ಎಡಿ ವಿರುದ್ಧ ಕ್ರಮಕ್ಕೆ ಆಗ್ರಹ

•ತಪ್ಪಿತಸ್ಥ ಅಧಿಕಾರಿ ಮುಂದಿಟ್ಟುಕೊಂಡು ತನಿಖೆ ನಡೆಸಬೇಡಿ

Team Udayavani, Jul 3, 2019, 2:42 PM IST

kopala-tdy-4..

ಕುಷ್ಟಗಿ: ಮೇವಿನ ಬೀಜದ ಹಗರಣದ ತನಿಖೆಗೆ ಆಗ್ರಹಿಸಿ ಪಶು ಪಾಲನೆ ಮತ್ತು ಪಶು ಸೇವೆ ಇಲಾಖೆ ಎದುರು ನಡೆದ ಪ್ರತಿಭಟನೆಯಲ್ಲಿ ಕಂದಕೂರಪ್ಪ ವಾಲ್ಮೀಕಿ ಮಾತನಾಡಿದರು.

ಕುಷ್ಟಗಿ: ಇಲ್ಲಿನ ಪಶು ಪಾಲನೆ ಮತ್ತು ಪಶು ಸೇವೆ ಇಲಾಖೆಯಲ್ಲಿನ 150 ಟನ್‌ ಮೇವಿನ ಬೀಜ ವಿತರಿಸದೇ ಕಾಳಸಂತೆಯಲ್ಲಿ ಮಾರಾಟದ ಹಿನ್ನೆಲೆಯಲ್ಲಿ ತಪ್ಪಿತಸ್ಥ ಪ್ರಭಾರಿ ಸಹಾಯಕ ನಿರ್ದೇಶಕ ಚನ್ನಬಸಪ್ಪ ಹಳ್ಳದ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ರೈತರು ಮಂಗಳವಾರ ಪ್ರತಿಭಟನೆ ನಡೆಸಿದರು.

ಜಿಪಂ ಕೆಡಿಪಿ ಸಭೆ ನಾಮನಿರ್ದೇಶಿತ ಸದಸ್ಯ ಕಂದಕೂರಪ್ಪ ವಾಲ್ಮೀಕಿ ನೇತೃತ್ವದಲ್ಲಿ ರೈತರು, ಇಲ್ಲಿನ ಪಶು ಪಾಲನೆ ಮತ್ತು ಪಶು ಸೇವೆ ಇಲಾಖೆಗೆ ಮುತ್ತಿಗೆ ಹಾಕಿ ಇಲಾಖೆ ಪ್ರಭಾರಿ ಸಹಾಯಕ ನಿರ್ದೇಶಕ ಚನ್ನಬಸಪ್ಪ ಹಳ್ಳದ ವಿರುದ್ಧ ಘೋಷಣೆ ಕೂಗಿದರು.

