ಜಲಲ ಜಲಧಾರೆ.. ಮಾಳದ ಹಸಿರ ಧರೆ


Team Udayavani, Jul 18, 2019, 5:00 AM IST

u-23

ಮಾಳ ಸಹ್ಯಾದ್ರಿಯ ಮಡಿಲಲಲ್ಲಿ ಇರುವ ಚಿಕ್ಕ ಊರು.. ಕೆಲವು ನದಿಗಳು ಹಾಗೂ ಅದರಲ್ಲೇ ಸೃಷ್ಟಿ ಆದ ಜಲಪಾತಗಳ ಪ್ರಕೃತಿ ರಮಣೀಯ ತಾಣ.. ಇದರೊಂದಿಗೆ ಬೆಸೆದು ಕೊಂಡಿರುವ ಇಲ್ಲಿನ ಜನಜೀವನ ಅಷ್ಟೇ ಸ್ವಾರಸ್ಯ.. ಮಾಳವೆಂಬ ಊರಿನ ಕಲ್ಪನೆಯೇ ಇರದ ನಾವು ಅಲ್ಲಿನ ಪ್ರಕೃತಿಯ ರಮಣೀಯ ದೃಶ್ಯವನ್ನು ಸವಿಯಲು ಹೊರಟೆವು.. ಬಸ್ಸಿನಿಂದ ಇಳಿದೊಡನೆಯೆ ಕಡಿದಾದ ರಸ್ತೆ..ಕಾಡಿನೊಳಗೆ ಸಾಗಿದಂತೆ ಪಕ್ಷಿಗಳ ಕಲರವ..

ಮಾರ್ಚ್‌ ತಿಂಗಳಿನಲ್ಲಿ ಪ್ರವಾಸದ ಯೋಜನೆ ಹಾಕಿದ್ದ ಪದವಿ ಗೆಳೆಯರ ಗಣಕ್ಕೆ ಜೂನ್‌ ತಿಂಗಳಿನವರೆಗೂ ಕಾರ್ಯಗತಗೊಳಿಸೋದು ಸಾಧ್ಯ ಆಗಿರಲಿಲ್ಲ ..ಅದ್ಹೇಗೋ ಜುಲೈ ಮೊದಲ ವಾರದಲ್ಲಿ ಪರ್ಯಟನೆಗೆ ದಿನ ನಿಗದಿ ಮಾಡಿದ್ದಾಗಿತ್ತು..ಅದಾಗಷ್ಟೆ ಮುಂಬೈನಿಂದ ಬಂದಿದ್ದ ನನಗೆ ಪ್ಲಾನ್‌ ಬಗ್ಗೆ ಸ್ಪಷ್ಟತೆ ಅಷ್ಟಾಗಿ ಇದ್ದಿರಲಿಲ್ಲ. ಕೊನೆಗೂ ಅಳೆದು ತೂಗಿ ಕಾರ್ಕಳದ ಬಳಿಯ ಮಾಳ ಎಂಬಲ್ಲಿಯ ಜೋಯಿಸರ ಗುಂಡಿ ಜಲಪಾತಕ್ಕೆ ತೆರಳುವುದು ಎಂಬ ನಿರ್ಧಾರ ಮಾಡಿದೆವು.

ಕಾಯುವ ಕರ್ತವ್ಯ
ನಾವು ಹೊರಟಿದ್ದು ಭಾನುವಾರ ಆದ ಕಾರಣವೋ ಏನೋ ಮಾಳಕ್ಕೆ ತೆರಳುವ ಬಸ್‌ಗಳು ಹೆಚ್ಚಾಗಿ ಲಭ್ಯ ಇರಲಿಲ್ಲ. ನಮ್ಮ ಪದವಿ ದಿನಗಳ ಸಹಾಪಾಠಿ ಓರ್ವಳು ಅದೇ ಊರಿನ ವಳಾಗಿದ್ದ ಕಾರಣ, ನಮ್ಮ ಪ್ರವಾಸದ ರೂಪುರೇಷೆ ತಯಾರಿಸಿದ್ದಳು. ಕಾದು ಸುಸ್ತಾದ ನಮಗೆ ಬಸ್‌ ಸಿಕ್ಕಿದ್ದು 12 ರ ಅಂಚಿಗೆ. ನಾವು ಬರೋ ಹಿಂದಿನ ವಿಪರೀತ ಸುರಿದ ತುಹಿನಧಾರೆ ನಾವು ಬಂದ ದಿನ ಸ್ವಲ್ಪ ವಿರಾಮ ತೆಗೆದುಕೊಂಡಿತ್ತು. ಆಕೆಯ ಮನೆಯಲ್ಲೇ ಮಧ್ಯಾಹ್ನದ ಭೋಜನ ಸವಿದು, ಜಲಪಾತದ ಜಲಕ್‌ ಪಡೆಯಲು ತೆರಳಿದೆವು. ನಮ್ಮ ಜತೆಗೆ ದಾರಿ ತೋರಿಸುವ ಸಲುವಾಗಿ ಸ್ಥಳೀಯ ಯುವಕರೀರ್ವರು ಸೇರಿಕೊಂಡರು.

