4.33 ಲಕ್ಷ ರೂ. ಮೌಲ್ಯದ ಮಾದಕ ದ್ರವ್ಯ ವಶ; ಮಹಿಳೆ ಅರೆಸ್ಟ್
Team Udayavani, Jun 19, 2019, 11:44 AM IST
ಥಾಣೆ : ಭೂಗತ ಮಾದಕ ದ್ರವ್ಯ ಮಾರುಕಟ್ಟೆಯಲ್ಲಿ ಮಿಯಾಂವ್ ಮಿಯಾಂವ್ ಮತ್ತು ಎಮ್ ಡಿ ಎಂದು ಕರೆಯಲ್ಪಡುವ ಉತ್ತೇಜಕ ಮಾದಕ ದ್ರವ್ಯ ಮೆಫೆಡ್ರೋನ್ ಹೊಂದಿದ 28ರ ಹರೆಯದ ಮಹಿಳೆಯನ್ನು ಪೊಲೀಸರು ಬಂಧಿಸಿ ಆಕೆಯಿಂದ 4.33 ಲಕ್ಷ ರೂ. ಮೌಲ್ಯದ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಪೊಲೀಸರು ಮುಂಬ್ರಾ ಪಟ್ಟಣದಲ್ಲಿನ ಮನೆಯೊಂದರ ಮೇಲೆ ದಾಳಿ ನಡೆಸಿ ಸಯೀದಾ ಶೇಖ್ ಎಂಬ ಮಹಿಳೆಯನ್ನು ಬಂಧಿಸಿ ಆಕೆಯ ಬಳಿ ಇದ್ದ 197 ಗ್ರಾಂ ಮಾದಕ ದ್ರವ್ಯವನ್ನು ವಶಪಡಿಸಿಕೊಳ್ಳಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿ ಮಧುಕರ್ ಕಾದ್ ತಿಳಿಸಿದ್ದಾರೆ.