ಗಂಟಲು-ಚಪ್ಪೇ ರೋಗದ ಆತಂಕ

•ಜಾನುವಾರುಗಳಿಗೆ ಸಾಂಕ್ರಾಮಿಕ ರೋಗ ಭೀತಿ•ಪಶುವೈದ್ಯರಿಗೆ ರೈತಾಪಿ ಜನರ ಮೊರೆ

Team Udayavani, Jul 2, 2019, 1:24 PM IST

hubali-tdy-4..

ರೋಗ ಬಾಧಿತ ಹಸುವಿನ ಗೊರಸು (ಸಂಗ್ರಹ ಚಿತ್ರ)

ಧಾರವಾಡ: ಜಿಲ್ಲೆಯಲ್ಲಿ ಡೆಂಘೀ, ಚಿಕೂನ್‌ಗುನ್ಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ಆತಂಕ ಹೆಚ್ಚಾಗಿರುವ ಮಳೆಗಾಲದ ಸಮಯದಲ್ಲಿ ರೈತಾಪಿ ವರ್ಗದ ಜೀವನಾಡಿ ಜಾನುವಾರುಗಳಿಗೂ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ.

ಜಿಲ್ಲೆಯ ಅಲ್ಲಲ್ಲಿ ಗಳನೆ (ಗಂಟಲು) ಬೇನೆ, ಚಪ್ಪೇ ಬೇನೆ ಹಾಗೂ ಕಾಲುಬೇನೆ ರೋಗಗಳ ಲಕ್ಷಣ ಕಂಡುಬಂದಿದ್ದು, ಒಂದಿಷ್ಟು ಪ್ರಕರಣಗಳಲ್ಲಿ ಜಾನುವಾರುಗಳು ಮೃತಪಟ್ಟಿರುವ ಬಗ್ಗೆಯೂ ವರದಿಯಾಗುತ್ತಿವೆ. ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿಯಲ್ಲಿ ಎರಡು ದಿನದ ಹಿಂದೆಯಷ್ಟೇ ಹಸುವಿನ ಕರುವೊಂದು ಚಪ್ಪೇ ರೋಗಕ್ಕೆ ಬಲಿ ಆಗಿದ್ದರೆ, ಎತ್ತೂಂದು ಗಂಟಲು ಬೇನೆ ರೋಗಕ್ಕೆ ಮೃತಪಟ್ಟಿದೆ. ಅದರಂತೆ ತಾಲೂಕಿನ ವಿವಿಧ ಗ್ರಾಮದಲ್ಲಿ ರೋಗದ ಲಕ್ಷಣಗಳು ಕಂಡು ಬಂದಿದ್ದು, ಚಿಕಿತ್ಸೆಗಾಗಿ ರೈತರು ಪಶು ವೈದ್ಯರಿಗೆ ಮೊರೆ ಇಡುತ್ತಿದ್ದಾರೆ.

ಆದರೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಗೆ ಮಾತ್ರ ಈ ಬಗ್ಗೆ ಮಾಹಿತಿ ಇಲ್ಲ. ಹಿಂದಿನ ವರ್ಷಗಳಲ್ಲಿ ಹಾಗೂ ಈ ವರ್ಷದಲ್ಲಿ ಇಂತಹ ರೋಗಗಳಿಗೆ ಬಲಿಯಾದ ಜಾನುವಾರುಗಳ ಮಾಹಿತಿ ಇಲಾಖೆಯ ಜಿಲ್ಲಾ ಉಪನಿರ್ದೇಶಕರ ಬಳಿಯೇ ಇಲ್ಲ.

