ಮಂಗಳೂರು : ರನ್ ವೇಯಿಂದ ಜಾರಿದ ವಿಮಾನ, ತಪ್ಪಿದ ಅನಾಹುತ
Team Udayavani, Jun 30, 2019, 8:10 PM IST
ಮಂಗಳೂರು: ದುಬೈ ಯಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ಏಕ್ಸ್ ಪ್ರೆಸ್ ವಿಮಾನವು ಲ್ಯಾಂಡಿಂಗ್ ವೇಳೆ ರನ್ ವೇಯಿಂದ ಜಾರಿದ ಘಟನೆ ರವಿವಾರ ಸಂಜೆ ಸಂಭವಿಸಿದೆ.
ಘಟನೆಯಲ್ಲಿ ಯಾವುದೇ ರೀತಿಯ ಅನಾಹುತ ಸಂಭವಿಸದೇ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಜೆ ಸುಮಾರು 5.30ರ ಸಮಯಕ್ಕೆ ದುಬೈ ನಿಂದ ಏರ್ ಇಂಡಿಯಾ ಏಕ್ಸ್ ಪ್ರೆಸ್ ವಿಮಾನ ಲ್ಯಾಂಡಿಂಗ್ ಆಗುತ್ತಿದ್ದಂತೆ ರನ್ ವೇ ಯಿಂದ ಜಾರಿ ಮುಂದುವರಿದಿದೆ ನಂತರ ಚಕ್ರ ಮಣ್ಣಿನಲ್ಲಿ ಸಿಲುಕಿಕೊಂಡ ಪರಿಣಾಮ ವಿಮಾನ ನಿಂತಿದೆ.
ವಿಮಾನದಿಂದ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ.