ಅಂತರ್ಜಾಲ ಶೋನಲ್ಲಿ ಯುವರಾಜ್ ಸಿಂಗ್
Team Udayavani, Jul 1, 2019, 10:08 AM IST
ಚಂಡೀಗಢ: ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಇತ್ತೀಚೆಗೆ ನಿವೃತ್ತಿಯಾಗಿರುವ ಯುವರಾಜ್ ಸಿಂಗ್ ಇನ್ನು ಮುಂದೆ ದೇಶಿ ಟಿ20 ಲೀಗ್ಗಳಲ್ಲಿ ಮಾತ್ರ ಆಡುವ ತೀರ್ಮಾನಕ್ಕೆ ಬಂದಿದ್ದಾರೆ.
ಇದರ ಜತೆಗೆ ಬಿಡುವಿನ ವೇಳೆ ಯುವಿ ಹೊಸತೊಂದು ಕೆಲಸ ಶುರು ಮಾಡಿಕೊಂಡಿದ್ದಾರೆ. ಹಾಟ್ಸ್ಟಾರ್ ಅಂತರ್ಜಾಲ ತಾಣದಲ್ಲಿ “ದಿ ಆಫೀಸ್’ ಎಂಬ ಸರಣಿ ನಡೆಸಿಕೊಡಲಿದ್ದಾರೆ. ಇದೊಂದು ವಿಶೇಷ ಅನುಭವ ಎಂದು ಯುವರಾಜ್ ಹೇಳಿಕೊಂಡಿದ್ದಾರೆ.