ರೋಗ ಲಕ್ಷಣಗಳೇನು?:
ಚಪ್ಪೇ ರೋಗದ ಬ್ಯಾಕ್ಟೀರಿಯಾ ಜಾನುವಾರು ಸೇವಿಸುವ ಆಹಾರ ಮೂಲಕ ಹರಡಿದರೆ, ಗಂಟಲು ಬೇನೆ ಹಾಗೂ ಕಾಲುಬೇನೆ ರೋಗದ ಬ್ಯಾಕ್ಟೀರಿಯಾಗಳು ಗಾಳಿ ಮೂಲಕವೇ ಹರಡುತ್ತವೆ. ಗಂಟಲು ಬೇನೆಗೆ ಒಳಗಾಗುವ ಜಾನುವಾರಿಗೆ ಜ್ವರ, ಬಾಯಲ್ಲಿ ಜೊಲ್ಲು ಸೋರುವ ಲಕ್ಷಣಗಳು ಕಂಡು ಬರುತ್ತವೆ. ಇನ್ನೂ ಚಪ್ಪೇ ಬೇನೆ ರೋಗಕ್ಕೂ ಜ್ವರದೊಂದಿಗೆ ಜಾನುವಾರುಗಳ ಕಾಲುಗಳು ಶಕ್ತಿ ಕಳೆದುಕೊಳ್ಳುತ್ತವೆ. ಈ ಎರಡೂ ರೋಗಗಳಿಂದ ಆಹಾರ ತಿನ್ನಲಾಗದ ಸ್ಥಿತಿಗೆ ಬರುವ ಜಾನುವಾರುಗಳಿಗೆ ನಿಗದಿತ ಸಮಯಕ್ಕೆ ಚಿಕಿತ್ಸೆ ದೊರೆಯದೇ ಹೋದರೆ ಸಾವು ಕಟ್ಟಿಟ್ಟ ಬುತ್ತಿ.
‘ಚಪ್ಪೇ’ ಸಾವಿನ ಪ್ರಮಾಣ ಹೆಚ್ಚು:

ಕಾಲುಬೇನೆ ರೋಗದಿಂದ ಜಾನುವಾರು ಮೃತಪಡುವ ಪ್ರಮಾಣ ಕಡಿಮೆ ಇದ್ದರೂ ನರಳಾಟ ಜಾಸ್ತಿ. ಗಂಟಲು ಬೇನೆಯಿಂದಲೂ ಸಾವಿನ ಪ್ರಮಾಣ ಕಡಿಮೆ ಇದೆ. ಆದರೆ ಚಪ್ಪೇ ರೋಗದಿಂದ ಸಾವಿನ ಪ್ರಮಾಣ ಹೆಚ್ಚು. ರೋಗ ಲಕ್ಷಣಕ್ಕೂ ಮುನ್ನ ಲಸಿಕೆ ಹಾಗೂ ರೋಗ ಕಂಡುಬಂದ ತಕ್ಷಣವೇ ಚಿಕಿತ್ಸೆ ಕೊಡಿಸದಿದ್ದರೆ ಜಾನುವಾರುಗಳನ್ನು ರಕ್ಷಿಸಲು ಸಾಧ್ಯವೇ ಇಲ್ಲ ಎಂದು ಹೇಳುತ್ತಾರೆ ಪಶು ವೈದ್ಯಾಧಿಕಾರಿ ಡಾ| ಬಿ.ಎಸ್‌. ಲಿಂಗರಾಜು.
ಹೊರಗಡೆಯಿಂದ ಔಷಧಿ:
ಮುಂಜಾಗೃತಾ ಕ್ರಮವಾಗಿ ವರ್ಷದಲ್ಲಿ 2-3 ಸಲ ಉಚಿತವಾಗಿ ಲಸಿಕೆ ಹಾಕುವ ಕಾರ್ಯ ಇಲಾಖೆಯಿಂದ ನಡೆಯುತ್ತಾ ಬಂದಿದೆ. ಆದರೆ ರೋಗಗಳಿಗೆ ತುತ್ತಾಗುವ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ಲಭ್ಯ ಆಗುತ್ತಿಲ್ಲ. ರೋಗಕ್ಕೆ ತುತ್ತಾದ ಜಾನುವಾರುಗಳನ್ನು ಆಸ್ಪತ್ರೆಗೆ ಸಾಗಿಸುವುದೇ ಕಷ್ಟ. ಆಸ್ಪತ್ರೆಗೆ ಹೋದರೂ ನಿಗದಿತ ಸಮಯಕ್ಕೆ ವೈದ್ಯಾಧಿಕಾರಿಗಳೇ ಇರಲ್ಲ. ಒಂದು ವೇಳೆ ಇದ್ದರೂ ಚಿಕಿತ್ಸೆ ಕೊಡಲು ಸಿದ್ಧರಿದ್ದರೂ ಆಸ್ಪತ್ರೆಯಲ್ಲಿ ಔಷಧಿ ಇಲ್ಲ. ಹೀಗಾಗಿ ಹೊರಗಡೆ ಹೋಗಿ ಔಷಧಿ ತರುವಂತೆ ಚೀಟಿ ಬರೆದು ಕೊಡುತ್ತಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಹುದ್ದೆಗಳು ಖಾಲಿ ಖಾಲಿ:

