ನೀರಿಂಗಿಸುವುದು ಸರ್ಕಾರಿ ಕೆಲಸವಲ್ಲ, ನಮ್ಮಗಳ ಕರ್ತವ್ಯ!

ಮಹಾರಾಷ್ಟ್ರದಲ್ಲಿ ಪಾನಿ ಫೌಂಡೇಷನ್‌ ಸಾಧನೆ ಬರಪೀಡಿತ ಜಿಲ್ಲೆಗೆ ಮಾದರಿಯಾಗಲಿ

Team Udayavani, Jun 5, 2019, 3:44 PM IST

Udayavani Kannada Newspaper

ಕೋಲಾರ: ಪರಿಸರವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಅದರಲ್ಲೂ ಅಪಾಯಕಾರಿ ಮಟ್ಟಕ್ಕೆ ಅಂತರ್ಜಲ ಇಳಿದಿರುವ ಜಿಲ್ಲೆಯಲ್ಲಿ ಪರಿಸರ ಉಳಿಸಿಕೊಳ್ಳುವುದು ಆದ್ಯತೆ ನೀಡಬೇಕಾಗಿದೆ.

ಪರಿಸರ ಉಳಿಸಿಕೊಳ್ಳಬೇಕಾದರೆ ಪ್ರಮುಖವಾಗಿ ಎರಡು ವಿಷಯಗಳ ಕುರಿತು ಗಮನಹರಿಸಬೇಕು. ಒಂದು ಯಥೇಚ್ಛವಾಗಿ ಮರಗಳನ್ನು ಬೆಳೆಸಬೇಕು. ಇನ್ನೊಂದು ಭೂಮಿಗೆ ಸುರಿಯುವ ಮಳೆ ನೀರಿನ ಪ್ರತಿ ಹನಿಯನ್ನು ಹಿಡಿದಿಟ್ಟುಕೊಳ್ಳಬೇಕು. ಮರಗಳನ್ನು ಬೇಕಾಬಿಟ್ಟಿ ಕಡಿದು ಬಳಸಿಕೊಂಡಿರುವ ಕೋಲಾರ ಜಿಲ್ಲೆಯ ಜನರು ಕೆರೆ ಕುಂಟೆಗಳನ್ನು ಸಮತಟ್ಟು ಮಾಡಿ ಕಟ್ಟಡಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ. ಕೆರೆ ಕುಂಟೆ ಕಲ್ಯಾಣಿ ರಾಜಕಾಲುವೆಗಳೆಂಬ ಪೂರ್ವಿಕರ ನಿರ್ಮಾಣಗಳು ಕ್ರಮೇಣ ಕಣ್ಮರೆಯಾಗುತ್ತಿವೆ. ಇವೆಲ್ಲದರ ಪರಿಣಾಮ ಮಳೆ ಅಪರೂಪದ ಅತಿಥಿಯಾಗುತ್ತಿದೆ. ಅಂತರ್ಜಲ ಎರಡು ಸಾವಿರ ಅಡಿಗಳಿಗೆ ತಲುಪಿದೆ.

ಪರಿಹಾರವೇನು?: ಪ್ರಸ್ತುತ ವಿಶ್ವ ಪರಿಸರ ದಿನಾಚರಣೆ ಆಚರಿಸುತ್ತಿರುವ ಸಂದರ್ಭದಲ್ಲಿ ಜಿಲ್ಲೆಯ ಪರಿಸರ ಉಳಿಸಿಕೊಳ್ಳುವ ಕುರಿತು ಪಾನಿ ಫೌಂಡೇಷನ್‌ ಮಹಾರಾಷ್ಟ್ರದಲ್ಲಿ ನಡೆಸುತ್ತಿರುವ ನೀರು ಹಿಡಿದಿಟ್ಟುಕೊಳ್ಳುವ ಸ್ಪರ್ಧೆ ಜಿಲ್ಲೆಗೂ ಮಾದರಿಯಾಗಬೇಕಾಗಿದೆ. ಪ್ರತಿಯೊಬ್ಬರು ನೀರು ಹಿಡಿದಿಟ್ಟುಕೊಳ್ಳುವ ಕಾರ್ಯದಲ್ಲಿ ಸ್ಪಯಂ ಪ್ರೇರಿತವಾಗಿ ಭಾಗಿಯಾಗಬೇಕಾಗಿದೆ.