ಈ ವೇಳೆ ಮಾತನಾಡಿದ ಕಂದಕೂರಪ್ಪ ವಾಲ್ಮೀಕಿ, ಪ್ರಕರಣ ಬೆಳಕಿಗೆ ಬಂದು 17 ದಿನ ಗತಿಸಿದೆ. ಮೇವು ಬೀಜ ಯೋಜನೆ ಹಳ್ಳ ಹಿಡಿಸಿದ ಆರೋಪ ಎದುರಿಸುತ್ತಿರುವ ಪ್ರಭಾರಿ ಸಹಾಯಕ ನಿರ್ದೇಶಕ ಚನ್ನಬಸಪ್ಪ ಹಳ್ಳದ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಹಳ್ಳದ ಅವರ ಮೂಲ ಸ್ಥಾನ ಗಂಗಾವತಿ ತಾಲೂಕು ಶ್ರೀರಾಮನಗರಕ್ಕೆ ವರ್ಗಾಯಿಸಿ ತನಿಖೆ ನಡೆಸಬೇಕು. ಅದುಬಿಟ್ಟು ತಪ್ಪಿತಸ್ಥ ಅಧಿಕಾರಿಯನ್ನು ಮುಂದಿಟ್ಟುಕೊಂಡು ತನಿಖೆ ನಡೆಸಬಾರದು. ಒಂದು ವೇಳೆ ತನಿಖೆ ನಡೆಸಿದರೆ ಸಾಕ್ಷ ನಾಶ ಮಾಡುವ ಸಾಧ್ಯತೆಗಳಿವೆ. ಈ ಪ್ರಕರಣ ಮುಚ್ಚಿ ಹಾಕಿ ಏನೂ ನಡೆದಿಲ್ಲ ಎನ್ನುವಂತೆ ದಾಖಲೆ ಸೃಷ್ಟಿಸುತ್ತಿದ್ದಾರೆ. ಆಫ್ರಿಕ್‌ನ ಟಾಲ್ ಮೆಕ್ಕೆಜೋಳದ ಮೇವಿನ ಬೀಜದ ಕಿಟ್‌ಗಳ ಇನ್‌ವೈಸ್‌ಗೆ ಸಹಿ ಮಾಡದ ಉಪ ಕೇಂದ್ರದ ಮೂವರು ಅಧಿಕಾರಿಗಳ ವಿರುದ್ಧ ತಿರುಗಿ ಬಿದ್ದಿದ್ದು, ಅವರ ವಿರುದ್ಧ ಕ್ರಮಕ್ಕೆ ಷಡ್ಯಂತ್ರ ರೂಪಿಸಿರುವುದು ಗೊತ್ತಾಗಿದೆ. ಈ ಪ್ರಕರಣದಿಂದ ಸಹಿ ಮಾಡದ ಅಧಿಕಾರಿಗಳಿಗೆ ಅನ್ಯಾಯವಾಗುವ ಸಾಧ್ಯತೆಗಳಿವೆ. ಪ್ರಭಾರಿ ಸಹಾಯಕ ನಿರ್ದೇಶಕರ ಒತ್ತಾಯದ ಮೇರೆಗೆ ಬಹುತೇಕ ಅಧಿಕಾರಿಗಳು ಸಹಿ ಮಾಡಿ ಇಕ್ಕಟ್ಟಿಗೆ ಸಿಲುಕಿದ್ದು, ಪ್ರಕರಣದ ಸತ್ಯಾಸತ್ಯತೆಗೆ ಕೂಡಲೇ ಈ ಅಧಿಕಾರಿಯನ್ನು ಮೂಲ ಸ್ಥಳಕ್ಕೆ ವರ್ಗಾಯಿಸುವುದು ಸೂಕ್ತವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ಹಗರಣ ತರಲಾಗುತ್ತಿದ್ದು, ಮುಂದಿನ ಜಿಪಂ ಸಾಮಾನ್ಯ ಸಭೆಯೊಳಗೆ ನಿರ್ದೇಶಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಶಂಕ್ರಯ್ಯ ಅಬ್ಬಿಗೇರಿ ಮಾತನಾಡಿ, ಬರಗಾಲದ ಹಿನ್ನೆಲೆಯಲ್ಲಿ ರೈತರಿಗಾಗಿ ಸರ್ಕಾರ ಮೇವಿನ ಬೀಜ ಪೂರೈಸಿದರೆ, ಅದನ್ನು ರೈತರಿಗೆ ಕೊಡದೇ ಮಾರಾಟ ಮಾಡಿದ್ದಾರೆ. ಕೆಲವು ಸಂಘಟನೆ, ಆರ್‌ ಟಿಐ ಕಾರ್ಯಕರ್ತರನ್ನು ತೆಪ್ಪಗೆ ಇರುವಂತೆ ನೋಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಗುಮಗೇರಿ ಗ್ರಾಪಂ ಮಾಜಿ ಸದಸ್ಯ ಉಮೇಶ, ವೀರಭದ್ರಯ್ಯ ಸೂಡಿ, ನಾಗರಾಜ ನಾಯಕಮ ಸದ್ದಾಂ ಗುಮಗೇರಿ, ಖಾಜಾಸಾಬ್‌ ತೆಳಗಡಿಮನಿ, ಶರಣಗೌಡ ಪಾಟೀಲ, ಜಗದೀಶ ಕಂದಕೂರು, ಈರಪ್ಪ ಮಡಿವಾಳ ಇದ್ದರು.

ಟಾಪ್ ನ್ಯೂಸ್

Revanna 2

H.D. Revanna ಬಂಧನ; ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ

1-rwrrer

BJP; ತೇಜಸ್ವಿ ಸೂರ್ಯ ನವರಾತ್ರಿಯ ಮುನ್ನಾದಿನ ಮೀನು ತಿನ್ನುತ್ತಾರೆ!: ಕಂಗನಾ ಭಾಷಣ ವೈರಲ್

1-weqwqewq

Mumbai; ಚಿನ್ನ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದ ಆಫ್ಘಾನ್ ಕಾನ್ಸುಲ್ ಜನರಲ್ ರಾಜೀನಾಮೆ