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ಜಿಲ್ಲೆಗೆ 448 ಹುದ್ದೆ ಮಂಜೂರಾತಿ ಇದ್ದು, 228 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಉಳಿದ 160 ಹುದ್ದೆಗಳು ನಾಲ್ಕೈದು ವರ್ಷಗಳಿಂದ ಖಾಲಿ ಇವೆ. 78 ಪಶು ವೈದ್ಯಾಧಿಕಾರಿಗಳ ಮಂಜೂರಾತಿ ಇದ್ದರೂ ಇನ್ನೂ 22 ಹುದ್ದೆಗಳು ಭರ್ತಿಯಾಗಿಲ್ಲ. ಧಾರವಾಡ 1, ಹುಬ್ಬಳ್ಳಿ 1, ಕಲಘಟಗಿ 3, ನವಲಗುಂದ 8 ಹಾಗೂ ಕುಂದಗೋಳದಲ್ಲಿ 9 ಪಶು ವೈದ್ಯಾಧಿಕಾರಿಗಳ ಕೊರತೆ ಇದೆ. ಡಿ ದರ್ಜೆ ಹುದ್ದೆಗಳು 97 ಖಾಲಿ ಇವೆ.
ಕಾರ್ಯಾರಂಭ ಮಾಡದ ಸಂಚಾರಿ ಚಿಕಿತ್ಸಾಲಯಗಳು:

ಜಿಲ್ಲೆಯಲ್ಲಿ ಧಾರವಾಡ ನಗರದಲ್ಲಿ ಮಾತ್ರವೇ ಪಾಲಿ ಕ್ಲಿನಿಕ್‌ ಕೇಂದ್ರ ಇದ್ದು, ಈ ಕೇಂದ್ರದ ಉಪನಿರ್ದೇಶಕ ಹುದ್ದೆ ಸಹ ಖಾಲಿ ಇದೆ. ನವಲಗುಂದ ತಾಲೂಕು ಹೊರತುಪಡಿಸಿ ಪ್ರತಿ ತಾಲೂಕಿನ ಎರಡು ಹೋಬಳಿ ಮಟ್ಟದಲ್ಲಿ ಪಶುಆಸ್ಪತ್ರೆ ಸೇರಿ ಒಟ್ಟು 11 ಪಶು ಆಸ್ಪತ್ರೆಗಳು ಇವೆ. 53 ಪಶು ಚಿಕಿತ್ಸಾಲಯ, 42 ಪ್ರಾಥಮಿಕ ಪಶುಚಿಕಿತ್ಸಾಲಯ ಇದ್ದು, ಇವುಗಳಲ್ಲಿ ಮೂಲಸೌಕರ್ಯ ಹಾಗೂ ವೈದ್ಯಾಧಿಕಾರಿಗಳ ಕೊರತೆ ಎದ್ದು ಕಾಣುತ್ತಿದೆ. ಸಂಚಾರಿ ಪಶುಚಿಕಿತ್ಸಾಲಯಗಳ ಪೈಕಿ 3 ಮಾತ್ರವೇ ಕಾರ್ಯಾರಂಭ ಮಾಡಿವೆ. ಕುಂದಗೋಳ ಹಾಗೂ ನವಲಗುಂದದಲ್ಲಿ ಸಂಚಾರಿ ಪಶು ಚಿಕಿತ್ಸಾಲಯಗಳು ಕಾರ್ಯಾರಂಭವನ್ನೇ ಮಾಡಿಲ್ಲ.

