7,200 ಕೋಟಿ ನೀಡಿ: ನೀರವ್ಗೆ ಆದೇಶ
Team Udayavani, Jul 7, 2019, 5:00 AM IST
ಪುಣೆ: ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ 7,200 ಕೋಟಿ ರೂ. ನೀಡಬೇಕು ಎಂದು ಪುಣೆಯಲ್ಲಿರುವ ಸಾಲ ವಸೂಲಾತಿ ನ್ಯಾಯಾಧಿಕರಣ (ಡಿ ಆರ್ಟಿ) ಶನಿವಾರ ಲಂಡನ್ ಜೈಲಲ್ಲಿರುವ ಉದ್ಯಮಿ ನೀರವ್ ಮೋದಿ ಮತ್ತು ಆತನ ಸಂಗಡಿ ಗರಿಗೆ ಆದೇಶ ನೀಡಿದೆ.
ನ್ಯಾಯಾಧಿಕರಣದ ಹೆಚ್ಚುವರಿ ಹೊಣೆ ಹೊತ್ತಿರುವ ಪ್ರಿಸೈಡಿಂಗ್ ಆಫೀಸರ್ ದೀಪಕ್ ಠಕ್ಕರ್ ಎರಡು ಪ್ರಕರಣಗಳ ವಿಚಾರಣೆ ನಡೆಸಿ, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಪರವಾಗಿ ಆದೇಶ ನೀಡಿದ್ದಾರೆ. 7,200 ಕೋಟಿ ರೂ.ಗಳ ಜೊತೆಗೆ 2018ರ ಜೂ. 30 ರಿಂದ ಪೂರ್ವಾನ್ವಯ ವಾಗುವಂತೆ ಪ್ರತಿ ವರ್ಷ ಶೇ.14.30ರ ಬಡ್ಡಿ ದರವನ್ನೂ ಪಾವತಿ ಮಾಡಬೇಕು ಎಂದು ಠಕ್ಕರ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.