ಸರ್ಕಾರ ಈಗಲೂ ಸುಭದ್ರ: ಜೆಡಿಎಸ್‌ ಶಾಸಕರ ವಿಶ್ವಾಸ

Team Udayavani, Jul 15, 2019, 3:06 AM IST

jds logo

ದೇವನಹಳ್ಳಿ: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಸುಭದ್ರವಾಗಿದ್ದು, ಐದು ವರ್ಷ ಅಧಿಕಾರ ಪೂರ್ಣಗೊಳಿಸುತ್ತದೆ. ಬಹುಮತ ಸಾಬೀತು ಪಡಿಸುವಲ್ಲಿ ಕುಮಾರಸ್ವಾಮಿ ಯಶಸ್ಸು ಸಾಧಿಸುತ್ತಾರೆಂದು ಜೆಡಿಎಸ್‌ ಶಾಸಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಾಲೂಕಿನ ಕೋಡಗುರ್ಕಿ ಸಮೀಪದಲ್ಲಿರುವ ಪ್ರಸ್ಟೀಜ್‌ ಗಾಲ್ಫ್ಶೈರ್‌ ರೆಸಾರ್ಟ್‌ಗೆ ತೆರಳುವ ವೇಳೆ ಹಲವು ಶಾಸಕರು ಮಾಧ್ಯಮದವರೊಂದಿಗೆ ಮಾತನಾಡಿದರು.

ಸಾರ್ವಜನಿಕರ ಹಣ ಬಳಸುತ್ತಿಲ್ಲ: ರೆಸಾರ್ಟ್‌ನ ಎಲ್ಲ ಖರ್ಚನ್ನು ಸ್ವಂತ ಹಣದಲ್ಲಿ ನಿಭಾಯಸುತ್ತಿದ್ದೇವೆ. ನಮಗೆ ವ್ಯವಸಾಯ, ಉದ್ದಿಮೆ ಸೇರಿ ಸಾಕಷ್ಟು ಆದಾಯವಿದೆ. ಅದರಲ್ಲೇ ಎಲ್ಲ ಖರ್ಚುಗಳನ್ನು ಭರಿಸುತ್ತಿದ್ದೇವೆ. ಈ ಖರ್ಚನ್ನು ಭರಿಸುವ ಸಾಮರ್ಥ್ಯ ನಮಗಿದೆ. ರೆಸಾರ್ಟ್‌ನ ಒಂದು ವಿಲ್ಲಾಗೆ 30 ಸಾವಿರ ರೂ. ಇದ್ದು, 5 ಮಂದಿ ವಾಸ್ತವ್ಯ ಮಾಡಬಹುದು. ಯಾವುದೇ ಕಾರಣಕ್ಕೂ ಸಾರ್ವಜನಿಕರ ಹಣ ಬಳಸುತ್ತಿಲ್ಲ ಎಂದು ಶಾಸಕರು ತಿಳಿಸಿದರು.

ಅತೃಪ್ತರ ಮನವೊಲಿಸುತ್ತೇವೆ – ಸಾ.ರಾ.ಮಹೇಶ್‌: ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಮಾತನಾಡಿ, ರಾಜ್ಯ ರಾಜಕೀಯ ಹಲವು ತಿರುವುಗಳನ್ನು ಪಡೆಯುತ್ತಿದೆ. ಎರಡೂ ಪಕ್ಷಗಳ ನಾಯಕರು ಅತೃಪ್ತರ ಮನವೊಲಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಬಿಜೆಪಿ ಉಸ್ತುವಾರಿ ಮುರಳೀಧರ್‌ ಮತ್ತು ಈಶ್ವರಪ್ಪ ಜತೆಗಿನ ನನ್ನ ಭೇಟಿ ಆಕಸ್ಮಿಕವಾದುದು. ಇದಕ್ಕೆ ರಾಜಕೀಯ ಲೇಪನ ಬಳಿಯುವುದು ಸರಿಯಲ್ಲ. ಅಲ್ಲದೆ,ಅತೃಪ್ತ ಶಾಸಕರ ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ. ಕೆಲ ಶಾಸಕರು ಇನ್ನೂ ನಾವು ಜನತಾದಳದಲ್ಲಿಯೇ ಇದ್ದೇವೆ. ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಹೇಳಿದ್ದಾರೆ. ಎಲ್ಲರೂ ಒಟ್ಟಾಗಿ ಹೋಗುವ ಉದ್ದೇಶದಿಂದಲೇ ರೆಸಾರ್ಟ್‌ನಲ್ಲಿ ತಂಗಿದ್ದೇವೆ. ಸೋಮವಾರ ಅಧಿವೇಶನವಿದ್ದು, ಎಲ್ಲರೂ ಹಾಜರಾಗುತ್ತೇವೆ ಎಂದು ಹೇಳಿದರು.

