ಕುಖ್ಯಾತ ರೌಡಿ ಅಸ್ಗರ್ ಅಲಿ ಬಂಧನ

3 ಕೊಲೆ ಪ್ರಕರಣಗಳ ಆರೋಪಿ, ಭೂಗತ ಪಾತಕಿ

Team Udayavani, Jun 16, 2019, 10:17 AM IST

asgar-ali

ಮಂಗಳೂರು: ಮೂರು ಕೊಲೆ ಪ್ರಕರಣಗಳ ಆರೋಪಿ, 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಭೂಗತ ಪಾತಕಿ ಉಳ್ಳಾಲ ನಿವಾಸಿ ಅಸ್ಗರ್ ಆಲಿ (42) ಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಅಸ್ಗರ್ ನಿಗೆ ನಕಲಿ ಪಾರ್ಸ್‌ಪೋರ್ಟ್‌ ನೀಡಿ ಸಹಕರಿಸಿದ ನವಾಝ್ ಮತ್ತು ರಶೀದ್‌ ಅವರನ್ನು ಕೂಡ ಬಂಧಿಸಲಾಗಿದೆ.

ಅಸ್ಗರ್ ಆಲಿ ಮೇಲೆ ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ 3 ಕೊಲೆ ಪ್ರಕರಣ ಸಹಿತ ಕೊಲೆ ಬೆದರಿಕೆ, ಸುಲಿಗೆ, ದರೋಡೆ ಸಹಿತ 9 ಪ್ರಕರಣಗಳಿವೆ. ಆರೋಪಿ 2007ರಲ್ಲಿ ನಕಲಿ ಪಾಸ್‌ಪೋರ್ಟ್‌ ಬಳಸಿ ದುಬಾೖಗೆ ಪರಾರಿಯಾಗಿದ್ದ.

ಅಸ್ಗರ್ ಆಲಿ ದುಬಾೖಯಿಂದ ಕಳೆದ ಮಾರ್ಚ್‌ನಲ್ಲಿ ಮುಂಬಯಿಗೆ ಬಂದ ಬಳಿಕ ಉಪ್ಪಳದಲ್ಲಿ ತಲೆಮರೆಸಿದ್ದ. ಈ ಬಗ್ಗೆ ಖಚಿತ ಮಾಹಿತಿ ನಗರ ಪೊಲೀಸರಿಗೆ ದೊರೆತಿದ್ದು, ಕಂಕನಾಡಿ ಠಾಣೆಯ ಪೊಲೀಸ್‌ ಇನ್ಸ್‌ಪೆಕ್ಟರ್‌ ಜಗದೀಶ್‌ ಮತ್ತು ಸಿಸಿಆರ್‌ಬಿ ಇನ್ಸ್‌ಪೆಕ್ಟರ್‌ ಶ್ಯಾಮಸುಂದರ್‌ ಒಳಗೊಂಡ ವಿಶೇಷ ತಂಡ ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಮೂರನೇ ಕೊಲೆ ಪ್ರಕರಣ
ಟಾರ್ಗೆಟ್‌ ಇಲ್ಯಾಸ್‌, ಅನಂತು ಕೊಲೆ ಪ್ರಕರಣದ ಆರೋಪಿ ಅಸ್ಗರ್ ಆಲಿ ಮೇಲೆ ಉಳ್ಳಾಲ ಯುವತಿ ಶಕಿನಾ ಕೊಲೆ ಪ್ರಕರಣದ ಆರೋಪವೂ ಇದೆ. ಯುವತಿಯ ಬಗ್ಗೆ ಉಳ್ಳಾಲ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಆದರೆ ಪಾತಕಿ ಮಾಡೂರು ಇಸುಬು ಬಂಧನ ವೇಳೆ ಯುವತಿ ಶಕಿನಾ ಕೊಲೆಯಾಗಿರುವ ಬಗ್ಗೆ ಮತ್ತು ಇದರಲ್ಲಿ ಅಸ್ಗರ್ ಆಲಿ ಶಾಮೀಲಾಗಿರುವ ಬಗ್ಗೆ ಬಾಯ್ಬಿಟ್ಟಿದ್ದ. ಹಾಗಾಗಿ ನಗರದಲ್ಲಿ ಅಸ್ಗರ್ ಮೇಲೆ 3 ಕೊಲೆ ಪ್ರಕರಣಗಳಿವೆ.