Chintamani; ಮಗನಿಗೆ ಈಜು ಕಲಿಸಲು ಕೃಷಿ ಹೊಂಡಕ್ಕೆ ಇಳಿದ ತಂದೆ ಸಾವು

Chintamani; ಮಗನಿಗೆ ಈಜು ಕಲಿಸಲು ಕೃಷಿ ಹೊಂಡಕ್ಕೆ ಇಳಿದ ತಂದೆ ಸಾವು

Vitla: ಬಿಸಿಲಿನ ಎಫೆಕ್ಟ್: ಚಲಿಸುತ್ತಿದ್ದ ಬಸ್ಸಿನ ಗಾಜು ಒಡೆದು ಮೂವರಿಗೆ ಗಾಯ

Vitla: ಬಿಸಿಲಿನ ಎಫೆಕ್ಟ್: ಚಲಿಸುತ್ತಿದ್ದ ಬಸ್ಸಿನ ಗಾಜು ಒಡೆದು ಮೂವರಿಗೆ ಗಾಯ

1-qweqwqew

Congress ಪಕ್ಷವನ್ನು ಎರಡನೇ ಬಾರಿ ತೊರೆದ ಲವ್ಲಿ; ಮತ್ತೆ ಬಿಜೆಪಿ ಸೇರ್ಪಡೆ

Why Modi doesn’t talk about ladies now: Priyanka Gandhi

Davanagere; ಮೋದಿ ಯಾಕೆ ಬಲಾತ್ಕಾರಕ್ಕೊಳಗಾದ ಮಹಿಳೆಯರ ಬಗ್ಗೆ ಮಾತನಾಡಲ್ಲ: ಪ್ರಿಯಾಂಕಾ ಗಾಂಧಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಲೆ ಏರಿಕೆ ಪ್ರಧಾನಿ ಮೋದಿ ಕೊಡುಗೆ: ಶಿವರಾಜ್‌ ತಂಗಡಗಿ

ಬೆಲೆ ಏರಿಕೆ ಪ್ರಧಾನಿ ಮೋದಿ ಕೊಡುಗೆ: ಶಿವರಾಜ್‌ ತಂಗಡಗಿ

Gangavathi: ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು…

Gangavathi: ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು…

1-wqqwqw

Congress ಸರಕಾರದಿಂದ ದಲಿತರ ಮತ ಮತ್ತು ಯೋಜನೆ ದುರುಪಯೋಗ: ನಾರಾಯಣಸ್ವಾಮಿ

Koppal Lok Sabha Constituency: ಹಿಟ್ನಾಳ್‌ಗೆ ಹೊಸ ಮುಖ ಡಾ| ಕ್ಯಾವಟರ್‌ ಸವಾಲು

Koppal Lok Sabha Constituency: ಹಿಟ್ನಾಳ್‌ಗೆ ಹೊಸ ಮುಖ ಡಾ| ಕ್ಯಾವಟರ್‌ ಸವಾಲು

Koppala; ವಿದೇಶಿ ನಾಯಕರು ಮೋದಿ ಬೇಕೆಂದು ಸ್ವಾಗತ ಮಾಡಿದ್ದಾರೆ: ಎ ನಾರಾಯಣಸ್ವಾಮಿ

Koppala; ವಿದೇಶಿ ನಾಯಕರು ಮೋದಿ ಬೇಕೆಂದು ಸ್ವಾಗತ ಮಾಡಿದ್ದಾರೆ: ಎ ನಾರಾಯಣಸ್ವಾಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Revanna 2

H.D. Revanna ಬಂಧನ; ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ

1-rwrrer

BJP; ತೇಜಸ್ವಿ ಸೂರ್ಯ ನವರಾತ್ರಿಯ ಮುನ್ನಾದಿನ ಮೀನು ತಿನ್ನುತ್ತಾರೆ!: ಕಂಗನಾ ಭಾಷಣ ವೈರಲ್

1-weqwqewq

Mumbai; ಚಿನ್ನ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದ ಆಫ್ಘಾನ್ ಕಾನ್ಸುಲ್ ಜನರಲ್ ರಾಜೀನಾಮೆ

gold 2

Mumbai Airport ; 12.74 ಕೆಜಿ ಚಿನ್ನಾಭರಣ ಜಪ್ತಿ, ಐವರು ಪ್ರಯಾಣಿಕರ ಬಂಧನ

Chintamani; ಮಗನಿಗೆ ಈಜು ಕಲಿಸಲು ಕೃಷಿ ಹೊಂಡಕ್ಕೆ ಇಳಿದ ತಂದೆ ಸಾವು

Chintamani; ಮಗನಿಗೆ ಈಜು ಕಲಿಸಲು ಕೃಷಿ ಹೊಂಡಕ್ಕೆ ಇಳಿದ ತಂದೆ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.