ಸರ್ಕಾರ 5 ವರ್ಷ ಪೂರೈಸುತ್ತದೆ – ಶರವಣ: ವಿಧಾನ ಪರಿಷತ್‌ ಸದಸ್ಯ ಶರವಣ ಮಾತನಾಡಿ, ಸರ್ಕಾರ ಸುಭದ್ರವಾಗಿಯೇ ಇದೆ. ಮೈತ್ರಿ ಸರ್ಕಾರ 5 ವರ್ಷ ಪೂರ್ಣಗೊಳಿಸುತ್ತದೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬಹುಮತ ಸಾಬೀತು ಮಾಡಲಿದ್ದಾರೆ. ಎಲ್ಲವೂ ಶುಭ ಸೂಚಕವಾಗಿಯೇ ಇದೆ. ಭಗವಂತನ ಆಶೀರ್ವಾದದಿಂದ ಈ ಸರ್ಕಾರ ರಚನೆ ಆಗಿದೆ. ಸುಧಾಕರ್‌ ಸೇರಿ ಯಾರ ನಡೆಯ ಬಗ್ಗೆಯೂ ನಾನು ಈಗ ಮಾತನಾಡೋದಿಲ್ಲ. ನಿಮಗೆಲ್ಲ ಶುಭ ಸೂಚನೆ ಸಿಗುತ್ತದೆ ಎಂದು ಹೇಳಿದರು.

ಸಮಸ್ಯೆ ಬಗೆಹರಿಸುವ ಸಾಮರ್ಥ್ಯ ಸಿಎಂಗಿದೆ – ಅನ್ನದಾನಿ: ಮಳವಳ್ಳಿ ಶಾಸಕ ಅನ್ನದಾನಿ ಮಾತನಾಡಿ, ಆಯಾ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದು ಸಹಜ. ಹಿಂದೆ ಸೋನಿಯಾ ಗಾಂಧಿ, ಗುಲಾಂ ನಬೀ ಆಜಾದ್‌ ನಿರ್ಧರಿಸಿದಂತೆ ಎಚ್‌.ಡಿ.ಕುಮಾರಸ್ವಾಮಿ 5 ವರ್ಷಗಳವರೆಗೆ ಮುಖ್ಯಮಂತ್ರಿಯಾಗಿಯೇ ಇರುತ್ತಾರೆ. ಎರಡು ಪಕ್ಷಗಳು ಸೇರಿ ಮೈತ್ರಿ ಸರ್ಕಾರ ನಡೆಸುವಾಗ ಭಿನ್ನಮತ ಸರ್ವೇ ಸಾಮಾನ್ಯ. ಎಲ್ಲ ಸಮಸ್ಯೆಯನ್ನೂ ಬಗೆಹರಿಸುವ ಸಾಮರ್ಥ್ಯ ಮುಖ್ಯಮಂತ್ರಿಗಿದೆ. ಭಿನ್ನಮತೀಯರ ಎಲ್ಲ ಬೇಡಿಕೆಗಳನ್ನು ಆಲಿಸಿ, ಹಿರಿಯ ನಾಯಕರು ಕ್ರಮ ಕೈಗೊಳ್ಳುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.

ಸ್ವಾರ್ಥಕ್ಕಾಗಿ ಕೆಲವರ ರಾಜೀನಾಮೆ – ಬಾಲಕೃಷ್ಣ: ಶ್ರವಣಬೆಳಗೋಳ ಶಾಸಕ ಬಾಲಕೃಷ್ಣ ಮಾತನಾಡಿ, ಮೋಜು-ಮಸ್ತಿಗಾಗಿ ಶಾಸಕರು ರೆಸಾರ್ಟ್‌ ವಾಸ್ತವ್ಯ ಮಾಡ್ತಿಲ್ಲ. 14 ತಿಂಗಳು ಯಶಸ್ವಿಯಾಗಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ಆಡಳಿತ ನಡೆಸಿದೆ. 5 ವರ್ಷ ಆಡಳಿತ ನಡೆಸುವುದು ಖಚಿತ. ಕೆಲ ಶಾಸಕರು ಸ್ವಾರ್ಥಕ್ಕಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಡಿಕೆಶಿ, ಪರಮೇಶ್ವರ್‌ ಸೇರಿ ಅತೃಪ್ತರ ಮನವೊಲಿಸುತ್ತಾರೆ ಎಂದರು.

