ಚಂದನವನದಲ್ಲಿ ಹರ್ಷಿತ್‌ ಹೆಜ್ಜೆ ಗುರುತು

ಕಿರುತೆರೆಯಲ್ಲಿ ಮಿಂಚಿ ಇದೀಗ ಹಿರಿತೆರೆಗೆ ಲಗ್ಗೆ

Team Udayavani, Jun 15, 2019, 5:00 AM IST

q-15

ಸಾಧನೆಗೆ ಸಣ್ಣ ಸಣ್ಣ ಪ್ರಯತ್ನಗಳೇ ಮೆಟ್ಟಿಲುಗಳು. ಪ್ರಯತ್ನಗಳೇ ನಮ್ಮನ್ನು ಗುರಿಮುಟ್ಟಿಸುತ್ತವೆ. ಸತತ ಪ್ರಯತ್ನದಿಂದ ಗುರಿ ಸೇರುವ ಘಳಿಗೆ ಸಮಿಪಿಸಬಹುದು. ಇದೇ ರೀತಿ ತನ್ನ ಬಣ್ಣ ಬಣ್ಣದ ಕನಸನ್ನು (ನನಸಾಗಿಸಲು) ರಂಗೇರಿಸಲು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ ಪುತ್ತೂರು ತಾಲೂಕಿನ ಹರ್ಷಿತ್‌ ಕಣಿಯಾರು.

ನಗು ಮೊಗದ ಚೆಲುವನಿಗೆ ನಟನಾಗುವ ಕನಸು. ಬಿಬಿಎಂ ಪದವೀಧರರಾದ ಇವರು ತಮ್ಮ ಶಾಲಾ ದಿನಗಳಿಂದಲೇ ನೃತ್ಯ, ನಾಟಕ. ಇಂತಹ ಕಾರ್ಯಕ್ರಮಗಳೆಲ್ಲ ಹೆಚ್ಚಿನ ಒಲವನ್ನು ತೋರುತ್ತಿದ್ದರು. ನಟನಾಗಬೇಕು ಎಂಬ ಕನಸು ಹಚ್ಚ ಹಸುರಾಗಿಯೇ ಉಳಿಯಿತು. ನಟನೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ ಅವರು, ಈ ಕುರಿತು ಹೆಚ್ಚಿನ ತರಬೇತಿ ಪಡೆದರು. ಉಡುಪಿಯಲ್ಲಿ ನಡೆದ ಫಿಲ್ಮ್ ಆಡಿಷನ್‌ನಲ್ಲಿ ಭಾಗವಹಿಸಿ ನಟನೆಯ ಕ್ಷೇತ್ರದಲ್ಲಿ ತಮ್ಮ ಅರ್ಹತೆಯನ್ನು ಸಾಬೀತು ಮಾಡಿದರು.

ಬಣ್ಣದ ಬದುಕಿನ ಕನಸ ಹೊತ್ತ ಹೈದನಿಗೆ ಧಾರವಾಹಿಗಳಲ್ಲಿ ಅವಕಾಶ ತೆರೆದುಕೊಂಡಿತ್ತು. ನಾ ನಿನ್ನ ಬಿಡಲಾರೆ, ಸೀತಾ ವಲ್ಲಭ, ಸರ್ವಮಂಗಲ ಮಾಂಗಲೆ ಸಹಿತ ಹಲವು ಧಾರವಾಹಿಗಳಲ್ಲಿ ಉತ್ತಮವಾಗಿ ಅವಕಾಶಗಳು ಸಿಕ್ಕವು. ನಟನೆಯ ಅನುಭವ ಬೆಳೆಯಲೂ ಸಹಾಯವಾಯಿತು. ಅವಕಾಶಗಳ ಆಶಾವಾದಿಯಾದ ಹರ್ಷಿತ್‌ಗೆ ಈ ಅವಕಾಶಾಗಳು ಜೀವ ತುಂಬಿದವು. ಇದೀಗ ಅವರ ನಟನ ಕೌಶಲವನ್ನು ಗುರುತಿಸಿ ಖ್ಯಾತ ನಿರ್ದೇಶಕ ಕೃಷ್ಣ ವಿ. ಹಾಗೂ ಮಧುಸೂದನ್‌ ಇವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಹೊಸ ಚಿತ್ರವೊಂದರಲ್ಲಿ ನಾಯಕ ನಟರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಚಂದನವನಕ್ಕೆ ಲಗ್ಗೆಯಿಟ್ಟಿದ್ದಾರೆ. ಕಿರು ತೆರೆಯಿಂದ ಹಿರಿ ತೆರೆಗೆ ಕಾಲಿಟ್ಟ ಮುಗ್ಧ ಮನದ ಹೈದನಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳುವ ಸೂಚನೆ ಸಿಗುತ್ತಿದೆ.