ಸರ್ಕಾರಿ ಕೆಲಸವಲ್ಲ: ಯಾರ ಯಜಮಾನಿಕೆಯೂ ಇಲ್ಲದ ಗುಡ್ಡಬೆಟ್ಟಗಳಲ್ಲಿ ಸುರಿಯುವ ಮಳೆಯನ್ನು ಹೇಗೆ ಹಿಡಿದಿಟ್ಟು ನೆಲಕ್ಕೆ ಇಂಗಿಸಬೇಕು, ಯಾರು ಇಂಗಿಸಬೇಕು? ಎನ್ನುವುದು ಬಹು ಮುಖ್ಯ ವಿಚಾರ. ನಮ್ಮಲ್ಲಿ ಬಹಳಷ್ಟು ಮಂದಿಗೆ ಸರ್ಕಾರವೇ ಈ ಕೆಲಸ ಮಾಡಬೇಕು ಎಂಬ ನಂಬಿಕೆ ಇದೆ. ಸರ್ಕಾರವು ಅಂತರ್ಜಲ ವೃದ್ಧಿಗೆ ಕೆ.ಸಿ. ವ್ಯಾಲಿ, ಚೆಕ್‌ ಡ್ಯಾಂಗಳ ನಿರ್ಮಾಣ, ಕೆರೆ ಹೂಳೆತ್ತುವಿಕೆ ಇತ್ಯಾದಿ ಕೆಲಸಗಳನ್ನು ಕೈಗೆತ್ತಿಕೊಂಡಿದೆ. ಆದರೆ, ಇದ್ಯಾವುದು ಪರಿಪೂರ್ಣವಲ್ಲ. ಪರಿಣಾಮಕಾರಿಯಾಗಿಯೂ ಇಲ್ಲ. ಕಾರಣ ಇದು ಕೇವಲ ಸರ್ಕಾರಿ ಕೆಲಸವಾಗಿ ಉಳಿದಿರುವುದು. ಜನರ ಪಾಲ್ಗೊಳ್ಳುವಿಕೆ ನೆಪ ಮಾತ್ರಕ್ಕೆ ಇರುವಂತಾಗಿರುವುದು. ಇದರಿಂದ ಸರ್ಕಾರಿ ಇಲಾಖೆಗಳ ಯೋಜನೆಗಳೆಲ್ಲ ಹಳ್ಳ ಹಿಡಿಯುವಂತಾಗಿದೆ. ಎರಡು ಮೂರು ದಶಕಗಳಲ್ಲಿ ಜಿಲ್ಲೆಯೊಂದರಲ್ಲಿಯೇ ನೀರು ಪೂರೈಕೆ ವಿಚಾರದಲ್ಲಿ ನಡೆದಿರುವ ಭ್ರಷ್ಟಾಚಾರಕ್ಕೆ ಸರಿಯಾದ ಲೆಕ್ಕವೇ ಇಲ್ಲವೆನಿಸುತ್ತದೆ.

ನೀರು ಹಿಡಿದಿಟ್ಟುಕೊಳ್ಳುವ ಸ್ಪರ್ಧೆ: ಸರ್ಕಾರದ ಹಣ ಬೃಹತ್‌ ಯೋಜನೆಗಳ ಮೂಲಕ ವ್ಯರ್ಥವಾಗುವುದನ್ನು ತಡೆಯಬೇಕಾದರೆ, ಪ್ರತಿಯೊಬ್ಬರು ನೀರು ಇಂಗಿಸುವ ಕಾಯಕದಲ್ಲಿ ತೊಡಗಬೇಕಾಗುತ್ತದೆ. ಮಳೆ ನೀರನ್ನು ಯಾರೂ ಇಂಗಿಸದೇ ಇದ್ದರೆ ಅದು ತಂತಾನೇ ಹರಿದು, ಮೇಲ್ಮಣ್ಣನ್ನು ಕೊಚ್ಚಿ ಸಾಗಿಸುತ್ತದೆ. ಕೆರೆ-ತೊರೆಗಳಿಗೆ ಅಪಾರ ಹೂಳನ್ನು ತುಂಬುತ್ತಾ ತನ್ನ ಪಾಡಿಗೆ ತಾನು ಹರಿದು ಸಮುದ್ರಕ್ಕೆ ಸೇರುತ್ತದೆ.