ಜಲಲ ಜಲಧಾರೆ
ಜನ ಸಂಪರ್ಕ ಅಷ್ಟಾಗಿ ಇಲ್ಲದ ನಿರ್ಮಲ, ಸಲಿಲ ನರ್ತನ ಮನಸ್ಸಿಗೆ ತಂಪನ್ನೆರೆದಿತ್ತು. ಜಿಟಿ ಜಿಟಿ ಮಳೆ, ಹಾಲ್ನೊರೆಯಂಥಾ ಝರಿಯ ಧುಮ್ಮಿಕ್ಕುವ ದನಿ ಕಿವಿಗೆ ಇಂಪೆರೆದಿತ್ತು. ಸ್ಫಟಿಕ ಬಣ್ಣದ ನೀರು ಕಾಲನ್ನು ತೊಯ್ದರೆ, ತುಂತುರು ಮಳೆ ತಲೆಯನ್ನು ತೊಯ್ದು ಇಡೀ ವಾತಾವರಣ ಆಹ್ಲಾದಮಯ ಎನಿಸಿತ್ತು. ನಿಸರ್ಗದ ರಮಣೀಯ ದೃಶ್ಯಕ್ಕೆ ಫೋಟೋಶೂಟ್, ಸೆಲ್ಫಿ ಹಪಹಪಿಕೆಯೂ ನಡೆಯಿತು. ಜತೆಗೆ ಪ್ರವಾಸಿಗರು ನೀರಾಟ ಆಡೋವಾಗ ಎಚ್ಚರ ವಹಿಸೋದೂ ಅತ್ಯಗತ್ಯ. ಪಾಚಿ ಹಿಡಿದ ಬಂಡೆಗಳ ಮೇಲೆ ಓಡಾಡೋವಾಗ ಜಾರುವ ಸಾಧ್ಯತೆಯೂ ಇದೆ. ಜಲಪಾತದ ಸನಿಹದಲ್ಲಿ ಪರಶುರಾಮ ದೇವರ ಆಲಯ ಇದ್ದು, ಸ್ಥಳದ ಮೆರುಗು ಇನ್ನಷ್ಟು ಹೆಚ್ಚಿಸಿದೆ.

ನೆನಪಿಗೆ ಹೊಳಪೆರೆದ ಜಾಗ
ಕಳೆದ ಬಾರಿ ಇದೇ ಸಮಯದಲ್ಲಿ ಗೆಳೆಯರ ಗಣ ಕಾರಿಂಜ ಪ್ರವಾಸ ಮಾಡಿದ್ದೆವು. ಈ ಬಾರಿ ಮಾಳ ಎಂಬ ದೂರದೂರಿಗೆ ಬಂದು ಸಮಯ ಕಳೆದಿದ್ದು, ಮನಸ್ಸಿಗೆ ಮುದ ನೀಡಿತ್ತು. ಸದಾ ಸಿಗದಿರುವ ಪದವಿ ಮಿತ್ರರ ಸಮ್ಮಿಲನ ಇನ್ನಷ್ಟು ವಿಶಿಷ್ಟ ಎನಿಸಿತ್ತು. ಗೆಳತಿ ಮನೆ ಊಟ ,ಮಾಳದ ಗ್ರಾಮದ ಹಸಿರೈಸಿರಿಯ ನೋಟ, ಪ್ರಕೃತಿಯ ಅನೂಹ್ಯ ಜಲಪಾತದ ಓಟ ನಗರದ ದಿನನಿತ್ಯದ ಜಂಜಾಟದ ನೋವು ಮರೆಸಿತ್ತು. ಮನ ಉಲ್ಲಸಿತಗೊಂಡಿತ್ತು.

ರೂಟ್ ಮ್ಯಾಪ್‌

·ಪುತ್ತೂರಿನಿಂದ ಕಾರ್ಕಳಕ್ಕೆ 76.7 ಕಿ.ಮೀ., ಮಂಗಳೂರಿನಿಂದ ಕಾರ್ಕಳ 52.7 ಕಿ.ಮೀ.

·ಕಾರ್ಕಳದಿಂದ ಮಾಳಕ್ಕೆ 16.7 ಕಿ.ಮೀ.

·ಕಾರ್ಕಳದಿಂದ ಮಾಳ ಕಡೆಗೆ ಹೋಗಲು ಖಾಸಗಿ ಬಸ್‌ ಗಳು ಲಭ್ಯ ಇವೆ.

·ಅದಲ್ಲದಿದ್ದರೆ ಕಾರ್ಕಳದಿಂದ ಕಳಸದ ಕಡೆ ಹೋಗುವ ಬಸ್‌ ಮೂಲಕ ತೆರಳಿ, ಚೆಕ್‌ಪೋಸ್ಟ್‌ ಬಳಿ ಇಳಿಯಬಹುದು.

••ಸುಭಾಸ್‌ ಮಂಚಿ

ಟಾಪ್ ನ್ಯೂಸ್

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.