ವಂಚಕ ನೀರವ್ ಮೋದಿಗೆ ಸೇರಿದ 4 ಸ್ವಿಸ್ ಖಾತೆ ಮುಟ್ಟುಗೋಲು
Team Udayavani, Jun 27, 2019, 12:56 PM IST
ಹೊಸದಿಲ್ಲಿ: ಪಂಜಾಬ್ ನ್ಯಾಶನಲ್ ಬ್ಯಾಂಕಿಗೆ 13,500 ಕೋಟಿ ರೂ. ವಂಚನೆಗೈದು, ವಿದೇಶಕ್ಕೆ ಪಲಾಯನ ಗೈದಿರುವ ಘೋಷಿತ ಆರ್ಥಿಕ ಅಪರಾಧಿ ನೀರವ್ ಮೋದಿಗೆ ಸೇರಿರುವ ನಾಲ್ಕು ಸ್ವಿಸ್ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಲಾಗಿದೆ.
ಜಾರಿ ನಿರ್ದೇಶನಾಲಯದ ಮನವಿಯ ಮೇರೆಗೆ ನೀರವ್ಗೆ ಸೇರಿದ 2 ಮತ್ತು ಸಹೋದರಿ ಪೂರ್ವಿಗೆ ಸೇರಿದ 2 ಖಾತೆಗಳನ್ನು ಸ್ವಿಟ್ಝರ್ಲ್ಯಾಂಡ್ ಸರಕಾರ ಜಪ್ತಿ ಮಾಡಿದೆ ಎಂದು ತಿಳಿದು ಬಂದಿದೆ.
ಮುಟ್ಟುಗೋಲು ಹಾಕಲಾಗಿರುವ 4 ಖಾತೆಗಳ ಮೌಲ್ಯ 283.16 ಕೋಟಿ ರೂಪಾಯಿ ಎಂದು ತಿಳಿದು ಬಂದಿದೆ.
ಬಿಲಿಯಾಧಿಪತಿ ವಜ್ರಾಭರಣ ಉದ್ಯಮಿಯಾಗಿರುವ ನೀರವ್ ಪ್ರಕೃತ ಲಂಡನ್ನಿಂದ ಭಾರತಕ್ಕೆ ಗಡೀಪಾರಾಗುವ ಹಂತದಲ್ಲಿದ್ದಾರೆ.