ಟಾಪ್ ನ್ಯೂಸ್

Housefull 5: ಕಾಮಿಡಿ ಜರ್ನಿಯ ‌ʼಹೌಸ್‌ ಫುಲ್‌ʼ ಕುಟುಂಬಕ್ಕೆ ಅಭಿಷೇಕ್‌ ಬಚ್ಚನ್ ಎಂಟ್ರಿ

Housefull 5: ಕಾಮಿಡಿ ಜರ್ನಿಯ ‌ʼಹೌಸ್‌ ಫುಲ್‌ʼ ಕುಟುಂಬಕ್ಕೆ ಅಭಿಷೇಕ್‌ ಬಚ್ಚನ್ ಎಂಟ್ರಿ

Team India’s T20 World Cup 2024 Jersey Leaked

T20 World Cup; ಹೊರಬಿತ್ತು ಭಾರತ ತಂಡದ ಜೆರ್ಸಿ ಫೋಟೊ: ಹೇಗಿದೆ ನೋಡಿ

Water Corridor: ಭಾರತಕ್ಕೆ ಅಗತ್ಯವಿದೆ ವಿಶೇಷ ವಾಟರ್‌ ಕಾರಿಡಾರ್‌!

Water Corridor: ಭಾರತಕ್ಕೆ ಅಗತ್ಯವಿದೆ ವಿಶೇಷ ವಾಟರ್‌ ಕಾರಿಡಾರ್‌!

Kangana Ranaut: ಚಿತ್ರರಂಗದಲ್ಲಿ ಅಮಿತಾಭ್ ಗೆ ಸಮಾನವಾದ ಗೌರವ ನನಗೆ ಸಿಗುತ್ತಿದೆ; ಕಂಗನಾ

Kangana Ranaut: ಚಿತ್ರರಂಗದಲ್ಲಿ ಅಮಿತಾಭ್ ಗೆ ಸಮಾನವಾದ ಗೌರವ ನನಗೆ ಸಿಗುತ್ತಿದೆ; ಕಂಗನಾ

Farooq Abdullah

ಪಾಕಿಸ್ತಾನದವರೇನು ಬಳೆ ಧರಿಸಿ ಕುಳಿತಿಲ್ಲ..; ವಿವಾದಾತ್ಮಕ ಹೇಳಿಕೆ ನೀಡಿದ ಫಾರೂಕ್ ಅಬ್ದುಲ್ಲಾ

Threat: ಅಹ್ಮದಾಬಾದ್ ನ ಹಲವು ಶಾಲೆಗಳಿಗೆ ಇಮೇಲ್‌ ಮೂಲಕ ಬಾಂಬ್ ಬೆದರಿಕೆ…

Threat: ಅಹ್ಮದಾಬಾದ್ ನ ಹಲವು ಶಾಲೆಗಳಿಗೆ ಇಮೇಲ್‌ ಮೂಲಕ ಬಾಂಬ್ ಬೆದರಿಕೆ…

Congress, ಬಿಜೆಡಿ ಲೂಟಿಯಿಂದ ಒಡಿಶಾ ಬಡ ರಾಜ್ಯವಾಗಿದೆ: ಪ್ರಧಾನಿ ಮೋದಿ ವಾಗ್ದಾಳಿ

Congress, ಬಿಜೆಡಿ ಲೂಟಿಯಿಂದ ಒಡಿಶಾ ಬಡ ರಾಜ್ಯವಾಗಿದೆ: ಪ್ರಧಾನಿ ಮೋದಿ ವಾಗ್ದಾಳಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BY Raghavendra: ಕಾಡಾನೆ ದಾಳಿಗೆ ಬಲಿಯಾದ ರೈತನ ಮನೆಗೆ ಸಂಸದ ಬಿ.ವೈ.ರಾಘವೇಂದ್ರ ಭೇಟಿ