ಮಗನ ಆಸಕ್ತಿಗೆ ತಂದೆ, ತಾಯಿ ಮತ್ತು ಸಹೋದರನ ಪ್ರೋತ್ಸಾಹ ನೀರೆರೆದಿದೆ. ಸ್ನೇಹಿತರ ಸಹಾಯದಿಂದ ಸಿನೆಮಾದಲ್ಲಿ ಅವಕಾಶ ದೊರಕುವಂತಾಯಿತು ಎಂದು ಹರ್ಷಿತ್‌ ಹೇಳುತ್ತಾರೆ. ತನ್ನಲ್ಲಿರುವ ಪ್ರತಿಭೆ, ಆಸಕ್ತಿ ಹಾಗೂ ನಿರಂತರ ಪ್ರಯತ್ನದ ಫಲವಾಗಿ ಅವಕಾಶಗಳು ತೆರೆದುಕೊಳ್ಳುವ ಸಮಯ ಸಮೀಪಿಸುತ್ತದೆ. ಯಾರು ಸತತವಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೋ, ಅವರಿಗೆ ದಾರಿ ತಾನಾಗಿ ತೆರೆದುಕೊಳ್ಳುತ್ತದೆ. ಕೈ ಕಟ್ಟಿ ಕೂರದೆ ಆತ್ಮ ವಿಶ್ವಾಸದಿಂದ ಮುನ್ನುಗ್ಗುವ ಧೈರ್ಯ ಮಾಡಿದ ಹರ್ಷಿತ್‌, ಸ್ಯಾಂಡಲ್‌ವುಡ್‌ನ‌ಲ್ಲಿ ಮಿಂಚಲು ಸಿದ್ಧರಾಗಿದ್ದಾರೆ.

ನಗುಮೊಗದ ಸರದಾರ
ಮೊದಲ ಪ್ರಯತ್ನದಲ್ಲಿಯೇ ಬದುಕನ್ನು ಗೆಲ್ಲಲು ಸಾಧ್ಯವಿಲ್ಲ. ಆದರೆ ಪ್ರಯತ್ನದಿಂದ ಸೋತರೂ ಅದರೊಳಗಿನ ಅನುಭವ ಜೀವನದ ನೈಜತೆಯನ್ನು ಅರ್ಥಮಾಡಿಸುತ್ತದೆ. ಛಲದಿಂದ ಮುನ್ನುಗ್ಗಿದರೆ ಯಾವ ಕಷ್ಟವಾದರೂ ಸರಿಯೇ ದೂರ ಸರಿಯಲೇ ಬೇಕು. ಪ್ರಯತ್ನದಲ್ಲಿ ನಂಬಿಕೆ, ಶ್ರದ್ಧೆ ಇದ್ದರೆ ಪ್ರತಿಯೊಂದು ಹಂತದಲ್ಲಿಯೂ ಗುರಿ ಸೇರುವ ಮೆಟ್ಟಿಲುಗಳು ಕಾಣಿಸುತ್ತವೆ. ತಾನು ಕಂಡ ಕನಸಿಗೆ ಬಣ್ಣದ ರಂಗೋಲಿ ಬಿಡಲು ಚಂದನವನಕ್ಕೆ ಕಾಲಿಟ್ಟ ಹರ್ಷಿತ್‌ ಎಲ್ಲರ ಮನ ಗೆಲ್ಲಲಿ ಹಾಗೂ ಇನ್ನಷ್ಟು ಅವಕಾಶಗಳು ಅವರನ್ನು ಹುಡುಕಿ ಬರುವಂತಾಗಲಿ ಎಂಬುದು ಅವರ ಸ್ನೇಹಿತರ ಹಾರೈಕೆ.

ಭವಿತಾ ಕಣಲ್‌

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Uppinangady ಬೆಂಕಿ ಅವಘಡ: ಭಾರೀ ನಷ್ಟ

Uppinangady ಮನೆಗೆ ಆಕಸ್ಮಿಕ ಬೆಂಕಿ: ಭಾರೀ ನಷ್ಟ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.