ಪಾಸ್‌ಪೋರ್ಟ್‌ನಲ್ಲಿ ಅಶ್ರಫ್‌ ಆಲಿ
ಈತ ನಕಲಿ ಪಾಸ್‌ಪೋರ್ಟ್‌ ಹೊಂದಿದ್ದು, ಅಶ್ರಫ್‌ ಆಲಿ ಎಂದು ಹೆಸರು ಕೊಟ್ಟಿದ್ದ. ಇದಕ್ಕೆ ನವಾಝ್ ಮತ್ತು ರಶೀದ್‌ ಸಹಕಾರ ನೀಡಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ಕೂಡ ಬಂಧಿಸಲಾಗಿದೆ. ಅವರಿಂದ ಸುಮಾರು 35 ಪಾಸ್‌ಪೋರ್ಟ್‌ ಗಳನ್ನು ವಶಪಡಿಸಿ ಕೊಳ್ಳಲಾಗಿದ್ದು, ಈ ಬಗ್ಗೆ ತನಿಖೆ ನಡೆಸಿ ಅಸಲಿಯೆಷ್ಟು, ನಕಲಿಯೆಷ್ಟು ಎಂದು ಪತ್ತೆಹಚ್ಚಲಾಗುವುದು. ನಕಲಿ ಪಾಸ್‌ಪೋರ್ಟ್‌ ಜಾಲದ ಹಿಂದೆ ಇನ್ನಷ್ಟು ಮಂದಿ ಶಾಮೀಲಾಗಿರುವ ಸಾಧ್ಯತೆಯಿದ್ದು, ಅವರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದುಬಾೖಯಲ್ಲಿದ್ದು ಟಾರ್ಗೆಟ್‌
ಮಾಡೂರು ಇಸುಬು, ರಶೀದ್‌ ಮಲಬಾರಿಯ ನಿಕಟವರ್ತಿಯಾಗಿರುವ ಅಸYರ್‌ ಆಲಿ ಮತ್ತು ಟಾರ್ಗೆಟ್‌ ಗ್ಯಾಂಗ್‌ನ ಇಲ್ಯಾಸ್‌ ಮಧ್ಯೆ ವೈಮನಸ್ಸಿದ್ದು, ಇಲ್ಯಾಸ್‌ ಕೊಲೆಗೆ ದುಬಾೖಯಲ್ಲಿದ್ದೇ ಸ್ಕೆಚ್‌ ಹಾಕಿ ಸುಪಾರಿ ನೀಡಿದ್ದ. ಇಲ್ಯಾಸ್‌ ಕೊಲೆಯಾದ ಬಳಿಕ ಪ್ರಕರಣದ ಆರೋಪಿಗಳನ್ನು ಮುಂಬಯಿಗೆ ಕರೆಸಿ ಔತಣ ಕೂಟವನ್ನೂ ಏರ್ಪಡಿಸಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ. ದುಬಾೖಯಲ್ಲಿ ದಾವೂದ್‌ ಮತ್ತು ಇತರರ ಜತೆಗಿದ್ದು, ಕೊಲೆ ಸಂಚು ರೂಪಿಸುತ್ತಿದ್ದ. ಕೊಲೆ ಆರೋಪಿಗಳಿಗೆ ಮುಂಬಯಿಯಲ್ಲಿ ಅಡಗುದಾಣ ವ್ಯವಸ್ಥೆ ಮಾಡುತ್ತಿದ್ದ. ಅಲ್ಲದೆ ಹಫ್ತಾ ಹಣಕ್ಕಾಗಿ ಪೀಡಿಸುತ್ತಿದ್ದ ಎನ್ನಲಾಗಿದೆ. ಬೆಂಗಳೂರು ನಗರದಲ್ಲಿ ನಡೆದ ಶೂಟೌಟ್‌ ಪ್ರಕರಣವೊಂದರಲ್ಲಿಯೂ ಭಾಗಿಯಾದ ಆರೋಪ ಇವನ ಮೇಲಿದೆ.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.