BY Raghavendra: ಕಾಡಾನೆ ದಾಳಿಗೆ ಬಲಿಯಾದ ರೈತನ ಮನೆಗೆ ಸಂಸದ ಬಿ.ವೈ.ರಾಘವೇಂದ್ರ ಭೇಟಿ

LS Polls: “ಕಾಂಗ್ರೆಸ್ಸಿಗರಿಗೆ ಬಡವರೆಂದರೆ ನಾಟಕೀಯ ಪ್ರೀತಿ’: ಗಾಯತ್ರಿ ಸಿದ್ದೇಶ್ವರ್‌

LS Polls: “ಕಾಂಗ್ರೆಸ್ಸಿಗರಿಗೆ ಬಡವರೆಂದರೆ ನಾಟಕೀಯ ಪ್ರೀತಿ’: ಗಾಯತ್ರಿ ಸಿದ್ದೇಶ್ವರ್‌

Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

8 ಸಂತ್ರಸ್ತೆಯರನ್ನು ಸಂಪರ್ಕಿಸಿದ ಎಸ್‌ಐಟಿ? ಇನ್ನಷ್ಟು ಎಫ್ಐಆರ್‌ ಸಾಧ್ಯತೆ

8 ಸಂತ್ರಸ್ತೆಯರನ್ನು ಸಂಪರ್ಕಿಸಿದ ಎಸ್‌ಐಟಿ? ಇನ್ನಷ್ಟು ಎಫ್ಐಆರ್‌ ಸಾಧ್ಯತೆ

ಇಂದು ರಾತ್ರಿಯಿಂದ ರಾಜ್ಯಾದ್ಯಂತ 108 ಆ್ಯಂಬುಲೆನ್ಸ್‌ ಸೇವೆ ಸ್ಥಗಿತ

ಇಂದು ರಾತ್ರಿಯಿಂದ ರಾಜ್ಯಾದ್ಯಂತ 108 ಆ್ಯಂಬುಲೆನ್ಸ್‌ ಸೇವೆ ಸ್ಥಗಿತ

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

ಮುಗಿದ ಅಬ್ಬರ; ಎರಡು ದಿನ ಮನೆ-ಮನೆ ಸಂದಾಯ! 1992ರ ಚುನಾವಣೆ ನೆನಪಿಸಿದ ರಣತಂತ್ರ

ಮುಗಿದ ಅಬ್ಬರ; ಎರಡು ದಿನ ಮನೆ-ಮನೆ ಸಂದಾಯ! 1992ರ ಚುನಾವಣೆ ನೆನಪಿಸಿದ ರಣತಂತ್ರ

Lok Sabha Election: ಮತಗಟ್ಟೆಗಳಿಗೆ ತೆರಳಿದ ಅಧಿಕಾರಿಗಳು, ಸಿಬ್ಬಂದಿಗಳು

Lok Sabha Election: ಮತಗಟ್ಟೆಗಳಿಗೆ ತೆರಳಿದ ಅಧಿಕಾರಿಗಳು, ಸಿಬ್ಬಂದಿಗಳು

Housefull 5: ಕಾಮಿಡಿ ಜರ್ನಿಯ ‌ʼಹೌಸ್‌ ಫುಲ್‌ʼ ಕುಟುಂಬಕ್ಕೆ ಅಭಿಷೇಕ್‌ ಬಚ್ಚನ್ ಎಂಟ್ರಿ

Housefull 5: ಕಾಮಿಡಿ ಜರ್ನಿಯ ‌ʼಹೌಸ್‌ ಫುಲ್‌ʼ ಕುಟುಂಬಕ್ಕೆ ಅಭಿಷೇಕ್‌ ಬಚ್ಚನ್ ಎಂಟ್ರಿ

Team India’s T20 World Cup 2024 Jersey Leaked

T20 World Cup; ಹೊರಬಿತ್ತು ಭಾರತ ತಂಡದ ಜೆರ್ಸಿ ಫೋಟೊ: ಹೇಗಿದೆ ನೋಡಿ

Water Corridor: ಭಾರತಕ್ಕೆ ಅಗತ್ಯವಿದೆ ವಿಶೇಷ ವಾಟರ್‌ ಕಾರಿಡಾರ್‌!

Water Corridor: ಭಾರತಕ್ಕೆ ಅಗತ್ಯವಿದೆ ವಿಶೇಷ ವಾಟರ್‌ ಕಾರಿಡಾರ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.