ಬಸ್, ಆಟೋ ಪ್ರಯಾಣ ದರ ಏರಿಕೆ ಸಾಧ್ಯತೆ ?
ಡಿಸೇಲ್, ಪೆಟ್ರೋಲ್ ಮೇಲಿನ ಸುಂಕ ಹೆಚ್ಚಳ
Team Udayavani, Jul 7, 2019, 5:00 AM IST
ಮಹಾನಗರ: ಕೇಂದ್ರ ಸರಕಾರ ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಸುಂಕವನ್ನು ಏರಿಕೆ ಮಾಡಲಾಗಿದ್ದು, ಇದನ್ನೇ ಹೊಂದಿಕೊಂಡಿರುವ ಮೋಟರು ವಾಹನಗಳ ಪ್ರಯಾಣ ದರ ಏರಿಕೆಯಾಗಬಹುದೇ ಎಂಬ ಪ್ರಶ್ನೆ ಪ್ರಯಾಣಿಕರಲ್ಲಿ ಮೂಡಿದೆ.
ನಗರದಲ್ಲಿ ಶನಿವಾರ ಪೆಟ್ರೋಲ್ ಬೆಲೆಯು 2.53 ರೂ. ಹೆಚ್ಚಳವಾಗಿದ್ದು, ಡಿಸೇಲ್ ಬೆಲೆಯು 2.43 ರೂ. ಏರಿಕೆ ಕಂಡಿದೆ. ತೈಲ ದರ ಏರಿಕೆಯ ಜತೆಗೆ ವಾಹನಗಳ ಬಿಡಿ ಭಾಗಗಳ ದರ ಕೂಡ ಹೆಚ್ಚಳವಾಗಿದೆ.
ನಗರದಲ್ಲಿ ಓಡಾಡುವ ಸಿಟಿ, ಖಾಸಗಿ ಬಸ್ ಟಿಕೆಟ್ ದರ ಕೆಲವು ವರ್ಷಗಳ ಹಿಂದೆ ಡಿಸೇಲ್ ಬೆಲೆ 58 ರೂ. ಇದ್ದಾಗ ಏರಿಕೆ ಮಾಡಲಾಗಿತ್ತು. ಕಳೆದ ವರ್ಷ ಸೆಸ್ ಆಧಾರದಲ್ಲಿ ಒಂದು ರೂ. ಏರಿಕೆ ಮಾಡಲಾಗಿತ್ತು. ಈಗ ತೈಲ ಬೆಲೆ ಮತ್ತಷ್ಟು ಏರಿಕೆಯಾಗಿದೆ. ಹಾಗಂತ ಏಕಾಏಕಿ ಬಸ್ ಟಿಕೆಟ್ ದರ ಏರಿಕೆ ಮಾಡಲು ಸಾಧ್ಯವಿಲ್ಲ. ಟಿಕೆಟ್ ದರ ಏರಿಕೆ ಮಾಡಬೇಕೆಂದು ಸಿಟಿ ಬಸ್ ಮಾಲಕರ ಸಂಘದಿಂದ ಈ ಹಿಂದೆಯೇ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಈಗ ಮತ್ತೂಮ್ಮೆ ಮನವಿ ಮಾಡಲು ನಿರ್ಧರಿಸಿದ್ದು, ರಾಜ್ಯ ಸರಕಾರವು ಈ ಬಗ್ಗೆ ನೋಟಿಫಿಕೇಶನ್ ಮಾಡಿದ ಬಳಿಕವಷ್ಟೇ ದರ ಏರಿಕೆ ನಿಗದಿಯಾಗುತ್ತದೆ. ನಗರದಲ್ಲಿ ಓಡಾಡುವ ಆಟೋರಿಕ್ಷಾ ಬಾಡಿಗೆ ದರವನ್ನು ಏರಿಕೆ ಮಾಡಬೇಕು ಎಂದು ಯೂನಿಯನ್ ವತಿಯಿಂದ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
ದರ ಮತ್ತಷ್ಟು ಏರಿಕೆಯಾಗದು
ಮತ್ತೂಮ್ಮೆ ಮನವಿ
-ದಿಲ್ರಾಜ್ ಆಳ್ವ,ಅಧ್ಯಕ್ಷ , ಸಿಟಿ ಬಸ್ ಮಾಲಕರ ಸಂಘ
ಬೇಡಿಕೆ ಈಡೇರದಿದ್ದರೆ ಹೋರಾಟ