ಗ್ರಾಮೀಣ ಜನರು ತಾವಾಗಿ ಒಗ್ಗಟ್ಟಾಗಿ ನಿಂತರೆ ಏನೆಲ್ಲ ಸಾಧಿಸಬಹುದು ಎಂಬುದಕ್ಕೆ ಮಹಾರಾಷ್ಟ್ರದ ‘ಹಿವ್ರೆ ಬಝಾರ್‌’ ಎಂಬ ಹಳ್ಳಿಯ ಉದಾಹರಣೆ ನಮ್ಮೆದುರು ಇದೆ. ಬರಪೀಡಿತ ಆ ಊರಲ್ಲಿ ಜನರೆಲ್ಲ ಗುಳೆ ಎದ್ದು ಹೊರಡುತ್ತಿದ್ದಾಗ ಒಂದು ಪುಟ್ಟ ಗ್ರಾಮದಲ್ಲಿ ಜಲಕ್ರಾಂತಿ ಸಂಭವಿಸಿತು. ಅಲ್ಲಿ ಇಂದು ಐವತ್ತಕ್ಕೂ ಹೆಚ್ಚು ಜನರು ಕೃಷಿ ಮತ್ತು ಡೇರಿ ಕೆಲಸ ಮಾಡುತ್ತಲೇ ದಶಲಕ್ಷಾಧೀಶರಾಗಿದ್ದಾರೆ. ಅಲ್ಲೇನೂ ಯಾರೂ ದೊಡ್ಡ ಅಣೆಕಟ್ಟು ಕಟ್ಟಿಲ್ಲ ಅಥವಾ ಮೋಡಬಿತ್ತನೆ ಮಾಡಲಿಲ್ಲ. ಸುರಿದಷ್ಟು ಮಳೆಯನ್ನೇ ಹಿಡಿದು ನಿಲ್ಲಿಸಿದರು ಅಷ್ಟೆ.

ಇದೇ ಮಾದರಿ: ಅದನ್ನೇ ಮಾದರಿಯಾಗಿ ಇಟ್ಟುಕೊಂಡು ಮಹಾರಾಷ್ಟ್ರದ ‘ಪಾನಿ ಫೌಂಡೇಶನ್‌ ಸಂಸ್ಥೆ’ ಜಗತ್ತಿನ ಗಮನ ಸೆಳೆಯುವಷ್ಟು ಅಚ್ಚರಿಯ ಕೆಲಸವನ್ನು ಮಾಡುತ್ತಿದೆ. ಮಳೆನೀರನ್ನು ಹಿಡಿದಿಡುವ ‘ವಾಟರ್‌ ಕಪ್‌ ಸ್ಪರ್ಧೆ’ಯನ್ನು ನಾಲ್ಕು ವರ್ಷಗಳ ಹಿಂದೆ ಅದು ಮೂರು ತಾಲೂಕುಗಳ 116 ಹಳ್ಳಿಗಳಲ್ಲಿ ಆರಂಭಿಸಿತು. ಕೋಲಾರ ಜಿಲ್ಲೆಯ ಅಂತರಗಂಗೆ ಬೆಟ್ಟ ಸೇರಿದಂತೆ ಖಾಲಿ ಇರುವ ಸರ್ಕಾರಿ ಭೂಮಿ, ಅರಣ್ಯ ಪ್ರದೇಶ, ಖಾಸಗಿ ಭೂಮಿಯಲ್ಲಿ ಇಂತ ಕ್ರಾಂತಿಕಾರಕ ಕೆಲಸವಾದರೆ ಜಿಲ್ಲೆಯಲ್ಲಿ ಪ್ರತಿ ವರ್ಷ ಸುರಿಯುವ 750 ಮಿ.ಮೀ ಮಳೆಯಲ್ಲಿಯೇ ಪರಿಸರ ಕಾಪಾಡಿಕೊಳ್ಳಲು ಸಾಧ್ಯವೆನ್ನುತ್ತಾರೆ ಜಲತಜ್ಞರು. ಇದಕ್ಕಾಗಿ ಜನರು ಮನಸ್ಸು ಮಾಡಬೇಕಷ್ಟೆ.

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.