ಇಲಾಖೆಯ ರೋಗ ಅಧ್ಯಯನ ಶಾಖೆ ನೀಡಿರುವ ವರದಿಯಂತೆ ಜಿಲ್ಲೆಯ ಸಾಂಕ್ರಾಮಿಕ ರೋಗ ಕಂಡುಬರುವ ಪ್ರದೇಶದಲ್ಲಿ ಮುಂಜಾಗೃತಾ ಕ್ರಮವಾಗಿ ಲಸಿಕೆ ಹಾಕಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಜಿಲ್ಲೆಯಲ್ಲಿ ಕೊರತೆ ಇರುವ ಪಶು ವೈದ್ಯಾಧಿಕಾರಿಗಳ ನೇಮಕಕ್ಕಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.•ಪರಮೇಶ್ವರ ನಾಯಕ, ಉಪನಿರ್ದೇಶಕ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ

•ಶಶಿಧರ್‌ ಬುದ್ನಿ

ಟಾಪ್ ನ್ಯೂಸ್

16

Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್‌ ಮೈಂಡ್; ಗೋಲ್ಡಿ ಬ್ರಾರ್‌ ಶೂಟೌಟ್ – ವರದಿ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ

Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ

15-1

ಖಡಕ್ ಬಿಸಿಲು- ಪೊಲೀಸ್ ತಳ್ಳಾಟದಿಂದ ಸಂಸದ ಡಾ.‌ಜಾಧವ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು

14-bidar

Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್‌ಐಆರ್‌ ಹಾಕಲಿಲ್ಲವೇ?’

“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್‌ಐಆರ್‌ ಹಾಕಲಿಲ್ಲವೇ?’

H. D. Kumaraswamy ನನ್ನ ಬಳಿ ಇರುವುದು ಡಿಕೆಶಿ ಭ್ರಷ್ಟಾಚಾರದ ಮಾಹಿತಿ

H. D. Kumaraswamy ನನ್ನ ಬಳಿ ಇರುವುದು ಡಿಕೆಶಿ ಭ್ರಷ್ಟಾಚಾರದ ಮಾಹಿತಿ

ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್

ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್

hdk

Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

16

Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್‌ ಮೈಂಡ್; ಗೋಲ್ಡಿ ಬ್ರಾರ್‌ ಶೂಟೌಟ್ – ವರದಿ

Gangolli: ಸ್ವಯಂ ಪ್ರೇರಣೆಯಿಂದ ಚಿತ್ರ ಕಲಾವಿದೆಯಾದ ತುಳಸಿ

Gangolli: ಸ್ವಯಂ ಪ್ರೇರಣೆಯಿಂದ ಚಿತ್ರ ಕಲಾವಿದೆಯಾದ ತುಳಸಿ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

ಗುಲ್ವಾಡಿ: ಗುಜಿರಿ ಅಂಗಡಿಯಲ್ಲಿ ಅರಳಿದ ಗ್ರಂಥಾಲಯ-ತರಂಗ ವಾರಪತ್ರಿಕೆ ಪ್ರೇರಣೆ

ಗುಲ್ವಾಡಿ: ಗುಜಿರಿ ಅಂಗಡಿಯಲ್ಲಿ ಅರಳಿದ ಗ್ರಂಥಾಲಯ-ತರಂಗ ವಾರಪತ್ರಿಕೆ ಪ್ರೇರಣೆ

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.