಶಾಲೆಗಳಲ್ಲಿ ಒಂದನೇ ತರಗತಿ ಮಕ್ಕಳಿಗೆ ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿಯುವ ಅವಕಾಶವಿದೆ. ಅದರಂತೆ ಅತ್ತಾವರ ಸರಕಾರಿ ಶಾಲೆಯಲ್ಲಿ ಶಾಲಾರಂಭದ ದಿನವಾದ ಬುಧವಾರದಂದೇ ಆಂಗ್ಲ ಭಾಷಾ ಶಿಕ್ಷಕಿ ಮಕ್ಕಳಿಗೆ ಆಂಗ್ಲ ಭಾಷೆಯನ್ನು ಬೋಧಿಸಿದರು. ಮಕ್ಕಳೂ ಖುಷಿಯಿಂದಲೇ ಭಾಷಾ ಕಲಿಕೆಯಲ್ಲಿ ತೊಡಗಿದ್ದರು.

ಗಾಂಧಿನಗರ ಶಾಲೆಯಲ್ಲಿ ಮಾಜಿ ಕಾರ್ಪೊರೇಟರ್‌ ಜಯಂತಿ ಆಚಾರ್‌, ಐಆರ್‌ಟಿ ಸಾಧನಾ, ಎಸ್‌ಡಿಎಂಸಿ ಸದಸ್ಯ ಕನಕಪ್ಪ, ಮುಖ್ಯೋಪಾಧ್ಯಾಯಿನಿ ಯಶೋದಾ ಬಿ., ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ದೀಪಕ್‌ ಸುವರ್ಣ, ನಿವೃತ್ತ ಶಿಕ್ಷಕಿ ವೀಣಾ ಬಿ. ಉಪಸ್ಥಿತರಿದ್ದರು.

ಅತ್ತಾವರ ಹಿ.ಪ್ರಾ. ಶಾಲೆಯಲ್ಲಿ ಗೌರವ ಸಲಹೆಗಾರ ರತೀಂದ್ರನಾಥ್‌ ಎಚ್., ಎಸ್‌ಡಿಎಂಸಿ ಅಧ್ಯಕ್ಷೆ ಕವಿತಾ, ಹೇಮಾವತಿ ಪಿ.ಎಸ್‌., ಪ್ರಭಾರ ಮುಖ್ಯೋ ಪಾಧ್ಯಾಯಿನಿ ಜಯಾ ಉಪಸ್ಥಿತರಿದ್ದರು.

ಬಿಸಿಯೂಟ ಸವಿದರು
ಬೆಳಗ್ಗೆ ಒಂಬತ್ತು ಗಂಟೆಗೆ ಶಾಲೆಗೆ ಆಗಮಿಸಿದ ಮಕ್ಕಳು ಶಾಲಾ ಪರಿಸರವನ್ನು ಸ್ವಚ್ಛಗೊಳಿಸಿದರು. ಬಳಿಕ ತಮ್ಮ ತಮ್ಮ ತರಗತಿಗೆ ತೆರಳಿ ಹೊಸ ಪಠ್ಯಪುಸ್ತಕಗಳನ್ನು ನೋಡಿದರು. ಬಳಿಕ ಮಧ್ಯಾಹ್ನದ ಬಿಸಿಯೂಟ ಸವಿದರು. ಕೆಲವು ಶಾಲೆಗಳಲ್ಲಿ ಬಿಸಿಯೂಟಕ್ಕೆ ಪಾಯಸದ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಟ್ಯಾಂಕರ್‌ ನೀರು ಪೂರೈಕೆ
ಶಾಲಾರಂಭದ ದಿನದಂದೇ ಕೆಲವು ಶಾಲೆಗಳಲ್ಲಿ ನೀರಿನ ಸಮಸ್ಯೆ ಉಂಟಾಯಿತು. ಆದರೆ ತತ್‌ಕ್ಷಣ ಮನಪಾ ಸಂಬಂಧಪಟ್ಟವರಿಗೆ ತಿಳಿಸಿದ್ದರಿಂದ ಟ್ಯಾಂಕರ್‌ ಮೂಲಕ ನೀರು ತಂದು ತೊಂದರೆಯಾಗದಂತೆ ನೋಡಿಕೊಳ್ಳಲಾಯಿತು.

ಖಾಸಗಿ ಶಾಲೆ ತಡವಾಗಿ ಆರಂಭ
ನಗರದ ಕೆಲವು ಖಾಸಗಿ ಶಾಲೆಗಳಲ್ಲಿ ಬುಧವಾರವೇ ಶಾಲಾರಂಭವಾದರೆ, ಬಹುತೇಕ ಶಾಲೆಗಳಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ತಡವಾಗಿ ಶಾಲಾರಂಭ ವಾಗಲಿದೆ. ಕೆಲವೆಡೆ ಜೂ. 7, ಜೂ. 10ರಂದು ಶಾಲೆಗಳು ಆರಂಭವಾಗಲಿವೆ ಎಂಬುದಾಗಿ ಖಾಸಗಿ ಶಾಲಾ ಶಿಕ್ಷಕರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.